ಮನೆ ರಾಜ್ಯ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ – 22 ಮಂದಿ ವಿರುದ್ಧ ಶಿಕ್ಷಕನಿಂದ ಎಫ್‌ಐಆರ್‌

ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ – 22 ಮಂದಿ ವಿರುದ್ಧ ಶಿಕ್ಷಕನಿಂದ ಎಫ್‌ಐಆರ್‌

0

ಹಾವೇರಿ : ಜಿಲ್ಲೆಯಲ್ಲಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಪ್ಪಲಿ ಹಾರ ಹಾಕಿ ಶಿಕ್ಷಕನ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಡಿ.10ರಂದು ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ಸವಣೂರು ಠಾಣೆಗೆ ದೂರು ನೀಡಿದ್ದರು. ಅದರನ್ವಯ ಶಿಕ್ಷಕ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಶಿಕ್ಷಕ ಜಗದೀಶ್ ಸಹ ದೂರು ನೀಡಿದ್ದಾರೆ.

ಶಾಲೆಯಲ್ಲಿ ಶಿಕ್ಷಕನನ್ನು ಥಳಿಸಿದವರು, ಚಪ್ಪಲಿಯಿಂದ ಹೊಡೆದವರು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರನ್ನು ವಿಡಿಯೋ ಆಧರಿಸಿ ಪತ್ತೆ ಮಾಡಲಾಗಿದ್ದು, ಅಪಮಾನ ಮಾಡಿ, ಜೀವಬೆದರಿಕೆಯೊಡ್ಡಿರುವ ಆರೋಪದಡಿ 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈವರೆಗೂ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ಯಾವುದೇ ದೂರು ನೀಡಿಲ್ಲ. ಶಾಲೆ ಶಿಕ್ಷಕರ ನಡುವೆ ವೈಮನಸ್ಸು ಹಿನ್ನೆಲೆ ಈ ರೀತಿ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಸವಣೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸವಣೂರಿನ ನಿವಾಸಿಗಳಾದ ಸಾದಿಕ್ ಮನಿಯಾರ್, ಜಿಶನ್ ನಾಗದ, ಅಬ್ದುಲಗನಿ ಪರಾಸ್, ಫಾಜಿಲ್‌ಅಹ್ಮದ್ ಮನಿಯಾರ್, ಅತ್ತಾವುಲ್ಲ ಖಾನ್ ಭಕ್ಷಿ, ಸುಲೇದ್ ಮನಿಯಾರ್, ಮೋಷಿನ್ ಖತೀಬ್, ಆಸಿಫ್ ದುಖಂದರ್, ಇಮ್ರಾನ್ ಖಾಂಜಾಡೆ, ಮಹಮ್ಮದ್ ಅಸಂ ತೆಲಾರ್, ಅಮಿರಾಖಾನ್ ಗುತ್ತಲ, ಅಹ್ಮದ್‌ಖಾನ್ ಖಾಂಜಾಡೆ, ಅಲ್ಲಾಭಕ್ಷ ಚೋಪದಾರ್, ದಾದಾಪೀರ ಮೊಹಮ್ಮದ್ ಅಸೀಮ್ ಕಿಲ್ಲೇದಾರ, ಅಶೋಕ ಮನ್ನಂಗಿ, ಮಹಮ್ಮದ್-ಫೀಕ್ ಚುಡಿಗಾರ, ಆಸಿಫ್ ಅಹ್ಮದ್ ದುಖಾಂದಾರ್, ಅಲ್ತಾಫ್ ಮಕಾಂನದಾರ, ಮಹಮ್ಮದ್ ಹಷತ್ ಕಿಲ್ಲೇದಾರ, ಮಹಮ್ಮದ್ ಸಾದಿಕ್ ಚೋಪದಾರ್, ದಾದಾಪೀರ ತಂಬುಳಿ, ಮಹಮ್ಮದ್‌ಹನೀಫ್ ದುಖಾಂದಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.