ಮನೆ ಕಾನೂನು ಲೈಂಗಿಕ ಶೋಷಣೆ: ಅಪರಾಧಿಗೆ ಶಿಕ್ಷೆ

ಲೈಂಗಿಕ ಶೋಷಣೆ: ಅಪರಾಧಿಗೆ ಶಿಕ್ಷೆ

0

ಮಂಡ್ಯ:17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಲೈಂಗಿಕ ಶೋಷಣೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಪೋಕ್ಸೋ ಕಾಯ್ದೆಯಡಿ ಅಂದಿನ ಶಿವಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಎಂ.ಜಯಲಕ್ಷ್ಮಿ ಅವರು ದೋಷಾರೋಪಣ ಪತ್ರ ದಾಖಲಿಸಿದ್ದರು.

Join Our Whatsapp Group


ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಧೀಶರಾದ ಶಬಾನಾ ಬೇಗಂ ಲಾಡ್‌ಖಾನ್ ಅವರು ವಿಚಾರಣೆ ನಡೆಸಿ ಮೊದಲನೇ ಆರೋಪಿಗೆ ಕಲಂ 354-ಡಿ ಐ.ಪಿ.ಸಿ ಹಾಗೂ ಕಲಂ 12ರ ಅಡಿ 2 ವರ್ಷ ಸಾದಾ ಸಜೆ ಮತ್ತು 20 ಸಾವಿರ ದಂಡ ಹಾಗೂ ಮೊಲನೇ ಆರೋಪಿ ಸಾಗರ್, 2ನೇ ಆರೋಪಿ ಕುಳ್ಳಯ್ಯ, 3ನೇ ಆರೋಪಿ ರಾಜೇಶ, 4ನೇ ಆರೋಪಿ ದೊಡ್ಡಸಿದ್ದಯ್ಯ ಇವರಿಗೆ ಕಲಂ 504,341,324,506 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಕಲಂ 504 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ತಲಾ 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. 5ನೇ ಆರೋಪಿ ಪುಟ್ಟತಾಯಿ, 6ನೇ ಆರೋಪಿ ನಾಗಮ್ಮ ಇವರಿಗೆ ಕಲಂ 504,323 ರೆ/ವಿ 34ರ ಐ.ಪಿ.ಸಿ ಕಾಯಿದೆ ಅಪರಾದಕ್ಕೆ ಅಪರಾಧಿಗಳು ಎಂದು ತೀರ್ಪು ನೀಡಿದ್ದು, ಇವರಿಗೆ ಒಳ್ಳೆಯ ನಡತೆ ಮತ್ತು ಶಾಂತಿಯನ್ನು ಪಾಲನೆ ಮಾಡುವಂತೆ 2 ವರ್ಷಗಳ ಅವಧಿಗೆ ಜಾಮೀನು ಹಾಗೂ ಮಚ್ಚಳಿಕೆಯನ್ನು ನೀಡುವಂತೆ ಆದೇಶಿಸಿರುತ್ತದೆ.
ನೊಂದ ಬಾಲಕಿಗೆ 30 ಸಾವಿರ ಪರಿಹಾರ ನೀಡಲು ಆದೇಶಿಸಿರುತ್ತಾರೆ.ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ ಪೂರ್ಣಿಮ ಅವರು ವಾದ ಮಂಡಿಸಿರುತ್ತಾರೆ.