ರಾಮನಗರ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಮಹಿಳೆಗೆ ಚನ್ನಪಟ್ಟಣ ತಾ. ಬಿಜೆಪಿ ಅಧ್ಯಕ್ಷ ಟಿ.ಎಸ್.ರಾಜು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೂಬಿನಕೆರೆ ಗ್ರಾಮದಲ್ಲಿ ಶನಿವಾರ ಗಣೇಶ ವಿಸರ್ಜನೆ ಮೆರವಣಿಗೆ ನೋಡುತ್ತ ನಿಂತಿದ್ದ ಗೃಹಿಣಿಯನ್ನು ಅವರ ಮನೆ ಬಳಿ ಹಿಂಬದಿಯಿಂದ ಬಂದು ಟಿ.ಎಸ್.ರಾಜು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಮಹಿಳೆಯ ಫೋಟೋವನ್ನು ತೆಗೆದಿದ್ದಾನೆ.
ಈ ಘಟನೆಯಿಂದ ವಿಚಲಿತಳಾದ ಮಹಿಳೆ, ತನ್ನ ಅಣ್ಣನಿಗೆ ಮಾಹಿತಿ ನೀಡಿದ್ದು, ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮಾನತು: ಘಟನೆ ಹಿನ್ನೆಲೆಯಲ್ಲಿ ತಾ.ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಟಿ.ಎಸ್.ರಾಜು ಅವರನ್ನು ಅಮಾನತುಗೊಳಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಆದೇಶ ಹೊರಡಿಸಿದ್ದಾರೆ. ರಾಜು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Saval TV on YouTube