ಮಂಡ್ಯ: ನಗರದ ಪೊಲೀಸ್ ಕಾಲೋನಿಯ 9ನೇ ವಾರ್ಡಿನಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಾಸಕ ಪಿ.ರವಿಕುಮಾರ್‌ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, 20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ನಾನು ಸಹ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ, ನೀವು ಸಂಸದರಾಗಿ ಲಕ್ಷಲಕ್ಷ ಲೀಡ್ ತೆಗೆದುಕೊಂಡಿದ್ದೀರಲ್ಲ ನೀವು ಕೂಡ ಕೆಲಸ ಮಾಡಿ ಯಾರು ಬೇಡ ಎಂದವರು ಎಂದು ಹರಿಯಾಯ್ದರು.
ಮೈಷುಗರ್ ಶಾಲೆ ಕಟ್ಟಡವನ್ನೂ ಅಭಿವೃದ್ಧಿ ಪಡಿಸೋಣ, ನಾನು ಸಹ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ, ಶಾಲೆ ಉಳಿವಿಗೆ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಹ ಶಾಲೆ ಉಳಿಸಿಕೊಳ್ಳಲು ಸಹಕರಿಸಲಿ ಎಂದು ತಿಳಿಸಿದರು.
ಲಾಟರಿ ಗೀಟರಿ ನಮಗೆ ಬೇಕಾಗಿಲ್ಲ, ಅಭಿವೃದ್ಧಿಯಷ್ಟೇ ಬೇಕು. ನಿಖಿಲ್ ಹುಡುಗರು ಮಾತನಾಡುವಾಗ ಪ್ರಜ್ಙೆ ಇಟ್ಟುಕೊಂಡು ಮಾತನಾಡಲಿ, ನಾನು ಎರಡು ಸಾರಿ ಲಾಟರಿ ತೆಗೆದುಕೊಂಡೆ ಈಗ ಬಂಪರ್ ಹಾಗಿ ಹೊಡೆದಿದೆ, ನಿಮ್ಮ ನಿಖಿಲ್ ಮೂರು ಬಾರಿ ಲಾಟರಿ ತೆಗೆದುಕೊಂಡರು ಯಾಕೆ ಬಂಬರ್ ಲಾಟ್ರಿ ಒಡೆಯಲಿಲ್ಲ, ಇಷ್ಟೆಲ್ಲಾ ಮಾತನಾಡುವ ಅವಶ್ಯಕತೆ ಇದಿಯಾ, ನನಗೇನೇ ಇದ್ದರೂ ಅಭಿವೃದ್ಧಿಯೊಂದೇ ಮಂತ್ರ ನೀವು ಮಾಡಿ ನಾವು ಮಾಡೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿವೈಎಸ್‌ಪಿಗಳಾದ ರಾಚಯ್ಯ, ಲಕ್ಷ್ಮೀನಾರಯಣಪ್ರಸಾದ್, ನಗರಸಭೆ ಸದಸ್ಯರಾದ ಗೀತಾ ಕುಮಾರಸ್ವಾಮಿ, ಎಚ್.ಎಸ್.ಮಂಜು, ಶ್ರೀಧರ್, ಶಿವಪ್ರಕಾಶ್, ಜಾಕೀರ್ ಫಾಷ, ಮುಡಾ ಅಧ್ಯಕ್ಷ ನಯೀಮ್, ಮುಖಂಡರಾದ ಹಾಲಹಳ್ಳಿ ರುದ್ರಪ್ಪ, ಅಭಿಲಾಷ್ ಭಾಗವಹಿಸಿದ್ದರು.














