ಮನೆ ದೇವಸ್ಥಾನ ಶಾಕ್ತೇಯ (ಕಾಳಿ – ಭಗವತಿ) ಕಾವ್ ಗಳು

ಶಾಕ್ತೇಯ (ಕಾಳಿ – ಭಗವತಿ) ಕಾವ್ ಗಳು

0

ಕೇರಳದಲ್ಲಿ ಮೊಟ್ಟಮೊದಲಿಗೆ ದೇವಿ ಭಗವತಿಯ ಆರಾಧನೆಯೇ ಜರುಗುತ್ತಿತ್ತು. ಇಲ್ಲಿಗೆ ಬ್ರಾಹ್ಮಣರ ಆಗಮನದ ನಂತರ ಕೆಲವು ದೇವಿಕಾವ್ ಗಳು ದೇವಸ್ಥಾನಗಳಾದವು. ಅಸುರಕ್ರಿಯೆಯನ್ನ ಕೈ ಬಿಟ್ಟು ದೇವಕ್ರಿಯೆಯ ಕ್ರಮದ ಉಪಾಸನೆಯಿಂದಾಗಿ ಈ ಕ್ಷೇತ್ರಗಳು ಪ್ರಸಿದ್ಧಿಗೆ ಬಂದವು ಎಂದು ಚರಿತ್ರೆಯಿಂದ ತಿಳಿಯಬಹುದಾಗಿದೆ.    ಆದಿದ್ರಾವಿಡ ಜನಾಂಗದವರ ಆರಾಧ್ಯಮೂರ್ತಿ ಮಹಾಕಾಳಿಯಾಗಿದ್ದಳು. ನಾಗಾರಾಧನೆಯಿಂದಲೂ ಇದು ಪುರಾತನದ್ದಾಗಿದೆ. ಭಗವತಿ, ಕೊಠ್ಠವೈ, ಕಾಳಿ, ನೀಲಿ, ಕುರುಂಬ, ಮಾರಿಯಮ್ಮ, ಮುತ್ತಿ, ಚಾಮುಂಡಿ, ಚುಡಲ, ಭದ್ರಕಾಳಿ, ಕಂಠಕಾಳಿ, ಕಣ್ಣಗಿ ಇತ್ಯಾದಿ ಹೆಸರುಗಳಿಂದ ಕಾಳಿಯಾರಾಧನೆ ನಡೆಯುತ್ತಿತ್ತು.        

ಕಾಳಿ ಕಾವ್ ಗಳು ಮೊದಲಿಗೆ ವನಗಳಲ್ಲಿ ಮತ್ತು ಜನವಸತಿ ಇಲ್ಲದಲ್ಲಿ ಸ್ಥಾಪಿತವಾದವು. ಹಾಗಾಗಿ ಅದನ್ನು ವನದೇವತೆ ಎಂದು ಕರೆದರು. ನಾಲ್ಕು ದಿಕ್ಕುಗಳಿಂದಲೂ ಗಾಳಿ, ಮಳೆ, ಬಿಸಿಲುತಾಗುವಂತೆ ಸಂಕಲ್ಪವನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆನಂತರ ಆಚಾರದವರಿಗೆ ಮತ್ತು ಭಕ್ತರಿಗೆ ಸೌಕರ್ಯಕ್ಕೋಸ್ಕರ, ಚಪ್ಪರ, ಮಾಡು, ಗೋಪುರ ಇತ್ಯಾದಿಗಳ ನಿರ್ಮಾಣವಾಯಿತಾದರೂ ಹೆಸರು ಮಾತ್ರ ಕಾವುಗಳೆಂದೇ ಉಳಿದಿದೆ ಮೇಲು ಮಾಡು ಇಲ್ಲವೇ ಕಾವ್ ಗಳೆಂದಲೇ ಪ್ರಥಮವಾಗಿ ಕೇರಳದ ಕ್ಷೇತ್ರ ಸಂಕಲ್ಪವು ತೊಡಗಿತು ಎಂದು ಹೇಳಲಾಗಿದೆ.

ಕೇರಳದಲ್ಲಿ ಪ್ರಧಾನವಾಗಿರುವ 13 ಶಾಕ್ತೇಯ ಕಾವ್ ಗಳನ್ನು ಕೆಳಗೆ ಕಾಣಿಸಲಾಗಿದೆ.

1 ತಿರುವರ್ ಕಾಟ್ ಕೌವ್ (ಮಡಕಾಯಿ ಕಾವ್) –  ಕಣ್ಣೂರು ಜಿಲ್ಲೆ.

2. ತಿರುವಂಜೇರಿ (ಶ್ರೀವಾಯುಂಜೇರಿ) ಕಾವ್ – ಕಣ್ಣೂರು ಜಿಲ್ಲೆ.

3. ಮನ್ನಂಪುರತ್ತ್ ಕಾವ್, ನೀಲೇಶ್ವರ – ಕಾಸರಗೋಡು ಜಿಲ್ಲೆ,

4. ಕಳಿಯಾಂಬಳ್ಳಿ ಕಾವ್, ಬಡಗರ –  ಕೋಯಿಕ್ಕೋಡು ಜಿಲ್ಲೆ.

5. ಪನಯನ್ನಾರ್ ಕಾವ್ ಮಾನ್ನಾರ್-ಪರುಮಲ – ಆಲಪ್ಪುಯ ಜಿಲ್ಲೆ.

6. ಮತ್ತೂರ್ ಕಾವ್, ತಿರುವಲ್ಲ – ಪತ್ತನಂತಿಟ್ಟ ಜಿಲ್ಲೆ.

7. ಕೊಡಿಕುನ್ನತ್ ಕಾವ್, ಪಟ್ಟಾಂಬಿ – ಪಾಲಕ್ಕಾಡ್ ಜಿಲ್ಲೆ

8. ಕೊಲಂ ಪಿಶಾರಿಕಾವ್, ಕೊಯಿಲಾಂಡಿ – ಕೋಯಿಕ್ಕೋಡು ಜಿಲ್ಲೆ.

9. ಕಳರಿವಾದುಕ್ಕಲ್ ಕಾವ್, ವಳಪಟ್ಟಣಂ – ಕಣ್ಣೂರು ಜಿಲ್ಲೆ.

10. ಮಾಮಾನಿಕುನ್ನು ಕಾವ್, ಇರಿಕ್ಕೂರ್ – ಕಣ್ಣೂರು ಜಿಲ್ಲೆ,

11.  ಶ್ರೀ ವಳುನಾಟ್ಟಮ್ಮ ಕಾವ್, ಕಲ್ಲಿಕೋಟೆ – ಕೋಯಿಕ್ಕೋಡು ಜಿಲ್ಲೆ.

12. ತಿರುಮಾಂತಾಂಕುನ್ನು ಕಾವ್, ಅಂಙಾಡಿಪ್ಪುರಂ – ಮಲಪ್ಪುರಂ ಜಿಲ್ಲೆ.

13. ಕೊಡುಂಙಲ್ಲೂರ್ ಕಾವ್, ಕೊಡುಂಙಲ್ಲೂರ್ – ತ್ರಿಶ್ಮೂರ್ ಜಿಲ್ಲೆ.

ಮೇಲ್ಕಾಣಿಸಿದ ಶಾಕ್ತೇಯ ಕಾವ್ಯಗಳಲ್ಲಿ ಮಾಡಾಯಿಕಾವ್ ಕ್ಷೇತ್ರವು ಹೆಚ್ಚಿನ ಪ್ರಸಿದ್ಧಿಯನ್ನು ಪಡೆದು ಜಾತಿ ಮತ ಭೇದವಿಲ್ಲದೆ ಸಂಕಷ್ಟ ನಿವಾರಣೆಗಾಗಿ ಪರದೇಶದಿಂದಲೂ ಭಕ್ತರಾಗಮಿಸುತ್ತಾರೆ. ಕೇರಳದ ಪ್ರಸಿದ್ಧವಾದ ಹೆಚ್ಚಿನ ಕಾವು ಕ್ಷೇತ್ರಗಳಲ್ಲಿರುವಂತೆ ಮಾಡಾಯಿಕಾವ್ ಕ್ಷೇತ್ರಕ್ಕೂ ತನ್ನದೇ ಆದ ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆಗಳಿವೆ. ಮಾರ್ಕಂಡೇಯ ಪುರಾಣದ ʼಭದ್ರಕಾಳಿ ಮಹಾತ್ಮೆʼಯಲ್ಲೂ, ಮಲಯಾಳದ ʼದಾರಿಕವಧಂ ಪಾಟ್ಟುʼ, ʼಭಗವತಿ ಪಾಟ್ಟುʼ, ʼಕಾಳಿ ನಾಟಕಂʼಗಳಲ್ಲೂ ಭದ್ರಕಾಳಿಯ ಕುರಿತಾಗಿರುವ ವರ್ಣನೆಗಳಿವೆ.