ಮನೆ ಜ್ಯೋತಿಷ್ಯ ಶನಿ ಗ್ರಹವು ನಕ್ಷತ್ರ ಚರಣ

ಶನಿ ಗ್ರಹವು ನಕ್ಷತ್ರ ಚರಣ

0

 ಶನಿ ಗ್ರಹವು ಅಶ್ವಿನಿ ನಕ್ಷತ್ರದ ಒಂದನೇ ಚರಣದಲ್ಲಿ ಸಂಚರಿಸುವಾಗ ಎಳ್ಳು, ಎಣ್ಣೆ, ಸೇಂಗಾ, ಕುಸುಂಬೆ, ಹಿತ್ತಾಳೆ, ಕಂಚು, ಔಡಲ ಮೊದಲಾದವು ತೇಜುಯು ಎರಡನೇ ಚರಣದಲ್ಲಿ ಇವುಗಳು ಮಂದಿ ಮೂರನೇ  ಚರಣದಲ್ಲಿ ಹಿಂದು ಮುಂದಾಗುತ್ತವೆ. ನಾಲ್ಕನೇ ಚರಣದಲ್ಲಿ ಸಾಧಾರಣ ತೇಜಿಯು.

Join Our Whatsapp Group

 ಶನಿಗ್ರಹವು ಭರಣಿ ನಕ್ಷತ್ರದಲ್ಲಿ ಒಂದು ಹಾಗೂ ಎರಡನೇ ಚರಣದಲ್ಲಿ  ಸಂಚರಿಸುವಾಗ ಅಕ್ಕಿ ಆಹಾರ ಧಾನ್ಯ ಹತ್ತಿ, ಆರಳೆ, ಬಿಲ್ಲ, ಸಕ್ಕರೆ, ತುಪ್ಪ,ಎಣ್ಣೆ, ಮಸಾಲೆ ಪದಾರ್ಥಗಳು ದಿನದಿಂದ ದಿನಕ್ಕೆ ತೇಜಿಯಾಗುವವು. ಇವೇ ವಸ್ತುಗಳು ಮೂರನೇ ಚರಣದಲ್ಲಿ ಇನ್ನೂ ಹೆಚ್ಚು ತೇಜಿಯಲ್ಲಿ ಮಾರುವವು. 4ನೇ ಚರಣದಲ್ಲಿ ತೇಜಯಾದ ಇವೇ ವಸ್ತುಗಳ ಮಂದಿಯಲ್ಲಿ ಮಾರುವವು.

 ಚಂದ ಶೃಂಗೋದೇನ ಮೇಲಿಂದ ತೇಜಿ ಮಂದಿ ವಿಚಾರವು ಯಾವುದೇ ಮಸದಲ್ಲಾಗಲಿ ಶುಕ್ಲ ಪಕ್ಷದ ಬಿದಗಿ ತಿಥಿಯ ದಿನ ಚಂದ್ರನು ಆಕಾಶದಲ್ಲಿ ಕಾಣಲೇಬೇಕು. ಆಗ ಅವನ ಶೃಂಗವು ಯಾವ ದಿಕ್ಕಿನ ಕಡೆಗೆ ಎತ್ತರವಾಗಿರುವದೋ ಅದರ ಮೇಲಿಂದ ಪದಾರ್ಥಗಳ ತೇಜಿ ಮಂದಿಯನ್ನು ನಿರ್ಣಯಿಸಬಹುದು. ಚಂದ್ರನ ಶೃಂಗವು ಮೀನ, ಮೇಷ,  ತುಲಾ ರಾಶಿಯಲ್ಲಿ ದಕ್ಷಿಣ ದಿಕ್ಕಿಗೆ ಎತ್ತರವಾಗಿದ್ದರೆ ಕಾಳಿನ ಧಾರಣಿ ಮಂದಿಯಾಗುವುದು. ಕನ್ಯಾ, ಮಿಥುನ,ವೃಷಭ,ರಾಶಿಯಲ್ಲಿ ಚಂದ್ರನ ಶೃಂಗಗಳು ಸಮವಾಗಿದ್ದರೆ ಧಾನ್ಯದ ವ್ಯಾಪಾರವು ಸಮತ್ವದಲ್ಲಿ ಉಳಿಯುವುದು. ಧನುಸ್ಸು, ಮಕರ, ಕುಂಭ, ಕರ್ಕ, ಸಿಂಹ,ವೃಶ್ಚಿಕ, ರಾಶಿಯಲ್ಲಿ ಚಂದ್ರನ ಶೃಂಗವು ಉತ್ತರ ದಿಕ್ಕಿಗೆ ಎತ್ತರವಾಗಿದ್ದರೆ ಧಾನ್ಯದ ಮಾರಾಟವು ತೇಜಿಯಲ್ಲಿ ಮುಂದುವರೆಯುವುದು.