ಮನೆ ಜ್ಯೋತಿಷ್ಯ ಶತಭಿಷಾ ನಕ್ಷತ್ರ ಮತ್ತು ಜಾತಕ

ಶತಭಿಷಾ ನಕ್ಷತ್ರ ಮತ್ತು ಜಾತಕ

0

ಶತಭಿಷಾ ನಕ್ಷತ್ರದ ಕ್ಷೇತ್ರವ್ಯಾಪ್ತಿ9 ಅಂಶ 40 ಕಲಾದಿಂದ 20 ಅಂಶ ಕುಂಭರಾಶಿಯಲ್ಲಿ ರಾಶಿ ಸ್ವಾಮಿ- ಶನಿ, ನಕ್ಷತ್ರಸ್ವಾಮಿ – ರಾಹು, ನಕ್ಷತ್ರ ದೇವತೆ -ವರುಣ, ತಾರಾಸಮೂಹ – 100, ಆಕಾಶ ಭಾಗ – ಮಧ್ಯ, ಅಧ್ಯನಾಡಿ, ಅಶ್ವಯೋನಿ, ರಾಕ್ಷಸಗಣ, ನಾಮಾಕ್ಷರ – ಗೋ, ಸಾ, ಸೀ, ತು. ಈ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ – ಮಂಡಿಗಳು ಮತ್ತು ಹಿಮ್ಮಡಿಗಳ ಮಧ್ಯ ಭಾಗ, ಮೀನುಖಂಡಗಳು.

Join Our Whatsapp Group

* ಶತಭಿಷಾ ನಕ್ಷತ್ರದ ಜಾತಕನ ಸ್ವರೂಪ :

       ತಿಳುವಳಿಕಸ್ತ್ರ ಶೀಘ್ರಕೋಪಿ, ಬಲಿಷ್ಠ ಸ್ವತಂತ್ರ, ಮೌಲ್ಯಯುಕ್ತ ಕಾರ್ಯಗಳನ್ನು ಮಾಡುವವ, ಧೈರ್ಯವಂತ, ಅತಿವಾದಿ, ನಿರಂತರ ಪ್ರಯತ್ನಶೀಲ, ದೃಢತೆಯುಕ್ತ ಅಕರ್ಮಣ್ಯ, ಆಲಸಿ, ಆರಾಮ ಪ್ರವೃತ್ತಿ ಅಧಿಕಾರ ನಡೆಸುವವ, ಅಧಿಕ ರಜೆಗಳನ್ನು ಕಳೆಯುವ ಇಚ್ಚುಕ, ಏಕಾಂತಪ್ರಿಯ, ವಿಜ್ಞಾನ ಮತ್ತು ತಾಂತ್ರಿಕ ಕಾರ್ಯಗಳಲ್ಲಿ ಅಭಿರುಚಿಯಿರುವವ, ಹಳೆಯ ವಸ್ತುಗಳ ಅಥವಾ ಕಲಾಕೃತಿಗಳ ಪ್ರೇಮಿ, ಮಿಶ್ರಣಕರ್ತಾ, ಕೂಟನೀತಿಜ್ಞ, ಲೋಭಿ, ಉಗ್ರಮನೋವೃತ್ತಿ ಮತ್ತು ಮಹತ್ವದ ಕಾರ್ಯಗಳಿಂದ ಪ್ರಶಂಸಿತ, ತಪ್ಪುಗಳನ್ನು ಹುಡುಕುವವ, ಚಿತ್ರಕಲೆಯಲ್ಲಿ ಅಭಿರುಚಿಯುಳ್ಳವ, ಮರೆಗುಳಿ ಪ್ರವೃತ್ತಿಯವ

* ಶತಭಿಷಾ ಜಾತಕನ ಉದ್ಯೋಗ :

ವಿಜ್ಞಾನಿ, ಜಾದೂಗಾರ, ವಿಸ್ಮಯಕಾರಕ ಕಾರ್ಯಗಳನ್ನು ಬಲ್ಲವ ಗುರುತ್ವಾಕರ್ಷಣೆ, ಕಂಪ್ಯೂಟರ್, ದಿಗ್ದರ್ಶಕ, ಡೈನಾಮಿಕ್ಸ್, ವಿದ್ಯುತ್ ಕಾರ್ಯ, ಶಕ್ತಿ ಸಿದ್ಧಾಂತ, ವಾಯುಯಾನ ವಿಭಾಗ, ಅಂಗಚ್ಛೇದನ, ಖಗೋಳಜ್ಞ, ಜೋತಿಷಿ ಪುರಾತನ ಸಂಸ್ಕೃತಿಯ ಸಂಶೋಧಕ, ಪುರಾಣ, ಪುರಾತನ ವಸ್ತುಗಳ ವ್ಯಾಪಾರಿ, ಪರಾ ಮನೋವಿಜ್ಞಾನ, ಇತಿಹಾಸ, ದಿನಸಿ ಅಂಗಡಿ, ಜನಗಣತಿ, ಸೆನ್ಸಾರ್, ಅಂಕಿ-ಅಂಶ, ಶೇರು ಮಾರುಕಟ್ಟೆ, ತಂತ್ರಜ್ಞ, ಜೈಲು ಖರೀಕ್ಷಕ, ತೈಲವಿಭಾಗ, ಅನುವಾದ, ಪಾಂಡುಲಿಪಿ ಸಂಶೋಧನೆ, ಪ್ರಯೋಗ ಶಾಲೆ, ಸಂಗ್ರಹಾಲಯ, ಕಾರ್ಖಾನೆ, ವಿಶ್ಲೇಷಕ, ನಕಾಶೆ ಇತ್ಯಾದಿಗಳನ್ನು ತಯಾರಿಸುವವ, ಯೋಜನೆಗಳ ಕರ್ತೃ, ಚಾಯಾಚಿತ್ರ, ಮಣ್ಣು ಶಿಲೆ, ಸಂಶೋಧನಾ ಕ್ಷೇತ್ರ.

 ★ ಶತಭಿಷಾ ಜಾತಕಾನ ರೋಗ  :

ಅನಿದ್ರೆ ವಾತರೋಗ, ಸಂಧಿವಾತ, ಹೃದರು ಕಂಪನ, ಹೃದಯಶೂಲೆ ಎದೆಯಲ್ಲಿ ಬಾವು ಎಗ್ಜಿಮಾ, ಕುಷ್ಠ ಕಂಪನ, ರಕ್ತ ವಿರೊತ್ತಡ, ಮೂಳೆ ಮುರಿತ.

 ವಿಶೇಷ :

       ಶನಿಯ ರಾತ್ರಿ ಮತ್ತು ರಾಹುವಿನ ನಕ್ಷತ್ರದಲ್ಲಿ ಜನಿಸಿದ ಶತಭಿಷಾದ ಅಧಿಕಾಂಶ ಜಾತಕರು ಸೇವಾಮನೋಭಾವದವರು, ಸ್ವಚ್ಛ ಹಾಗೂ ಪವಿತ್ರ ಕಾರ್ಯ ಮಾಡುವವರು ಧಾರ್ಮಿಕ, ಚಂಚಲ ಪ್ರವೃತ್ತಿ ಪ್ರಾಯಶಃ ಕಾರ್ಯಕ್ಷೇತ್ರ ಪರಿವರ್ತನೆ

ಮಾಡುವವರು, ವಿವಿಧ ವಿಜ್ಞಾನಗಳಲ್ಲಿ ಪಾರಂಗತ ಮತ್ತು ಯೋಚಿಸದೆ, ವಿಚಾರ ಮಾಡದೆ ಕಾರ್ಯ ನಿರ್ವಹಿಸುವವರಾಗುತ್ತಾರೆ. ಇಂಥ ಜಾತಕರು ತಾವು ಮಾಡಿದ ಕಾರ್ಯಗಳಲ್ಲಿ ಕೆಲವೊಮ್ಮೆ ಹಾನಿ ಅನುಭವಿಸುತ್ತಾರೆ. ಯಂತ್ರ ಮತ್ತು ಯಾಂತ್ರಿಹ ಕಾರ್ಯಗಳಲ್ಲಿ ಅಭಿರುಚಿಯಿರುತ್ತದೆ ಮತ್ತು ಅದೇ ಕ್ಷೇತ್ರದಲ್ಲಿ ಸಫಲರೂ ಆಗುತ್ತಾರೆ. ಇವರು ಭ್ರಮಣಶೀಲರು, ನೌಕರಿ ಅಥವಾ ವ್ಯಾಪಾರದಲ್ಲಿ ಭ್ರಮಣ ಮಾಡುವ ಅವಕಾಶಗಳು ಪ್ರಾಪ್ತಿಯಾಗುತ್ತಿರುತ್ತವೆ. ಶತಭಿಷಾದ ಜಾತಕರು ಪ್ರಾಕೃತಿಕವಾಗಿ ಉಚ್ಚ ವಿಚಾರದವರು, ಮಹತ್ವಾಕಾಂಕ್ಷಿಗಳು, ಸಾತ್ವಿಕ ಜೀವನ ನಡೆಸುವವರು, ಸದಾಚಾರಿಗಳು ಸಾಧು-ಸಂತರ ಪ್ರೇಮಿ ಹಾಗೂ ಕಟ್ಟಾ ಧಾರ್ಮಿಕರಾಗಿರುತ್ತಾರೆ. ಅದ್ಭುತ ಕಲ್ಪನಾಶಕ್ತಿ ಯಿಂದ ಇವರು ವಿಶೇಷವಾಗಿ ಪ್ರಭಾವಿತರಾಗುತ್ತಾರೆ. ಕಲೆ, ಚಿತ್ರಣ, ಅಥವಾ ಕಲಾ ಲೇಖನದಲ್ಲಿ ಇವರು ವಿಶೇಷ ಯೋಗ್ಯತೆಯನ್ನು ಹೊಂದುತ್ತಾರೆ.ಛಾಯಾಚಿತ್ರ ಅಥವಾ ಆಯಾತ-ನಿರ್ಯಾತ ಕಾರ್ಯಗಳಲ್ಲಿ ಜಾತಕರು ಧನ ಪ್ರಾಪ್ತಿಹೊಂದುತ್ತಾರೆ. ಇವರು ಪ್ರವೃತ್ತಿಯಿಂದ ಗರ್ವಿ, ಅಹಂಕಾರಿ ಮತ್ತು ಹಠಿಗಳಾಗುತ್ತಾರೆ.

        ಈ ನಕ್ಷತ್ರ ಭಾಗದ ಮೇಲೆ ಸೂರ್ಯನು ಫಾಲ್ಗುಣ ಮಾಸದಲ್ಲಿ ಸುಮಾರು ಹದಿಮೂರು ದಿನ ಇರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳನೆಯ ದಿನ ಸುಮಾರು 24 ಗಂಟೆಗಳವರೆಗೆ ಈ ನಕ್ಷತ್ರ ಭ್ರಮಣ ಮಾಡುತ್ತಾನೆ.

* ಚರಣದ ಸ್ವಾಮಿಯ ಫಲ :

* ಪ್ರಥಮ ಚರಣದ ಸ್ವಾಮಿ ರಾಹು-ಗುರು ಜಾತಕನನ್ನು ಬಹಿರ್ಮುಖಿಯನ್ನಾಗಿ ಮಾಡುವರು.

* ದ್ವಿತೀಯ ಚರಣದ ಸ್ವಾಮಿ ರಾಹು-ಶನಿ ಜಾತಕನನ್ನು ಅಂತರ್ಮುಖಿಯನ್ನಾಗಿ ಮಾಡುವರು.

* ತೃತೀಯ ಚರಣದ ಪ್ರಭಾವದಿಂದ ಆಂದೋಲನದ ನೇತೃತ್ವ ವಹಿಸುವನು.

* ಚತುರ್ಥ ಚರಣದ ಫಲ ದ್ವಿತೀಯ ಚರಣಕ್ಕೆ ಸಮಾನವಾಗಿರುತ್ತದೆ.

ಅನಿದ್ರೆ, ವಾತರೋಗ, ಸಂಧಿವಾತ, ಹೃದಯ ಕಂಪನ, ಹೃದಯಶೂಲೆ, ಎದೆಯಲ್ಲಿ ಬಾವು, ಎಗ್ನಿಮಾ, ಕುಷ್ಠ, ಕಂಪನ, ರಕ್ತಏರೊತ್ತಡ, ಮೂಳೆ ಮುರಿತ.

ವಿಶೇಷ :

ಶನಿಯ ರಾಶಿ ಮತ್ತು ರಾಹುವಿನ ನಕ್ಷತ್ರದಲ್ಲಿ ಜನಿಸಿದ ಶತಭಿಷಾದ ಅಧಿಕಾಂಶ ಜಾತಕರು ಸೇವಾಮನೋಭಾವದವರು, ಸ್ವಚ್ಛ ಹಾಗೂ ಪವಿತ್ರ ಕಾರ್ಯ ಮಾಡುವವರು, ಧಾರ್ಮಿಕ, ಚಂಚಲ ಪ್ರವೃತ್ತಿ, ಪ್ರಾಯಶಃ ಕಾರ್ಯಕ್ಷೇತ್ರ ಪರಿವರ್ತನೆ

ಮಾಡುವವರು, ವಿವಿಧ ವಿಜ್ಞಾನಗಳಲ್ಲಿ ಪಾರಂಗತ ಮತ್ತು ಯೋಚಿಸದೆ, ವಿಚಾರ ಮಾಡದೆ ಕಾರ್ಯ ನಿರ್ವಹಿಸುವವರಾಗುತ್ತಾರೆ. ಇಂಥ ಜಾತಕರು ತಾವು ಮಾಡಿದ ಕಾರ್ಯಗಳಲ್ಲಿ ಕೆಲವೊಮ್ಮೆ ಹಾನಿ ಅನುಭವಿಸುತ್ತಾರೆ. ಯಂತ್ರ ಮತ್ತು ಯಾಂತ್ರಿಹ ಕಾರ್ಯಗಳಲ್ಲಿ ಅಭಿರುಚಿಯಿರುತ್ತದೆ ಮತ್ತು ಅದೇ ಕ್ಷೇತ್ರದಲ್ಲಿ ಸಫಲರೂ ಆಗುತ್ತಾರೆ. ಇವರು ಭ್ರಮಣಶೀಲರು, ನೌಕರಿ ಅಥವಾ ವ್ಯಾಪಾರದಲ್ಲಿ ಭ್ರಮಣ ಮಾಡುವ ಅವಕಾಶಗಳು ಪ್ರಾಪ್ತಿಯಾಗುತ್ತಿರುತ್ತವೆ. ಶತಭಿಷಾದ ಜಾತಕರು ಪ್ರಾಕೃತಿಕವಾಗಿ ಉಚ್ಚ ವಿಚಾರದವರು, ಮಹತ್ವಾಕಾಂಕ್ಷಿಗಳು, ಸಾತ್ವಿಕ ಜೀವನ ನಡೆಸುವವರು, ಸದಾಚಾರಿಗಳು ಸಾಧು-ಸಂತರ ಪ್ರೇಮಿ ಹಾಗೂ ಕಟ್ಟಾ ಧಾರ್ಮಿಕರಾಗಿರುತ್ತಾರೆ. ಅದ್ಭುತ ಕಲ್ಪನಾಶಕ ಯಿಂದ ಇವರು ವಿಶೇಷವಾಗಿ ಪ್ರಭಾವಿತರಾಗುತ್ತಾರೆ. ಕಲೆ, ಚಿತ್ರಣ, ಅಥವಾ ಕಲಾ ಲೇಖನದಲ್ಲಿ ಇವರು ವಿಶೇಷ ಯೋಗ್ಯತೆಯನ್ನು ಹೊಂದುತ್ತಾರೆ.ಛಾಯಾಚಿತ್ರ ಅಥವಾ ಆಯಾತ-ನಿರ್ಯಾತ ಕಾರ್ಯಗಳಲ್ಲಿ ಜಾತಕರು ಧನ ಪ್ರಾಪ್ತಿಹೊಂದುತ್ತಾರೆ. ಇವರು ಪ್ರವೃತ್ತಿಯಿಂದ ಗರ್ವಿ, ಅಹಂಕಾರಿ ಮತ್ತು ಹಠಿಗಳಾಗುತ್ತಾರೆ.

ಈ ನಕ್ಷತ್ರ ಭಾಗದ ಮೇಲೆ ಸೂರ್ಯನು ಫಾಲ್ಗುಣ ಮಾಸದಲ್ಲಿ ಸುಮಾರು ಹದಿಮೂರು ದಿನ ಇರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳನೆಯ ದಿನ ಸುಮಾರು 24 ಗಂಟೆಗಳವರೆಗೆ ಈ ನಕ್ಷತ್ರ ಭ್ರಮಣ ಮಾಡುತ್ತಾನೆ.

* ಚರಣದ ಸ್ವಾಮಿಯ ಫಲ :

* ಪ್ರಥಮ ಚರಣದ ಸ್ವಾಮಿ ರಾಹು-ಗುರು ಜಾತಕನನ್ನು ಬಹಿರ್ಮುಖಿಯನ್ನಾಗಿ ಮಾಡುವರು.

* ದ್ವಿತೀಯ ಚರಣದ ಸ್ವಾಮಿ ರಾಹು-ಶನಿ ಜಾತಕನನ್ನು ಅಂತರ್ಮುಖಿಯನ್ನಾಗಿ ಮಾಡುವರು.

* ತೃತೀಯ ಚರಣದ ಪ್ರಭಾವದಿಂದ ಆಂದೋಲನದ ನೇತೃತ್ವ ವಹಿಸುವನು.

* ಚತುರ್ಥ ಚರಣದ ಫಲ ದ್ವಿತೀಯ ಚರಣಕ್ಕೆ ಸಮಾನವಾಗಿರುತ್ತದೆ.