‘ಶವ’ ಅಥವಾ ‘ಮೃತ’ = ಹೆಣ, ಜೀವರಹಿತ ವಸ್ತು
ಈ ಆಸನದ ಉದ್ದೇಶವೆಂದರೆ ಹೆಣದ ಸ್ಥಿತಿಯನ್ನನುಕರಿಸುವುದು. ಜೀವವು ದೇಹವನ್ನು ಬಿಟ್ಟು ತೊಲಗಿದಮೇಲೆ ದೇಹವು ಕದಲದಂತೆ ಇರುತ್ತದೆ. ಸ್ವಲ್ಪಹೊತ್ತು ಚಲಿಸದಂತೆ ಸುಮ್ಮನಿರು ವುದರಿಂದ ಮತ್ತು ಎಚ್ಚರವಿದ್ದರೂ ಸಹ ಮನಸ್ಸನ್ನು ಒಂದೆಡೆಯಲ್ಲಿ ನಿಲ್ಲಿಸುವುದರಿಂದ ವಿಶ್ರಾಂತಿ ಪಡೆಯುವ ವಿಧಾನವನ್ನು ಕಲಿಯಬಹುದು. ಎಚ್ಚರದಿಂದಿದ್ದರೂ ದೇಹಕ್ಕೂ ಮತ್ತು ಮನಸ್ಸಿಗೂ ವಿಕ್ರಾಂತಿಕೊಟ್ಟುದೇ ಆದರೆ ಅವೆರಡಕ್ಕೂ ಲವಲವಿಕೆಯನ್ನುಂಟುಮಾಡಿ ನವಚೈತನ್ಯವನ್ನು ಅವುಗಳಲ್ಲಿ ಮೂಡಿಸಿದಂತಾಗುತ್ತದೆ. ದೇಹವನ್ನು ಚಲಿಸದ ಸ್ಥಿತಿಯಲ್ಲಿಡುವುದು ಸಾಧ್ಯವಾದರೂ ಮನಸ್ಸನ್ನು ಅತ್ತಿತ್ತ ಚಲಿಸದಂತೆ ಒಂದೆಡೆ ನಿಲ್ಲಿಸುವುದು ಬಹು ಕಷ್ಟವೆಂಬುದು ಪ್ರತಿಯೊಬ್ಬರ ಅನುಭವ ಆದುದರಿಂದ ಈ ಆಸನವು ನೋಡುವುದಕ್ಕೆ ಬಹು ಸುಲಭವಿದಂತೆ ಕಂಡುಬಂದರೂ ಇದರಲ್ಲಿ ನೈಪುಣ್ಯವನ್ನು ಗಳಿಸುವುದು ಕಷ್ಟ
ಅಭ್ಯಾಸಕ್ರಮ
೧. ಮೊದಲು, ನೆಲಮೇಲೆ ಉದ್ದಕ್ಕೂ ಚಪಟೆಯಾಗಿ ಬೆನ್ನಿನಮೇಲೆ ಶವದಂತೆ ಅಲುಗರ ಮಲಗಬೇಕು. ಕೈಗಳನ್ನು ತೊಡೆಗಳಿಂದ ಸ್ವಲ್ಪ ದೂರವಾಗಿಡಬೇಕು ಮತ್ತು ಅಂಗೈಗಳನ್ನು ಮೇಲೊಗಮಾಡಿಡಬೇಕು.
೨. ಬಳಿಕ ಕಣ್ಣೆವೆಗಳನ್ನು ಮುಚ್ಚಬೇಕು. ಸಾಧ್ಯವಾದರೆ ಒಂದು ಕಪ್ಪುಬಣ್ಣದ ಬಟ್ಟೆಯನ್ನು ನಾಲ್ಕಡಿಕೆ ಹಾಕಿ ಕಣ್ಣುಗಳ ಮೇಲೆ ಹೊದಿಸಬೇಕು. ಆಮೇಲೆ ಹಿಮ್ಮಡಿಗಳನ್ನು ಜೊತೆಗೂಡಿಸಿ ಕಾಲ್ಬೆರಳುಗಳನ್ನು ಅಗಲಿಸಿ ದೂರಮಾಡಬೇಕು.
೩. ಪ್ರಾರಂಭದಲ್ಲಿ ಆಳವಾದ ಉಸಿರನ್ನು ಒಳಕ್ಕಳೆಯಬೇಕು. ಬಳಿಕ ಉಸಿರಾಟವನ್ನು ಸೂಕ್ಷ್ಮವಾಗಿಯೂ ನಿಧಾನವಾಗಿಯೂ ನಡೆಸಬೇಕು. ಬೆನ್ನುಮೂಳೆಯಲ್ಲಾಗಲಿ ಇಲ್ಲವೆ ಇತರ ಯಾವ ಭಾಗದಲ್ಲಾಗಲಿ ಕದಲುವ ಸೂಚನೆಯೇ ಇರಬಾರದು
೪. ಈ ಸ್ಥಿತಿಯಲ್ಲಿರುವಾಗ ಮನಸ್ಸನ್ನು ಆಳವಾದ ಮತ್ತು ಸೂಕ್ಷ್ಮವಾದ ಉಸಿರಿನ ಮೇಲೆಯೇ ನೆಟ್ಟು ಮೂಗಿನ ಹೊಳ್ಳೆಗಳಿಗೆ ಉಸಿರಿನ ಶಾಖದರಿವುಂಟಾಗದಂತಿರಬೇಕು.
೫. ಇದರಲ್ಲಿ ಕೆಳದವಡೆಯು ಕಚ್ಚಿಕೊಂಡ ಸ್ಥಿತಿಯಲ್ಲಿಡದೆ, ಅವನ್ನು ಇಳಿಬಿಟ್ಟಿರಬೇಕು. ಅಲ್ಲದೆ ನಾಲಗಗೆ ಯಾವ ಕೆಲಸವನ್ನೂ ಕೊಡದಿರಬೇಕು. ಅಂದರೆ ಅದನ್ನು ಸ್ವಲ್ಪ ಮಾತ್ರವೂ ಚಲಿಸದ ರೀತಿಯಲ್ಲಿರಿಸಬೇಕು ಮತ್ತು ಕಣ್ಣಗುಡ್ಡೆಗಳಿಗೂ ಕೂಡ ಯಾವ ವ್ಯಾಪಾರವನ್ನೂ ಒದಗಿಸವಂತಿರಬೇಕು.
೬. ಈ ಬಗೆಯಲ್ಲಿ ಎಲ್ಲಾ ಅವಯವಗಳಿಗೂ ಪೂರ್ಣ ವಿಶ್ರಾಂತಿಯನ್ನು ಒದಗಿಸಿದ ಮೇಲೆ ನಿಧಾನವಾಗಿ ಉಸಿರಾಡಲಾರಂಭಿಸಬೇಕು.
೬. ಮನಸ್ಸು ಅತ್ತಿತ್ತ ಚಲಿಸತೊಡಗಿದ್ದರೆ, ಆಗ ಪ್ರತಿಸಲ ಉಸಿರನ್ನು ಮೆಲ್ಲಮೆಲ್ಲಗೆ ಹೊರಬಿಡುತ್ತ ಸ್ವಲ್ಪ ಕಾಲ ಹಾಗೆಯೇ ಸ್ತಬ್ದವಾಗಿರಬೇಕು.
5. ಈ ಭಂಗಿಯನ್ನು ಸುಮಾರು 15-20 ಸೆಕೆಂಡುಗಳ ಕಾಲ ನೆಲಸಬೇಕು.
೯. ಈ ಭಂಗಿಯನ್ನು ಅಭ್ಯಸಿಸುವಾಗ ಮೊದಮೊದಲು ಅಭ್ಯಾಸಕನು ನಿಧಿಸುವ ಸ್ಥಿತಿಗೆ ಸರಿಯಬಹು ಬರಬರುತ್ತ ನರಗಳಲ್ಲಿ ಚಟುವಟಿಕೆಯನ್ನು ಕುಗ್ಗಿಸುತ್ತ ಬಂದಲ್ಲಿ ಆಭ್ಯಾಸಿಯು ಪುರ್ಣ ವಿಕ್ರಾಂತಿಯನ್ನು ಪಡೆದು ನವಚೈತನ್ಯವನ್ನು ಗಳಿಸುವನು.
ಪರಿಣಾಮಗಳು
ಈ ಅಸನದ ವಿಷಯವಾಗಿ ‘ಹಠಯೋಗ ಪ್ರದೀಪಿಕೆ ಯು ಈ ಮುಂದಿನಂತೆ ವಿವರಿಸಿದೆ
ಉತ್ತಾನಂ ಶವವತ್ ಭೂಮೌ ಶಯನಂ ತತ್ ಶವಾಸನಮ್ | ಶವಾಸನಮ್ ಶ್ರಾಂತಿಹರಂ ಚಿತ್ರವಿಶ್ರಾಂತಿಕಾರಮ್ ||
ಅಂದರೆ, ನೆಲದಲ್ಲಿ ಬೆನ್ನುನಮೇಲೆ ಉದ್ದರೂ ಹೆಣದ ರೀತಿಯಲ್ಲಿ ಮಲಗಿರುವ ಭಂಗಿಗೆ ‘ಶವಾಸನ’ ವೆಂಬ ಹೆಸರು ಈ ಆಸನವು ಉಳಿದ ಆಸನಾಭ್ಯಾಸಗಳಿಂದುಂಟಾದ ದೇಹಶ್ರಮವನ್ನು ಕಳೆಯುವುದು, ಮಾತ್ರವಲ್ಲದೆ ಮನಸ್ಸಿಗೆ ತುಂಬಾ ಶಾಂತಸ್ಥಿತಿಯನ್ನೊದಗಿಸುತ್ತದೆ, ಇದೇ ವಿಷಯ ವನ್ನು ಕುರಿತು ”ರಂಡಸಂಹಿತೆ’ಯ ಎರಡನೆಯ ಅಧ್ಯಾಯದ ೧೧ನೆಯ ಶ್ಲೋಕದಲ್ಲಿ ಹೀಗೆಂದು ವಿವರಿಸಿದೆ: ”ನೆಲದಮೇಲೆ ಚಪ್ಪಟೆಯಾಗಿ ಬೆನ್ನೊರಗಿು, ಅಂಗತಲೆಯಾಗಿ ಶವದಂತೆ ಒರಗಿರುವ ಭಂಗಿಗೆ ‘ಮೃತಾಸನ’ ವೆಂದು ಹೆಸರು ಈ ಭಂಗಿಯು ಶ್ರಮವನ್ನು ಕಳೆದು ಮನಸ್ಸಿನ ಚಾಂಚಲ್ಯ ಭಾವವನ್ನು ಅಣಗಿಸುತ್ತದೆ”.
‘ಹನಯೋಗ ಪ್ರದೀಪಿಕೆಯಲ್ಲಿ ಈ ಬಗೆಯ ವಿವರಿಸಿದೆ :
ಇಂದ್ರಿಯಾಣಾಂ ಮನೋನಾಥ ಮನೋನಾಥಸ್ತು ಮಾರುತಃ।
ಮಾರುತಸ್ಯ ಲಯೋನಾಥಃ ಸ ಲಯೋ ನಾದಮಾಶ್ರಿತಃ
ಸೋಡಿಯಮೇವಾಸ್ತು ಮೋಕ್ಷಾಖ್ಯ : ಮಾರಸ್ತುವಾರಿಪಿದುತಾಂತರೇ |
*ಮನಃ ಪ್ರಾಣಲಯೇ ಕಶ್ಚಿತ್ ಆನಂದಃ ಸಂಪ್ರವರ್ತತೇ ||
ಅಂದರೆ, ಇಂದ್ರಿಯಗಳಿಗೆಲ್ಲ (ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳು) ಮನಸ್ಸೇ ಒಡೆಯ. (ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ |1 ಎಂಬ ಗೀತಾವಾಕ್ಯವೂ ಇದಕ್ಕೆ ಆಧಾರ), ಪ್ರಾಣವಾಯುವೆನಿಸಿದ ಮಾರುತವು ಈಮನಸ್ಸಿಗೆ ಪ್ರಭು. ಈ ಪ್ರಾಣಕ್ಕೆ ಮನೋ ‘ಲಯ’ಸ್ಥಿತಿಯೇ ಸ್ವಾಮಿ, ಈ ಮನೋಲಯಕ್ಕೆ ‘ಅಂತರ್ನಾದವು ನಾಥ ಅಂದರೆ, ನಾದದಲ್ಲಿ ಮನಸ್ಸು ಲಯವಾಗುತ್ತದೆ (ದಶವಿಧ ನಾದಗಳ ವಿವರಣೆ ಈ ಹಿಂದೆಯೇ ಕೊಟ್ಟಿದೆ. ಅದರಲ್ಲಿ ಮನೋಲಯವು ನಾದದಿಂದ ಲಭಿಸುವುದೆಂದು ಸೂಚಿಸಿದೆ.) ಇಂಥ ಪ್ರಾಣ ಮತ್ತು ಮನಸ್ಸುಗಳು ಲಯವಾಗುವುದೇ ‘ಮುಕ್ತಿಸ್ಥಿತಿ’ ಈ ಸ್ಥಿತಿಯಲ್ಲಿ ಅನಿರ್ವಚನೀಯವಾದ ‘ಆನಂದ’ದ ಅನುಭವವು ಯೋಗಿಗೆ ದೊರಕುತ್ತದೆ.
ಇಂಥ ಪ್ರಾಣವನ್ನು ಪಳಗಿಸಲು, ಅದಕ್ಕೆ ಆಶ್ರಯವಾಗಿರುವಂಥ ನರಗಳನ್ನು ಪಳಗಿಸ ಬೇಕಾಗಿದೆ. ಇದಕ್ಕಾಗಿ ಸಮನಾದ ನಿರಾಳವಾದ, ರಮ್ಯವಾದ ಮತ್ತು ಆಳವಾದ ಉಸಿರಾಟ ನಡೆಸುತ್ತ, ದೇಹದ ಯಾವ ಭಾಗವನ್ನೂ ಚಲನೆಗೆ ಎಡೆಗೊಡದಂತೆ ಮಾಡಬೇಕು. ಒಟ್ಟಿನಲ್ಲಿ ನರಗಳ ಮೇಲೆ ಸ್ವಾಮ್ಯ ದೊರಕಿತೆಂದರೆ ಮನಸ್ಸಿನಮೇಲೆ ಸ್ವಾಮ್ಯ ದೊರೆತಂತೆಯೇ ಸರಿ. ಮನಶ್ಯಾಂತಿಯೇ ಆನಂದಾನುಭವ ಮತ್ತು ಇದೇ ಮುಕ್ತಿಸ್ಥಿತಿ ಆಧುನಿಕ ನಾಗರೀಕತೆಯಲ್ಲಿ ನರಮಂಡಲಕ್ಕೆ ಹೆಚ್ಚಿನ ಒತ್ತಡವುಂಟಾಗುತ್ತದೆ. ಅದಕ್ಕೆ ವಿಶ್ರಾಂತಿಯನ್ನೊದಗಿಸಲು, ಆ ಮೂಲಕ ದೇಹಕ್ಕೆ ಲವಲವಿಕೆ ಮತ್ತು ಮನಸ್ಸಿಗೆ ಶಾಂತಿ, ಆದರಿಂದ ಆನಂದ-ಸುಖಾನುಭವವನ್ನು ಪಡೆಯಲು ಈ ‘ಶವಾಸನವು’ ಒಂದು ಸಿದೌಷಧವಿದ್ದಂತೆ.