ಮನೆ ಮನರಂಜನೆ “ಶೇರ್‌’ ಸಿನಿಮಾ ಟೀಸರ್‌ ಬಿಡುಗಡೆ

“ಶೇರ್‌’ ಸಿನಿಮಾ ಟೀಸರ್‌ ಬಿಡುಗಡೆ

0

ನಟ ಕಿರಣ್‌ ರಾಜ್‌ “ಶೇರ್‌’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸುದರ್ಶನ್‌ ಸುಂದರರಾಜ್‌ ನಿರ್ಮಾಣ ಹಾಗೂ ಪ್ರಸಿದ್ಧ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಗೊಂಡಿತು.

Join Our Whatsapp Group

ಹಿರಿಯ ರಾಜಕಾರಣಿ ಪಿ.ಜಿ. ಆರ್‌ ಸಿಂಧ್ಯಾ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.

ನಿರ್ಮಾಪಕ ಸುದರ್ಶನ್‌ ಸುಂದರರಾಜ್‌ ಅವರ ಪುತ್ರ ಕ್ರಿಸ್‌ ಈ ಚಿತ್ರದ ಮೂಲಕ ಖಳನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ವಿಶೇಷ.

ಚಿತ್ರದ ಬಗ್ಗೆ ಮಾತು ಹಂಚಿಕೊಂಡ ನಿರ್ದೇಶಕ ಪ್ರಸಿದ್ಧ್, “ಶೇರ್‌, ನನ್ನ ನಿರ್ದೇ ಶನದ ಮೂರನೇ ಸಿನಿಮಾ. ಚಿತ್ರದ ಕಥಾ ನಾಯಕ ಹಾಗೂ ನಾಯಕಿ ಅನಾಥರು. ಒಂದು ಅನಾಥಾಶ್ರಮದ ಸುತ್ತಲೇ ಸಾಗುವ ಕಥಾಹಂದರವಿದು. ಇಲ್ಲಿ ಯಾವುದೇ ಸಂದೇಶವಿಲ್ಲ, ಇದು ಪಕ್ಕಾ ಮನರಂಜನೆಯ ಸಿನಿಮಾ’ ಎಂದರು.

ಇದೇ ವೇಳೆ ನಾಯಕ ಕಿರಣ್‌ ರಾಜ್‌ ಕಾರ್ಯಕ್ರಮಕ್ಕೆ ಗೈರಾಗಿದ್ದರ ಬಗ್ಗೆ ಬೇಸರ ತೋಡಿಕೊಂಡರು. “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಮಗ ಕ್ರಿಸ್‌ ಈ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ’ ಎಂದರು ನಿರ್ಮಾಪಕ ಸುದರ್ಶನ್‌ ಸುಂದರರಾಜ್‌.

ಸುರೇಖಾ ಈ ಚಿತ್ರದ ನಾಯಕಿ. ನಟಿ ತನಿಶಾ ಕುಪ್ಪಂಡ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಿಟ್ಟಿ ಕೌಶಿಕ್‌ ಛಾಯಾಗ್ರಹಣವಿದೆ.