ಮುಂಬೈ (Mumbai)-ಎಡಗೈ ಅನುಭವಿ ಬ್ಯಾಟರ್ ಶಿಖರ್ ಧವನ್ (Shikar Dhawan) ಐಪಿಎಲ್‌ನಲ್ಲಿ (IPL) 6,000 ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಸಾಧನೆ ಮಾಡಿದ್ದಾರೆ.
ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಧವನ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. ಆ ಮೂಲಕ 6,000 ರನ್ ಗಳ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಬಳಿಕ 6,000 ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. 200ನೇ ಐಪಿಎಲ್ ಪಂದ್ಯದಲ್ಲಿ ಧವನ್ ಈ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಹಾಗೆಯೇ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 9,000 ರನ್ ಗಳಿಸಿದ ಭಾರತದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ಐಪಿಎಲ್‌ನಲ್ಲಿ ಗರಿಷ್ಠ ರನ್ ಸಾಧಕರು:
ವಿರಾಟ್ ಕೊಹ್ಲಿ: 6,402, ಶಿಖರ್ ಧವನ್: 6050*, ರೋಹಿತ್ ಶರ್ಮಾ: 5,764, ಡೇವಿಡ್ ವಾರ್ನರ್: 5,668, ಸುರೇಶ್ ರೈನಾ: 5,528.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು:
ವಿರಾಟ್ ಕೊಹ್ಲಿ: 10,392, ರೋಹಿತ್ ಶರ್ಮಾ: 10,048, ಶಿಖರ್ ಧವನ್: 9004*.