ಮನೆ ರಾಜ್ಯ ಶಿವಮೊಗ್ಗ: ಬೈಕ್ ನಲ್ಲಿ ಬಂದು ಮಹಿಳೆಗೆ ಚಾಕು ಇರಿದ ಅಪರಿಚಿತರು

ಶಿವಮೊಗ್ಗ: ಬೈಕ್ ನಲ್ಲಿ ಬಂದು ಮಹಿಳೆಗೆ ಚಾಕು ಇರಿದ ಅಪರಿಚಿತರು

0

ಶಿವಮೊಗ್ಗ: ಕೆಲಸಕ್ಕೆಂದು ಹೊರಟಿದ್ದ ಮಹಿಳೆಗೆ ಅಪರಿಚಿತರಿಬ್ಬರು ಬೈಕ್ ​ನಲ್ಲಿ ಬಂದು ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.

ಹೊಸನಗರ ನಿವಾಸಿ ನಾಜೀಮಾ (38) ಗಾಯಗೊಂಡ ಮಹಿಳೆ.

ನಾಜೀಮಾ ಹೊಸನಗರದ ಪಾರ್ಲರ್ ​ನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಮಧ್ಯಾಹ್ನ ಮನೆಗೆ ಬಂದು ಊಟ ಮುಗಿಸಿ ಹೊಸನಗರದ ಗಣಪತಿ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಾಜೀಮಾ ಅವರ ಬಲ ಕೈ ತೋಳಿಗೆ ಚಾಕುವಿನಿಂದ ಇರಿದಿದ್ದಾರೆ.

ಬೈಕ್​ ಚಲಾಯಿಸುತ್ತಿದ್ದವನು ಹೆಲ್ಮೆಟ್ ಹಾಕಿಕೊಂಡಿದ್ದು, ಹಿಂಬದಿ ಸವಾರ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದನು. ಇದರಿಂದ ಅವರ ಮುಖ ಕಂಡು ಬಂದಿಲ್ಲ. ನಾಜೀಮಾ ಜೋರಾಗಿ ಕೂಗಿಕೊಂಡ ಕಾರಣ ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಾಳುವಿಗೆ ನಾಲ್ವರು ಮಕ್ಕಳಿದ್ದು, ಘಟನೆಯ ಸಂದರ್ಭ ಬುರ್ಕಾ ಹಾಕಿಕೊಂಡಿದ್ದ ಕಾರಣಕ್ಕೆ ಹೆಚ್ಚಿನ ಗಾಯಗಳಾಗಿಲ್ಲ. ಚಾಕುವಿನಿಂದ ಇರಿದವರು ಯಾರು, ಯಾವ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ.

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ನಡೆಯುತ್ತಿದೆ.

ಹಿಂದಿನ ಲೇಖನಇಂದು ಸರ್ಕಾರಕ್ಕೆ ಜಾತಿವಾರು ಜನಗಣತಿ ವರದಿ ಸಲ್ಲಿಕೆ
ಮುಂದಿನ ಲೇಖನಹಸಿರು ಪಟಾಕಿ, ಪರಿಸರ ಸ್ನೇಹಿ ಮೂರ್ತಿಗಷ್ಟೇ ಅವಕಾಶ: ಈಶ್ವರ ಖಂಡ್ರೆ