ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಸಮಾಜದ ಸಮಾವೇಶದಲ್ಲಿ ತಮಿಳು ನಾಡಗೀತೆ ಹಾಡು ಪ್ರಸಾರವಾಗಿರುವ ಘಟನೆ ನಡೆದಿದೆ.
ವಿಧಾನಸಭಾ ಚುನಾವಣಾ ಕರ್ನಾಟಕ ಸಹ ಉಸ್ತುವಾರಿ ಅಣ್ಣಾಮಲೈ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.
ಸಮಾವೇಶ ಆರಂಭಕ್ಕೂ ಮುನ್ನ ತಮಿಳು ನಾಡಗೀತೆ ಆಡಿಯೋ ಪ್ಲೇ ಆಗಿದೆ. ಆಯೋಜಕರು ಹಾಡನ್ನು ಪ್ರಸಾರ ಮಾಡುತ್ತಿದ್ದಂತೆ, ಮುಖಂಡರು ಹಾಗೂ ಕಾರ್ಯಕರ್ತರು ಎದ್ದು ನಿಂತು ಗೌರವ ನೀಡಿದ್ದಾರೆ. ಕೂಡಲೇ ಮಾಜಿ ಸಚಿವ ಈಶ್ವರಪ್ಪನವರು ನಾಡಗೀತೆ ಹಾಡಲು ಬರುತ್ತದೆ ಯಾರಿಗಾದರೂ ಬರುತ್ತದ ಎಂದಿದ್ದಾರೆ. ಕೆಲ ಕಾಲ ತಮಿಳು ನಾಡಗೀತೆ ಪ್ಲೇ ಆಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಂತಿದೆ.
ಕನ್ನಡ ನಾಡಗೀತೆ ಹಾಕಿಸಿ ಡ್ಯಾಮೇಜ್ ಕಂಟ್ರೋಲ್ ಗೆ ಈಶ್ವರಪ್ಪ ಮುಂದಾಗಿದ್ದಾರೆ. ಸಮಾವೇಶದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ ಭಾಗಿಯಾಗಿದ್ದರು.