ಶಿವಮೊಗ್ಗ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್ಗರ್ ಬಳಿಯ ಕಟ್ಟೆ ಹಕ್ಲಿನಲ್ಲಿ ನಡೆದಿದೆ.
ಮಿಥುನ್(22) ಹೆಚ್ಚಾಗಿ ಆನ್-ಲೈನ್ ಬೆಟ್ಟಿಂಗ್ ಗೇಮ್ ಗಳನ್ನು ಆಡುತ್ತಿದ್ದ.ಇದರಿಂದ ಸಾಲ ಮಾಡಿಕೊಂಡಿದ್ದ ಆತ ಸಾಲ ತೀರಿಸಲಾಗದೆ ತನ್ನ ಮೊಬೈಲ್ ಶಾಪ್ ನಲ್ಲಿ ನೇಣು ಹಾಕಿಕೊಂಡಿದ್ದಾನೆ.
ಮಿಥುನ್ ತೀರ್ಥಹಳ್ಳಿ ತಾಲೂಕಿನ ಶೆಡ್ಗರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲಿನಲ್ಲಿ ಮೊಬೈಲ್ ಶಾಪ್ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.