ಶಿರ್ವ: ಸೀಯಾಳ ಕೊಯ್ಯುವ ವೇಳೆ ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ನಡೀಬೆಟ್ಟು ಎಂಬಲ್ಲಿ ಆ.8ರ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಶಿರ್ವ ನಡೀಬೆಟ್ಟು ಪನಿಮಾರ್ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಮೃತಪಟ್ಟವರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುರೇಶ್ ಕಬ್ಬಿಣದ ಸಲಕೆಯಿಂದ ಸೀಯಾಳ ತೆಗೆಯಲು ಹೋಗಿದ್ದು, ತೋಟದಲ್ಲಿರುವ ಹೈ ಟೆನ್ಷನ್ ವಯರ್ ತಗಲಿ ಈ ಅವಘಡ ಸಂಭವಿಸಿದೆ.
ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದರು.