ಮನೆ ಅಪರಾಧ ಶಿವಮೊಗ್ಗ: ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗ: ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

0

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಪುಂಡರ ಅಟ್ಟಹಾಸ ಮುಂದುವರೆದಿದೆ, ಸಮೋಸ, ಕಚೋರಿ ವ್ಯಾಪಾರಿಯ ಮೇಲೆ ನಾಲ್ವರು ಪುಂಡರ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಕಸ್ತೂರ್ಬಾ ರಸ್ತೆಯ ಮುರುಡೇಶ್ವರ ದೇವಸ್ಥಾನದ ಬಳಿ ಬುಧವಾರ ನಡೆದಿದೆ.

Join Our Whatsapp Group

ಗಾಯಗೊಂಡ ವ್ಯಾಪಾರಿಯನ್ನು ಹೀರಾಲಾಲ್ ಎಂದು ಗುರುತಿಸಲಾಗಿದ್ದು ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ:

ಬೈಕ್ ನಲ್ಲಿ ಬಂದ ನಾಲ್ವರು ಪುಂಡರು ಯಾವುದೋ ವಿಳಾಸ ಕೇಳಿದ್ದಾರೆ ಅದಕ್ಕೆ ಕಚೋರಿ ವ್ಯಾಪಾರಿ ವಿಳಾಸ ತಿಳಿಸಿದ್ದಾನೆ ಬಳಿಕ ಅಲ್ಲಿಂದ ತೆರಳಿದ ನಾಲ್ವರು ಕೆಲ ಹೊತ್ತಿನ ಬಳಿಕ ಬಂದು ಕಚೋರಿ ವ್ಯಾಪಾರಿಯನ್ನು ಅಂಗಡಿಯಿಂದ ಹೊರಗೆ ಕರೆದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ,

ಕಚೋರಿ ವ್ಯಾಪಾರಿಯ ಮೇಲೆ ಪುಂಡರು ಹಲ್ಲೆ ನಡೆಸುತ್ತಿರುವ ಘಟನೆ ಅಲ್ಲಿನ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಘಟನೆಗೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದು ಉಳಿದ ಮೂವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.