ಮನೆ ಮನರಂಜನೆ ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಸಿನಿಮಾ

ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಸಿನಿಮಾ

0

ಶಿವರಾಜ್‌ ಕುಮಾರ್‌ ಅವರ ಹೊಸ ಚಿತ್ರವನ್ನು ಮನೋಜ್‌ ಬನೋಡೆ ಹಾಗೂ ಖೇಮ್‌ ಚಂದ್‌ ಖಡ್ಗಿ ಅವರು ನಿರ್ಮಿಸುತ್ತಿದ್ದು, ವಿಜಯಕಾಂತ್‌ ಅಭಿನಯದ ಸೂಪರ್‌ ಹಿಟ್‌ ವಲ್ಲರಸು ಚಿತ್ರದ ನಿರ್ದೇಶಕ ಎನ್‌ ಮಹಾರಾಜನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Join Our Whatsapp Group

ಈವರೆಗೂ ಮೂರು ತಮಿಳು ಹಾಗೂ ಸನ್ನಿ ಡಿಯೋಲ್‌ ಅಭಿನಯದ ಹಿಂದಿ ಚಿತ್ರವೊಂದನ್ನು ನಿರ್ದೇಶಿಸಿರುವ ಮಹಾರಾಜನ್‌ ಅವರು ನಿರ್ದೇಶಿಸುತ್ತಿರುವ ಮೊದಲ ಕನ್ನಡ ಚಿತ್ರವಿದು.

ಶಿವರಾಜಕುಮಾರ್‌ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದೆ.