ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಯಸ್ಸು 62 ದಾಟಿದರೂ ಒಂದರ ಮೇಲೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.
ʼಭೈರತಿ ರಣಗಲ್ʼ, ʼ45ʼ, ಉತ್ತರಕಾಂಡʼ ಸಿನಿಮಾದ ಜೊತೆ ಶಿವರಾಜ್ ಕುಮಾರ್ ಕಾರ್ತಿಕ್ ಅದ್ವೈತ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಪೋಸ್ಟರ್ ವೊಂದು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿತ್ತು.
ಇತ್ತೀಚೆಗೆ ಶಿವರಾಜ್ ಕುಮಾರ್ ನಿರ್ದೇಶಕರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಫೋಟೋವನ್ನು ಕಾರ್ತಿಕ್ ಅವರು ಹಂಚಿಕೊಂಡು ಶೂಟಿಂಗ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ದಿ ಗಾಡ್ ಆಫ್ ಮಾಸ್ ವಿತ್ ಹಿಸ್ ಆರ್ಮಿ ‘#Shivanna131’ ಚಿತ್ರೀಕರಣ ಆಗಸ್ಟ್ ತಿಂಗಳಿನಿಂದ ಆರಂಭಗೊಳ್ಳಲಿದೆ ಎಂದು ಅದ್ವೈತ್ ʼಎಕ್ಸ್ʼ ನಲ್ಲಿ ಹೇಳಿದ್ದಾರೆ.
ಚಿತ್ರದಲ್ಲಿ ಶಿವಣ್ಣ ʼದೇವʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಸಿನಿಮಾದ ಮುಹೂರ್ತ ಹಾಗೂ ಪಾತ್ರವರ್ಗದ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಕಾಲಿವುಡ್ ನಲ್ಲಿ ʼಪಾಯುಂ ಒಲಿ ನೀ ಯೇನಕ್ಕುʼ ಸಿನಿಮಾವನ್ನು ನಿರ್ದೇಶನ ಮಾಡಿರುವ ಕಾರ್ತಿಕ್ ಅವರು ಈ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಆಗಲಿದ್ದಾರೆ.
ಎನ್.ಎಸ್.ರೆಡ್ಡಿ ಮತ್ತು ಸುಧೀರ್ ಸಿನಿಮಾಕ್ಕೆ ಬಂಡವಾಳ ಹಾಕಿದ್ದು ʼಕಾಂತಾರʼ ಖ್ಯಾತಿಯ ಛಾಯಾಗ್ರಾಹಕ ಎ.ಜೆ.ಶೆಟ್ಟಿ ಕ್ಯಾಮರಾ ನಿರ್ವಹಿಸಲಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ಅವರ ʼಭೈರತಿ ರಣಗಲ್ʼ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.