ಮೈಸೂರು: ಚಿತ್ರನಗರಿಗೆ ಪುನೀತ್ ರಾಜ್ ಕುಮಾರ್ ಅವರ ಹೆಸರಿಟ್ಟರೆ ಸಂತೋಷ. ಕುಟುಂಬದ ಸದಸ್ಯನಾಗಿ ನಾನು ಈ ಬಗ್ಗೆ ಒತ್ತಾಯಿಸುವುದಿಲ್ಲ. ಆದರೆ, ಅಭಿಮಾನಿಗಳು ಅಭಿಮಾನದಿಂದ ಕೇಳುತ್ತಿದ್ದಾರೆ ಎಂದು ನಟ ಶಿವರಾಜಕುಮಾರ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗಕ್ಕೆ ದುಡಿದವರು ಸಾಕಷ್ಟು ಜನ ಇದ್ದಾರೆ. ಅವರ ಹೆಸರನ್ನೂ ಇಡಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಡಬ್ಬಿಂಗ್ ಮಾಡುವ ವೇಳೆ ನನಗೆ ತುಂಬಾ ನೋವಾಗುತ್ತಿತ್ತು. ಅಪ್ಪು ಇಲ್ಲದ ಹುಟ್ಟು ಹಬ್ಬ ಆಚರಣೆ ತುಂಬಾ ದುಃಖದ ವಿಚಾರ ಎಂದು ಹೇಳಿದರು.
ಹುಟ್ಟು ಹಬ್ಬಕ್ಕೆ ಇಬ್ಬರೂ ಗಿಫ್ಟ್ ಗಳನ್ನು ಶೇರ್ ಮಾಡುತ್ತಿದ್ದೆವು.ಅಪ್ಪುಗೆ ಬ್ರಾಂಡ್ ವಾಚ್, ಬೆಲ್ಟ್, ಗಾಗಲ್ ಸಾಕಷ್ಟು ಕೊಟ್ಟಿದ್ದೇನೆ. ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ’ ಎಂದು ನೆನಪುಗಳನ್ನು ಹಂಚಿಕೊಂಡರು.
ನಂತರ ಅವರು ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತರು.