ಮನೆ ಮನರಂಜನೆ “ಗನ್ಸ್‌ ಆ್ಯಂಡ್‌ ರೋಸಸ್‌’ನ ಚಿತ್ರೀಕರಣ ಪ್ರಾರಂಭ

“ಗನ್ಸ್‌ ಆ್ಯಂಡ್‌ ರೋಸಸ್‌’ನ ಚಿತ್ರೀಕರಣ ಪ್ರಾರಂಭ

0

ಕನ್ನಡ ಚಿತ್ರರಂಗದ ಹಿರಿಯ ಚಿತ್ರಕಥೆಗಾರರಾದ ಅಜಯ್‌ ಕುಮಾರ್‌ ಅವರ ಪುತ್ರ ಅರ್ಜುನ್‌ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ “ಗನ್ಸ್‌ ಆ್ಯಂಡ್‌ ರೋಸಸ್‌’ನ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

Join Our Whatsapp Group

ಅಂಡರ್‌ ವರ್ಲ್ಡ್ ಹಿನ್ನೆಲೆಯಲ್ಲಿ ಪ್ರೇಮ ಕಥಾಹಂದರ ಹೊಂದಿರುವ “ಗನ್ಸ್‌ ಆ್ಯಂಡ್‌ ರೋಸಸ್‌’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನ ಕೆಂಗೇರಿ, ಕಂಠೀರವ ಸ್ಟುಡಿಯೋ, ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್‌ ಮುಂತಾದ ಕಡೆಗಳಲ್ಲಿ ನಡೆಸಲಾಗಿದೆ.

ಬೆಂಗಳೂರು ನಗರದಲ್ಲೇ ಈ ಸಿನಿಮಾದ ಕಥೆ ನಡೆಯುವುದರಿಂದ ಸಿನಿಮಾದ ಬಹುಭಾಗವನ್ನು ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಲ್ಲಿಯವರೆಗೆ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಹಾಗೂ ಸಿನಿಮಾದಲ್ಲಿ ಪ್ರಮುಖ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಸಲಾಗಿದೆ.

 “ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾದಲ್ಲಿ ಅರ್ಜುನ್‌ಗೆ ಯಶ್ಚಿಕಾ ನಿಷ್ಕಲಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಶೋಭರಾಜ್‌, ಅವಿನಾಶ್‌, ಹರೀಶ್‌, ಜೀವನ್‌ ರಿಚಿ, ಅರುಣಾ ಬಾಲರಾಜ್‌ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ರಾಜಕೀಯದಲ್ಲಿ ಸಕ್ರಿಯರಾಗಿರುವ ಮತ್ತು ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಹೆಚ್‌. ಆರ್‌ ನಟರಾಜ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಹೆಚ್‌. ಎಸ್‌ ಶ್ರೀನಿವಾಸ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ.

ಶರತ್‌ ಎಸ್‌, ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಶಶಿಕುಮಾರ್‌ ಸಂಗೀತ ಸಂಯೋಜನೆಯಿದ್ದು, ಆರ್‌. ಜನಾರ್ದನ್‌ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ. ಥ್ರಿಲ್ಲರ್‌ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಬಾಗಲಕೋಟೆಯ ಗ್ರಾಪಂನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ