ರಾಘವೇಂದ್ರ ರಾಜ್ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಖಡಕ್ ಹಳ್ಳಿ ಹುಡುಗರು’ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ.
ಈ ಸಲುವಾಗಿ ರಾಘವೇಂದ್ರ ರಾಜ್ಕುಮಾರ್ ಗಾಜನೂರಿಗೆ ಭೇಟಿ ನೀಡಿದ್ದಾರೆ. ‘ಖಡಕ್ ಹಳ್ಳಿ ಹುಡುಗರು’ ಅನ್ನೋದು ಸಿನಿಮಾದ ಹೆಸರು. ಈ ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಗಾಜನೂರಿನಲ್ಲೇ ಈ ಸಿನಿಮಾ ಮುಹೂರ್ತ ಮಾಡಿ, ನಮ್ಮ ಸೋದರತ್ತೆ ನಾಗಮ್ಮನ ಕೈಲಿ ಪೂಜೆ ಮಾಡಿಸುತ್ತೇವೆ.
ನಾನು ಈ ಚಿತ್ರದ ಹೀರೋ ಅಲ್ಲ. ಆದರೆ, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅಪ್ಪಾಜಿ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯುತ್ತದೆ. ‘ಕನ್ನಡಕ್ಕೆ ಮೊದಲ ಗೌರವ..’ ಎಂಬ ಹಾಡಿನ ಚಿತ್ರೀಕರಣ ಇಲ್ಲೇ ನಡೆಯಲಿದೆ’ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.
ತಾಳವಾಡಿಯಲ್ಲಿರುವ ರಾಜ್ಕುಮಾರ್ ಅವರ ಪೂರ್ವಿಕರ ಮನೆಯ ಗೃಹಪ್ರವೇಶವನ್ನೂ ಅವರು ನೆರವೇರಿಸಿದರು. ಕಳೆದ ನವೆಂಬರ್ನಲ್ಲಿ ಹೃದಯಾಘಾತದಿಂದ ನಿಧನರಾದ ಅವರ ಕಿರಿಯ ಸಹೋದರ ಪುನೀತ್ ರಾಜ್ಕುಮಾರ್ ಅವರು ಮನೆಯ ನವೀಕರಣವನ್ನು ಕೈಗೊಂಡಿದ್ದರು ಮತ್ತು ಅದನ್ನು ಕುಟುಂಬದ ಫೋಟೋ ಮ್ಯೂಸಿಯಂ ಆಗಿ ಪರಿವರ್ತಿಸಲು ಯೋಜಿಸಿದ್ದರು.
ಎಡೆಬಿಡದೆ ಸುರಿದ ಮಳೆಯಿಂದಾಗಿ ಮನೆ ಬಹುತೇಕ ಕುಸಿದಿದ್ದು, ನವೀಕರಣಕ್ಕೆ ಪುನೀತ್ ಮುಂದಾಗಿದ್ದರು. ರಾಘವೇಂದ್ರ ಮಾತನಾಡಿ, ಪೂರ್ವಿಕರ ಮನೆ ಪ್ರತಿಯೊಬ್ಬ ಕನ್ನಡಿಗನ ಆಸ್ತಿಯಾಗಿದ್ದು, ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.