ಮನೆ ಮನರಂಜನೆ ಯುಟ್ಯೂಬ್‌ ನಲ್ಲಿ ಶೋಷಿತೆ ಸಿನಿಮಾ

ಯುಟ್ಯೂಬ್‌ ನಲ್ಲಿ ಶೋಷಿತೆ ಸಿನಿಮಾ

0

ತಾವು ಮಾಡಿದ ಸಿನಿಮಾವನ್ನು ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೂ ಕಂಟೆಂಟ್‌ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಕೆಲವು ತಂಡಗಳು ಸಿನಿಮಾವನ್ನು ಯುಟ್ಯೂಬ್‌ ನಲ್ಲಿ ಬಿಡುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ ಶೋಷಿತೆ.

Join Our Whatsapp Group

ಈ ಚಿತ್ರದ ನಿರ್ದೇಶಕರು ಎಂಟು ತಿಂಗಳಿಗೂ ಹೆಚ್ಚು ಕಾಲ ಪ್ರಮುಖ ಓಟಿಟಿ ಪ್ಲಾಟ್‌ ಫಾರ್ಮ್ ಕಚೇರಿಯನ್ನು ಸಂಪರ್ಕಿಸಿದರೂ, ಯಾವುದೇ ಸ್ಪಂದನೆ ಸಿಗಲಿಲ್ಲ. ಇದರಿಂದ ವಿಚಲಿತಗೊಳ್ಳದ ತಂಡ ಸಿನಿಮಾವನ್ನು ತೆಲುಗು ಭಾಷೆಗೆ ಡಬ್‌ ಮಾಡಿ ಶ್ರೀಮತಿ ಹೆಸರಿನೊಂದಿಗೆ ಯೂಟ್ಯೂಬ್‌ ಗೆ ಬಿಟ್ಟಿತು.

ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದಂತೆ . ಕನ್ನಡದಲ್ಲೂ ಯೂಟ್ಯೂಬ್‌ ನಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೇವಲ ಒಂದು ವಾರದಲ್ಲಿ 25 ಲಕ್ಷ ನಿಮಿಷಗಳ ವೀಕ್ಷಣೆ ಕಂಡು ಸ್ಟ್ರೀಮ್‌ ಆಗುತ್ತಿದೆ. ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್‌ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.

ಮಧ್ಯಮವರ್ಗದ ಗೃಹಿಣಿಯೊಬ್ಬಳ ಹೋರಾಟದ ಸುತ್ತ ಈ ಸಿನಿಮಾ ಸಾಗುತ್ತದೆ. ಡಾ.ಜಾನ್ವಿ ರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.