ಮನೆ ಮನರಂಜನೆ ಯು ಐ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡ್ಬೇಕಾ? ಎಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟ...

ಯು ಐ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡ್ಬೇಕಾ? ಎಂದು ಪ್ರೇಕ್ಷಕರ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್ ಉಪೇಂದ್ರ

0

Join Our Whatsapp Group

ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ಬಳಿಕ ನಿರ್ದೇಶಿಸಿ, ನಟಿಸಿರುವ ‘UI’ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಸಿನಿಮಾ ಪ್ರಮೋಷನ್ಗೆ ಚಿತ್ರತಂಡ ತಯಾರಿ ನಡೆಸಿದೆ. ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರನ್ ಸೀದಾ ಉಪ್ಪಿ ಮನೆಗೆ ಹೋಗಿ ಟೀಸರ್ ರಿಲೀಸ್ ಮಾಡೋಣ ಅಂದಿದ್ದಾರೆ. ಅದಕ್ಕೆ ಉಪ್ಪಿ ತಮ್ಮದೇ ಸ್ಟೈಲ್ ನಲ್ಲಿ ಟೀಸರ್ ಯಾಕೆ ಬಿಡಬೇಕು? ಎಂದು ಕೇಳಿದ್ದಾರೆ.

ಸೆಪ್ಟೆಂಬರ್ 18ಕ್ಕೆ ರಿಯಲ್ ಸ್ಟಾರ್ ಹುಟ್ಟಹಬ್ಬದ ಸಂಭ್ರಮದಲ್ಲಿ ‘UI’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ. ಬಹಳ ವರ್ಷಗಳ ನಂತರ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದರಿಂದ ನಿರೀಕ್ಷೆ ಗರಿಗೆದರಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

ಚಿತ್ರದಲ್ಲಿ ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ಸೇರಿದಂತೆ ದೊಡ್ಡ ತಾರಾಗಣ ‘UI’ ಚಿತ್ರದಲ್ಲಿದೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಹಾಗೂ ಮೊಕೊ ಬೋಟ್ ಕ್ಯಾಮರಾಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ‘UI’ ಚಿತ್ರವನ್ನು ಕಣ್ ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದರೆ .

ಹಿಂದಿನ ಲೇಖನಬ್ರಾಹ್ಮಣರಿಗೆ ಯಜ್ಞೋಪವೀತ, ಸಂಧ್ಯಾವಂದನೆಯ ಪುಸ್ತಕ, ಶಂಕರಾಚಾರ್ಯರ ಭಾವಚಿತ್ರಗಳುಳ್ಳ ಕಿಟ್ ವಿತರಣೆ
ಮುಂದಿನ ಲೇಖನಎಂಪಿ ಚುನಾವಣೆಗೆ 28 ಕ್ಷೇತ್ರದಲ್ಲಿ ಸ್ಪರ್ಧೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ