ಮನೆ ರಾಷ್ಟ್ರೀಯ ಶ್ರದ್ಧಾ ಹತ್ಯೆ ಪ್ರಕರಣ: ಮೆಹರೌಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು- ಡಿಎನ್‌’ಎ ಪರೀಕ್ಷೆಯಲ್ಲಿ ಸಾಬೀತು

ಶ್ರದ್ಧಾ ಹತ್ಯೆ ಪ್ರಕರಣ: ಮೆಹರೌಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದು- ಡಿಎನ್‌’ಎ ಪರೀಕ್ಷೆಯಲ್ಲಿ ಸಾಬೀತು

0

ನವದೆಹಲಿ(Newdelhi): ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಮೆಹರೌಲಿ ಅರಣ್ಯದಲ್ಲಿ ಸಿಕ್ಕಿದ್ದ ಮೂಳೆಗಳು ಶ್ರದ್ಧಾ ವಾಲ್ಕರ್ ಅವರದೇ ಎಂಬುದು ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ.

ಶ್ರದ್ಧಾ ತಂದೆಯ ಡಿಎನ್‌’ಎ ಜೊತೆಗೆ ಶ್ರದ್ಧಾ ಡಿಎನ್‌ಎ ಹೋಲಿಕೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕಿರುವುದರಿಂದ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರು ಮಾಡಿಕೊಳ್ಳುತ್ತಿದ್ದಾರೆ.

ಈ ಮೊದಲು ಅಫ್ತಾಬ್ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು.

ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ ಮೇ 18ರಂದು 26 ವರ್ಷದ ಶ್ರದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ್ದ. ಬಳಿಕ ಪೊಲೀಸರ ಕಣ್ಣು ತಪ್ಪಿಸಲು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿ ಎಸೆದಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್‌’ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಪ್ರಮುಖ ಸಾಕ್ಷ್ಯಗಳಾದ ‌ಹತ್ಯೆಗೆ ಸಂಬಂಧಿತ ಆಯುಧ , ಶ್ರದ್ಧಾ ಮೊಬೈಲ್‌ ಮತ್ತು ಕೊಲೆಯಾದ ದಿನ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯಲಾಗಿತ್ತು. ಪ್ರಮುಖ್ಯ ಸಾಕ್ಷ್ಯಗಳೇ ಲಭ್ಯವಾಗದಿರುವುದು ಪೊಲೀಸರಿಗೆ ವಿಚಾರಣೆಯಲ್ಲಿ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಇದೀಗ ಡಿಎನ್‌’ಎ ವರದಿ ಶ್ರದ್ಧಾ ಜೊತೆ ಹೋಲಿಕೆಯಾಗಿರುವುದರಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.