ಮನೆ Uncategorized ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚಮಹಾರಥೋತ್ಸವ

ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚಮಹಾರಥೋತ್ಸವ

0

ಮೈಸೂರು: ನಂಜನಗೂಡು ತಾಲ್ಲೂಕಿನ ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚಮಹಾರಥೋತ್ಸವವು ಬುಧವಾರ ನಸುಕಿನ 3.30ರಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ದೇಗುಲದಲ್ಲಿ ವಿಶೇಷ ಪೂಜಾಕೈಂಕರ್ಯಗಳನ್ನು ನಡೆಸಿದ ನಂತರ ಪಾರ್ವತಿ ಹಾಗೂ ಶ್ರೀಕಂಠೇಶ್ವರಸ್ವಾಮಿ ಅವರ ಉತ್ಸವ ಮೂರ್ತಿಯನ್ನು ನವರತ್ನ ಸಹಿತ ಶ್ರೀಕಂಠ ಮುಡಿಧಾರಣೆ ಮಾಡಿ ಪಲ್ಲಕ್ಕಿಯ ಮೂಲಕ ರಥದಲ್ಲಿ ಇರಿಸಲಾಯಿತು. ಪಂಚರಥಗಳಿಗೆ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ರಥೋತ್ಸವ ಆರಂಭವಾಯಿತು‌.

ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆ ನಂತರ ನಡೆಯುತ್ತಿದ್ದ ಜಾತ್ರೆಯು ಈ ಬಾರಿ ನಸುಕಿನಲ್ಲೆ ನಡೆದರೂ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆದಿರಲಿಲ್ಲ.

ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದ ಅಭಿಮಾನಿಗಳು:

ಪಂಚಮಹಾರಥೋತ್ಸವದಲ್ಲಿ ಕೆಲವರು ನಟ ಪುನೀತ್ ರಾಜಕುಮಾರ ಅವರ ಭಾವಚಿತ್ರ ಹಿಡಿದು ಅಭಿಮಾನ ಮೆರೆದರು.

ಪುನೀತ್ ಭಾವಚಿತ್ರ ಇರುವ ಕನ್ನಡ ಬಾವುಟ ಹಿಡಿದ ಅಭಿಮಾನಿಗಳು ದೇವರಿಗೂ ಹಾಗೂ ಪುನೀತ್ ಅವರಿಗೂ ಜಯಘೋಷ ಮೊಳಗಿಸಿದರು‌.