ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹೊಸಕೊಪ್ಪಲು
ನಿರ್ಗಣಾ ನಿರಹಂಕಾರ ಸರ್ವಗರ್ವವಿಮರ್ದಿನೀ
ಸರ್ವಲೋಕಪ್ರಿಯಾ ವಾಣೀ ಸರ್ವವಿದ್ಯಾಧಿದೇವತಾ
ಮಾರ್ಗ: ಬೆಂಗಳೂರು ಮಂಗಳೂರು ಹೆದ್ದಾರಿ 75 ಮಟ್ಟನ ವಿಲೆ ಇಂದ ಶ್ರವಣಬೆಳಗೊಳ ರಸ್ತೆಯಲ್ಲಿ ಮೂರು ಕಿಲೋಮೀಟರ್ ಅಷ್ಟೇ ಅಂತರದಲ್ಲಿದೆ.
ಡಾ ಶ್ರೀ ಬಸವೇಶ್ವರ ಚೈತನ್ಯ ಸ್ವಾಮಿಯವರು ಸ್ಥಾಪನೆ ಮಾಡಿರುವ ಈ ಮಠದಲ್ಲಿ ತಾಯಿ ಬರವಣಿಗೆ ಮೂಲಕ ಭವಿಷ್ಯವನ್ನು ಬರೆಯುವಂತದ್ದು.
ಈ ಮಠದ ವಿಶೇಷ ಬರವಣಿಗೆ ಮೂಲಕ ಸಾವಿರಾರು ಜನರಿಗೆ ಒಳಿತನ್ನು ಮಾಡುತ್ತಿರುವ ತಾಯಿಯ ಶ್ರೀ ಶಕ್ತಿಯ ಕಂಡವರು ಬಹಳ ಜನಗಳು ಇದ್ದಾರೆ.
ಈ ತಾಯಿಯ ವಿಗ್ರಹವು 490 ವರ್ಷಗಳ ಪುರಾತನ ಇತಿಹಾಸ ಹೊಂದಿದೆ ಪಿರಿಯಾಪಟ್ಟಣದ ರಾಜ ಈ ಕ್ಷೇತ್ರಕ್ಕೆ ಬಂದಾಗ ವಿಗ್ರಹವನ್ನು ಕೊಟ್ಟಿರುತ್ತಾರೆ ವಿಗ್ರಹವನ್ನು ತಂದು ಈ ಜಾಗದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದರು 1762 ನೇ ಇಸವಿಯಲ್ಲಿ ಈ ಜಾಗದಲ್ಲಿ ಬಹಳ ದೊಡ್ಡ ಕೆರೆ ಇರುತ್ತದೆ.
ಪಕ್ಕದ ಊರಿನ ಒಬ್ಬ ಹೆಣ್ಣು ಮಗಳು ಬಟ್ಟೆ ಒಗೆಯಲು ಕೆರೆಗೆ ಬಂದಾಗ ಕಾಲು ಜಾರಿ ಬೀಳುತ್ತಾಳೆ. ಆಕೆ ತುಂಬು ಗರ್ಭಿಣಿ ಆಗಿರುತ್ತಾಳೆ. ಆಕೆ ಇನ್ನೇನು ಜೀವ ಕಳೆದುಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲಿ ಕೆರೆಗೆ ಒಂದು ಶಾಪ ಹಾಕುತ್ತಾಳೆ.ನನ್ನ ಒಡಲನ್ನು ಯಾವ ರೀತಿ ಒಡೆಯುತ್ತೀಯೊ ಅದೇ ರೀತಿ ಕೆರೆಯ ಕೋಡಿ ಕೂಡ ಒಡೆಯಲಿ ಎಂದು ಶಾಪ ಹಾಕುತ್ತಾಳೆ.
ಕೆರೆಯ ಕೋಡಿಯು ಪೂರ್ಣವಾಗಿ ಒಡೆದು ಅಕ್ಕಪಕ್ಕದ ಊರುಗಳು ನಾಶವಾಗುತ್ತವೆ. ಅಂತಹ ಸಂದರ್ಭದಲ್ಲಿ 9 ನೇ ತಲೆಮಾರಿನ ಹಿರಿಯರು ದೇವರಿಗೆ ಶಾಪ ಹಾಕುತ್ತಾರೆ.
ನೀನು ಒಂದು ಹೆಣ್ಣಾಗಿ ಬೇರೆ ಒಂದು ಹೆಣ್ಣನ್ನು ಉಳಿಸಲಿಕ್ಕೆ ಆಗಲಿಲ್ಲ ಎಂದರೆ ನೀನು ಯಾರು ಎಂದು ಅಮ್ಮನವರಿಗೆ ಶಾಪ ಹಾಕುತ್ತಾರೆ. ಅದೇನೇಂದರೆ ಒಂಬತ್ತನೇ ತಲೆಮಾರಿನವರೆಗೂ ನಿನಗೆ ಪೂಜೆ ಪುನಸ್ಕಾರ ಇರುವುದಿಲ್ಲ ಭೂಮಿಯಲ್ಲಿ ಹುದುಗಿ ಹೋಗು ಎಂದು ಹೇಳುತ್ತಾರೆ.
ಆ ಮೂರ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮಣ್ಣಿನಲ್ಲಿ ಮಣ್ಣಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಶ್ರಮದವರಿಗೆ ಅಮ್ಮನವರು ಕನಸಿನಲ್ಲಿ ಬಂದು ನಾನು ಮಣ್ಣಿನಲ್ಲಿ ಹುದುಗಿದ್ದೆನೆ ಹೊರಗೆ ತೆಗೆಯಿರಿ ಎಂದು ಹೇಳಿದರಂತೆ.
ಅವರು ಮಂಗಳೂರಿನಿಂದ ಅಷ್ಟ ಮಂಗಳ ತಂತ್ರಿಗಳನ್ನು ಕರೆಯಿಸಿ ಪ್ರಶ್ನೆ ಹಾಕಿಸಿದಾಗ ಒಂದು ಉತ್ಸವ ಮೂರ್ತಿಯನ್ನು ಮಾಡಿಸಿ ಉತ್ಸವ ಮೂರ್ತಿ ಮಾಡಿಸಿದ ನಂತರ ಅಡಗಿ ಹೋಗಿರುವ ವಿಗ್ರಹವು ನಿಮ್ಮ ಕೈಗೆ ಸೇರುತ್ತದೆ ಎಂದಾಗ, ತಾಯಿ ಚೌಡೇಶ್ವರಿ ಅಮ್ಮನವರು ವಿರಾಜಮಾನವಾದಂತಹ ಬಹಳ ಒಳ್ಳೆಯ ಸುಂದರವಾದ ವಿಗ್ರಹವನ್ನು ಮಾಡಿಸಿ ಪ್ರಾಣ ಪ್ರತಿಷ್ಠೆಯಾದ ನಂತರದಲ್ಲಿ ಅಮ್ಮನವರು ಕಣಜ 8 ಅಡಿ ಕೆಳಭಾಗದಲ್ಲಿ ಆಗಿಸಿ ಅದರ ಒಳಗಡೆಯಿಂದ ಈ ವಿಗ್ರಹವನ್ನು ಮೇಲೆ ತೆಗೆದರು. ನಂತರ ದೈವ ಭಕ್ತರಾಗಿದ್ದ ಕುಟುಂಬದವರು ದೇವಿಗೆ ಗುಡಿಗೋಪುರ ಮಾಡಬೇಕು ಎಂದು ಯೋಚಿಸಿದರು.
ಡಾ. ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿಯವರು ಕುಣಿಗಲ್ ಅರೆ ಶಂಕರಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿಗಳಲ್ಲಿ ಸನ್ಯಾಸಿ ದೀಕ್ಷೆ ಪಡೆದು ಮಠ ಸ್ಥಾಪನೆ ಮಾಡಬೇಕೆಂದು ಬಸವ ತತ್ವದಲ್ಲಿ ಏಕೈಕವಾಗಿ ದೇವಿಯವರನ್ನು ಮೂಲವನ್ನಾಗಿ ಮಾಡಿ ಚೌಡೇಶ್ವರಿ ದೇವಿಶಕ್ತಿ ಮಠ ಎಂದು ಹೇಳಿ ಸ್ಥಾಪನೆ ಮಾಡಿದರು.
ಇವತ್ತಿನವರೆಗೂ ಕೂಡ ಅಮ್ಮನವರಿಂದ ಸಾವಿರಾರು ಭಕ್ತಾದಿಗಳು ಬಂದು ಅವರ ಕಷ್ಟ ಕಾರ್ಪಣ್ಯಗಳನ್ನು ತಿಳಿಸಿಕೊಂಡಿದ್ದಾರೆ.ಮತ್ತೊಂದು ವಿಶೇಷವೇನೆಂದರೆ ಇಲ್ಲಿ ಮಂಗಳಾರತಿ ತಟ್ಟೆಗೆ ವಿಳ್ಳೆದೆಲೆ ಅಡಿಕೆ ಮೇಲೆ ಮಡಲಕ್ಕಿಇಡುವಾಗ ಯಾವುದೇ ಹಣವನ್ನು ಕೊಡುವಂತಿಲ್ಲ.
ಹಣದ ಬೇಡಿಕೆ ಈ ಮಠದಲ್ಲಿ ಇಲ್ಲ ಅಮ್ಮನವರಿಗೆ ಹಾಲಿನ ಅಭಿಷೇಕ ನಡೆಯುವುದಿಲ್ಲ ಹಾಲು ಮೊಸರು ಹಾಕಿ ವ್ಯರ್ಥ ಮಾಡಬೇಡಿ ಬಡಮಕ್ಕಳಿಗೆ ಹೊಟ್ಟೆ ತುಂಬಿಸಿ ಎಂದು ಅಮ್ಮನವರೇ ನುಡಿದಿದ್ದಾರೆ.ಅದ್ದರಿಂದ ಅಮ್ಮನವರಿಗೆ ಹರಿದ್ರಾ ಕುಂಕುಮದಿಂದ ಅಭಿಷೇಕ ನಡೆಯುತ್ತದೆ. ಆದರೆ ಇದು ಮಠದಲ್ಲಿ ಯಾವ ಭಕ್ತಾದಿಗಳ ಮನೆಯಲ್ಲೂ ನಡೆಯುವುದಿಲ್ಲ. ನದಿ ಕೆರೆ ಸಮುದ್ರಗಳಲ್ಲಿ ಮಾತ್ರ ಅಮ್ಮನವರಿಗೆ ಅಭಿಷೇಕ ಮಾಡುತ್ತಾರೆ.
ಮತ್ತೊಂದು ವಿಶೇಷವೇನೆಂದರೆ ಭಕ್ತರ ಕಷ್ಟಗಳನ್ನು ಬಗೆಹರಿಸಲು ಸ್ವಂತ ಅಮ್ಮನವರು ಭಕ್ತರ ಮನೆಗೆ ಹೋಗುತ್ತಾರೆ ಯಾವುದೇ ದೇವಾಲಯಗಳಲ್ಲೂ ತೊಂದರೆ ಇದ್ದರೂ ಅಮ್ಮನವರು ಅಲ್ಲಿಗೆ ಕರೆದುಕೊಂಡು ಯಾಗ ಯಜ್ಞಗಳನ್ನು ಮಾಡಿಸಿ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ವಿಶೇಷವಾಗಿ ಪ್ರತಿ ಅಮಾವಾಸ್ಯೆಯಲ್ಲಿ ಅಮ್ಮನವರಿಗೆ ಉತ್ಸವ ಹಾಗೂ ಚಂದ್ರೋ ತ್ಸವಗಳನ್ನು ಭಕ್ತಾದಿಗಳು ಮಾಡಿಸುತ್ತಾರೆ.
ಅವರ ಕುಟುಂಬದ ಯಾವುದೇ ತೊಂದರೆಗಳಿದ್ದರೂ ನಿವಾರಣೆಯಾಗುತ್ತದೆ ಇಲ್ಲಿ ಮತ್ತೊಂದು ವಿಶೇಷವೇನೆಂದರೆ ಯಾರಿಗೆ ಆದರೂ ತೊಂದರೆಗಳಿದ್ದರೆ ಒಂದು ಯಾವ ಮಾಡಿಸಿ ಅಮ್ಮನವರ ಉತ್ಸವ ಮಾಡಿಸಿದರೆ ಅವರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ.ಅಮ್ಮನವರು ಅವರಲ್ಲಿನ ಶಿಲಾಮೂರ್ತಿ ಬೇಡವೆಂದು ಹೇಳಿದರು ಆದರೆ ತಾಯಿಯ ಮೂಲ ವಿಗ್ರಹವು ಪಿರಿಯಾಪಟ್ಟಣದಿಂದ ಬಂದಿದ್ದರಿಂದ ಆ ಕ್ಷೇತ್ರದ ಆದಿ ದೇವತೆ ಚೌಡೇಶ್ವರಿ ಅಮ್ಮನವರು ಒಮ್ಮೆ ತಾಯಿಯು ಕ್ರಿಯಾಪಟ್ಟಣಕ್ಕೆ ಹೋದಾಗ ಒಬ್ಬ ವ್ಯಕ್ತಿ ನೀನು ಶೀಲಾಮೂರ್ತಿಯನ್ನು ಮಾಡಿಕೊಡಬೇಕು ಎಂದು ಹೇಳಿ ಅವರಿಂದಲೇ ಸ್ಥಾಪನೆ ಗೊಳ್ಳಬೇಕು ಎನ್ನುವ ಇಚ್ಛೆಯಿಂದ ಬಂದು ವಿಗ್ರಹ ರೂಪದಲ್ಲಿ ಈ ಕ್ಷೇತ್ರದಲ್ಲಿ ನೆಲೆಗೊಳ್ಳಬೇಕೆಂದು ಇಚ್ಚಿಸಿದ್ದಾಳೆ.
ಆದರಿಂದ ಇಲ್ಲಿ ಗುಡಿಯು ನಿರ್ಮಾಣವಾಗಿದೆ.ಯಡಿಯೂರಿನದ ಹಾಗೆ ಮುಂದೆ ಒಂದು ಜಾಗದಲ್ಲಿ ಅಮ್ಮನವರು ಹತ್ತದ ಒಳಗಡೆಯಿಂದ ಒಂದು ಚಿನ್ನದ ವಿಗ್ರಹವನ್ನು ಕೂಡ ತೆಗೆದಿದ್ದಾರೆ ಇನ್ನೊಂದು ವಿಶೇಷವೇನೆಂದರೆ ಮಠದಲ್ಲಿ ರಾತ್ರಿ 12 ಗಂಟೆ ಸಮಯದಲ್ಲಿ ನಂದಿ ಹೋಗಿದ್ದ ದೀಪಾ ತಾನಾಗಿಯೇ ಬೆಳಗಿತ್ತಂತೆ.
ಭಕ್ತಾದಿಗಳ ಇಚ್ಛೆಯ ಮೇರೆಗೆ ಅಮ್ಮನವರು ಕೇರಳ ತಮಿಳುನಾಡು, ಮಂಗಳೂರು ಹಾಗೆ ಕೊಪ್ಪಳ ಇನ್ನಿತರ ಕ್ಷೇತ್ರಗಳಿಗೆ ಪ್ರಯಾಣ ಮಾಡಿದ್ದಾರೆ. ಶಕ್ತಿದೇವತೆ ಚೌಡೇಶ್ವರಿ ಅಮ್ಮನವರು ಈ ಕ್ಷೇತ್ರದಲ್ಲಿ ವಿರಾಜಮಾನರಾಗಿದ್ದಾರೆ.














