ಮೈತ್ರೇಯಾ! ಕೂಲಂಕುಶವಾಗಿ ಆಲೋಚಿಸಿದರೆ ಈ ಸ್ವರ್ಗ ನರಕಗಳು ಇಹಲೋಕದಲ್ಲಿಯೇ ಹೊರತು ಬೇರೆಲ್ಲಿಯೂ ಇಲ್ಲವೆಂದೇ ಅನಿಸುತ್ತದೆ. ಹೃದಯವು ಅಪಾರವಾದ ಅಮಿತವಾದ ಸಂತೋಷಾನುಭವಕ್ಕೆ ಸ್ಪಂದಿಸುವುದೇ ಸ್ವರ್ಗ, ಹೃದಯಕ್ಕೆ ದೋಷಗಳೆಲ್ಲಕ್ಕೂ ಪ್ರಾಯಶ್ಚಿತವೆಂಬುದು ಇದೆ. ದುಷ್ಕರ್ಮಗಳನ್ನು ಮಾಡಿರುವವರು ಅದಕ್ಕಾಗಿ ಉಪವಿಷ್ಟವಾದ ಸರಿಯಾದ ಪ್ರಾಯಶ್ಚಿತ್ವವನ್ನು ನಿರ್ವಹಿಸಿ ಪಾಪ ವಿಮೋಚನೆಯನ್ನು ಪಡೆಯಬಹುದೆಂದು ಶಾಸ್ತ್ರವು ಹೇಳುತ್ತದೆ. ಪೂರ್ವದಲ್ಲಿ ಸ್ವಾಯಂಭು ಮನುವು ಗೌತಮ, ಯಾಜ್ಞವಲ್ಕ್ಯ ಇತ್ಯಾದಿ ಮಹಾಮುನಿಗಳು ರೋಕೋಪಕಾರಾರ್ಥವಾಗಿ ಪಾಪಕರ್ಮಗಳಿಗೆ ಪ್ರಾಯಶ್ಚಿತ ವಿಧಿಗಳನ್ನು ಸಮಗ್ರವಾಗಿ ನಿರೂಪಿಸಿದರು. ಇದರಿಂದ ಪಾಪಫಲವು ಉಪಶಮನವಾಗಿ ನಿರವಧಿಕ ಪುಣ್ಯಲೋಕ ಸುಖಗಳುಂಟಾಗುತ್ತದೆ. ಮಗೂ!ಪ್ರಾಯಶ್ಚಿತವಿಲ್ಲದ ಪಾತಕ ಕರ್ಮಗಳಿಂದಲೂ ಸಹ ಮುಕ್ತಿಯನ್ನು ಪ್ರಸಾಧಿಸಿ, ಅಪೂರ್ವವಾದ ಪುಣ್ಯ ಫಲಾನುಭೋಗ್ಯಗಳನ್ನು ಕರುಣಿಸುವ ತರುಣೋಪಾಯವು ಶ್ರೀಮನ್ನಾರಾಯಣನ ನಾಮಸ್ಮರಣೆಯೊಂದೇ ಆಗಿದೆ.
ಊಹಗೋಚರವಾದಂತಹ ಸುಖ ಭೋಗಗಳಿಗೂ ಸ್ವರ್ಗಾಪವರ್ಗಗಳಿಗೂ ಅತೀತವಾದ ಕೈವಲ್ಯಪದವನ್ನು ಅಭಿಲಾಪಿಸುವ ಶೋಕಾರ್ಥರಿಗೆ ಶ್ರೀ ಮಹಾವಿಷ್ಣುವಿನ ನಾಮಸ್ಮರಣೆ ಜಪಗಳಿಗಿಂತಲೂ ಅನುಸರಿಸಬೇಕಾದ ಧರ್ಮವು ಮತ್ತೊಂದಿಲ್ಲ. ಅಧ್ಯಾತ್ಮ ತತ್ವಾನುಸಂಧಾನದಿಂದ ನಾಶವಾಗದ ಪಾಪಕ್ಷಯವು ಕ್ರತುದೀಕ್ಷಿತರಾಗಿ ದಾನ ಧರ್ಮಗಳನ್ನು ಮಾಡಿದರೂ ಲಯವಾಗದ ಪಾತಕವು ಜಪತಪಗಳನ್ನು, ವ್ರತ, ಉಪವಾಸಗಳನ್ನು ಆಚರಿಸಿದರೂ ತೊಲಗದ ದುಷ್ಕೃತ್ಯಗಳೂ ಸಹ ಭಕ್ತಿ ಸಂಯುತವಾಗಿ ಶ್ರೀ ಮನ್ನಾರಾಯಣನ ಹೃದಯಪದದಲ್ಲಿ ನೆಲೆಸಿ ‘ವೇದ ವೇದ್ಯಾ! ಭೋದಗಮ್ಮಾ! ನಾದಬ್ರಹ್ಮಾನಂದನಯನೇ! ತ್ರಿವಿಕ್ರಮನೇ ಚಕ್ರಪಾಣಿಯೇ! ಲೋಕಸನ್ನುತನೇ! ಅಚ್ಯುತಾ। ನಾರಾಯಣಾ। ಹೃಷಿಕೇಶಾಯ! ಕೇಶವಾಯ! ದಾಮೋದರಾಯ! ಗೋವಿಂದಾಯ! ಮುಕುಂದಾಯ ಪರಮಾನಂದನೇ! ಜನಾರ್ಧನನೇ! ದುಷ್ಟಸಂಪಾರಾ! ಶಿಷ್ಟ ರಕ್ಷಕಾ! ಪರಾತ್ಪರಾ। ಹರಿಯೇ! ದೈತ್ಯಾರೀ! ಮುರಾರೀ!” ಎಂದು ಮನಸಾರೆ ಸ್ಮರಿಸಿದಾಗ ಪಾಪ ಸಂಚಯಗಳೆಲ್ಲವೂ ತೊಲಗಿಹೋಗುತ್ತವೆ. ವಾಸುದೇವನು ಭಕ್ತರ ರಕ್ಷಣಾ ಕಳಾಪ್ರಪೂರ್ಣನು, ಆ ಪುಂಡರೀಕಾಕ್ಷನೊಂದಿಗೆ ಸ್ವಸ್ವರೂಪಾನುಸಂಧಾನವನ್ನು ಉಂಟುಮಾಡಿಕೊಂಡು ಶ್ರೀ ವಲ್ಲಭನ ದಿವ್ಯನಾಮ ಸಂಕೀರ್ತನೆಗಳೊಂದಿಗೆ ಜೀವನವನ್ನು ಬೆಳಗಿಸಿಕೊಂಡ ಮುಮುಕ್ಷುವರು ಅನಿತರ ಸಾಧ್ಯವಾದ ಕೈವಲ್ಯಭೋಗಗಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.
ಊರ್ಧ ಲೋಕಗಳ ಸ್ವರೂಪ :
ಪರಾಶರ ಮುನಿಗಳು ಹೇಳಿದ ನರಕಲೋಕ ನಿವಾರಕನಾದ ಶ್ರೀ ಮಹಾವಿಷ್ಣುವಿನ ದಿವ್ಯ ನಾಮದ ವೈಭವವನ್ನು ಭಕ್ತಿ ಪರವಶನಾಗಿ ಕೇಳಿದ ಮೈತ್ರೇಯನು ಪುಳಕಿತನಾಗಿ ಬೃಂದಾರಕ ಲೋಕದಲ್ಲಿನ ಕುಂದಾರವಿಂದ ಮಂದಾರ ಮಕರಂದ ಬಿಂದು ನಿಷ್ಯಂದವಾದ ಗೋವಿಂದ, ನಂದನಂದನಿಗೆ ನಮಸ್ಕರಿಸಿ, “ಮುನಿಗಳೇ! ನೀವು ಹೇಳಿದ ವಿಷ್ಣುವಿನ ನಾಮ ಸಂಕೀರ್ತನೆಯ ಮಹಿಮೆಯನ್ನು ಗ್ರಹಿಸಿದೆನು. ಆ ಮುಕುಂದನ ಪ್ರಭಾವವು ವಿಸ್ತರಿಸಿದ ಭುವರಾದಿ ಲೋಕಗಳ ಸ್ವರೂಪವನ್ನು ಸಂಪೂರ್ಣವಾಗಿ ವಿವರಿಸಿ ಹೇಳಿರಿ’ ಎಂದು ಪ್ರಾರ್ಥಿಸಿದನು. ಆಚಾರ್ಯ ವಚನಾ ಶುಶೂಷಾನಿರತನಾದ ಶಿಷ್ಯನ ಸಂಶಯಕ್ಕೆ ಉತ್ತರಿಸುತ್ತಾ ಪರಾಶರ ಮಹರ್ಷಿಯು ಊರ್ಧ ಲೋಕಗಳ ಸ್ವರೂಪ ವರ್ಣನೆಗೆ ಉಪಕ್ರಮಿಸಿದನು.
ಮೈತ್ರೇಯಾ! ಸೂರ್ಯ ಚಂದ್ರರ ದಿವ್ಯ ಕಾಂತಿರೇಖೆಗಳು ಪ್ರಸರಿಸಿ ದರ್ಶನೀಯವಾಗಿ ಗೋಚರಿಸುತ್ತಿರುವ ಈ ಚತುಸ್ಸಮುದ್ರವುಳ್ಳ ಧರಾವಲಯವು ಐವತ್ತು ಕೋಟಿ ಯೋಜನಗಳ ವೈಶಾಲ್ಯವನ್ನು ಹೊಂದಿದೆ. ಈ ಭೂತಳದ ಉಪರಿ ಭಾಗದಲ್ಲಿ ಅಷ್ಟೇ ಪ್ರಮಾಣ ವೈಶಾಲ್ಯವುಳ್ಳ ಆಕಾಶ ಮಂಡಲವು ಕಾಣಿಸುತ್ತದೆ.ಭೂಮಿಯಿಂದ ಶತ ಸಹಸ್ರ ಯೋಜನಗಳ ದೂರದಲ್ಲಿ ದೇದೀಪ್ಯಮಾನವಾದ ಸೂರ್ಯಮಂಡಲ, ಅಲ್ಲಿಂದ ಲಕ್ಷ ಯೋಜನಗಳ ದೂರದಲ್ಲಿ ದೂರದಲ್ಲಿ ಚಂದಮಂಡಲಗಳಿದ್ದು
ಹಗಲೂ ರಾತ್ರಿಗಳಿಗೆ ಮೂಲಕಾರಕಗಳಾಗಿವೆ. ಚಂದ್ರನಿಂದ ಲಕ್ಷ ಯೋಜನಗಳ ದೂರದಲ್ಲಿ ನಕ್ಷತ್ರ ಮಂಡಲ ಅಲ್ಲಿಂದ ಎರಡು ಲಕ್ಷ ಯೋಜನಗಳ ಆಚೆಗೆ ಬುಧ, ಶುಕ್ರ, ಅಂಗಾರಕ, ಬೃಹಸ್ಪತಿ, ಶನೇಶ್ವರ ಮಂಡಲಗಳು ಕ್ರಮವಾಗಿವೆ. ಶನಿ ಸ್ಥಾನದಿಂದ ಲಕ್ಷ ಯೋಜನಗಳ ದೂರದಲ್ಲಿ ಸಪ್ತರ್ಷಿ ಮಂಡಲ ಆನಂತರ ಸರ್ವೋಪಯೋಗಿ ಧ್ರುವಪದವು ಇದೆ. ಈ ಧ್ರುವ ಮಂಡಲದಲ್ಲಿಯೇ ಉತ್ಥಾನಪಾದನ ಪುತ್ರನೂ ಶ್ರೀ ಮಹಾವಿಷ್ಣುವಿನ ಕರುಣಾತಿರೇಕದಿಂದ ದಿವ್ಯ ವರಪ್ರಸಾದಿತನಾದ ಧ್ರುವನು ಸಾವಿರ ದಿವ್ಯ ಯುಗಗಳ ಪ್ರಮಾಣದೊಂದಿಗೆ ಆ ಕಲ್ಪಾತವೂ ಅಲ್ಲೇ ವಾಸವಿದ್ದು ಜ್ಯೋತಿಶ್ಚಕ್ರಕ್ಕೆ ಆಧಾರವಾಗಿದ್ದಾನೆ.
ಧ್ರುವ ಮಂಡಲಕ್ಕೆ ನೂರು ಲಕ್ಷ ಯೋಜನಗಳ ದೂರದಲ್ಲಿ ಮಹಾಸಂಪನ್ನವಾದ ಮಹಾರ್ಲ್ಲೋಕವಿದೆ. ಇದು ಯೋಗ ನಿಷ್ಠಾಗರಿಷ್ಟರಾದ ಸಂಯಮೀಂದ್ರರ ಆನಂದನಿಲಯ, ಕರ್ಮವಶಾನ ಭೂಮಂಡಲದ ಮೇಲೆ ನಿಂತು ತಮ್ಮ ಅಸಾಧಾರಣ ತಪೋಬಲದಿಂದ ಮಹರ್ ಲೋಕ ನಿವಾಸ ಭಾಗ್ಯಕ್ಕೆ ಅರ್ಹರಾದ ಭೃಗ್ವಾದಿ ಮಹಾ ಋಷಿಗಳು ಬ್ರಹ್ಮ ದಿನ ಪರ್ವಂತವು ಇಲ್ಲಿರುತ್ತಾರೆ. ಮಹರ್‌ಲೋಕದಿಂದ ಎರಡು ಯೋಜನಗಳ ಹೊರಗೆ ಜನಲೋಕವಿದೆ. ಕೇವಲ ಸತ್ಯರೂಪವಾದ ಶ್ರೀ ಮನ್ನಾರಾಯಣನ ಚರಣ ಸ್ಮರಣೆಯಿಂದ ಮುಕ್ತಿ ಶಿಖರಗಳನ್ನು ಅಧಿರೋಹಿಸಿದ ಸನಕ ಸನಂದ ಸನಾತನ ಸನತ್ಕುಮಾರರೂ ಮಹಾಯೋಗಿಗಳೂ ನಿವಾಸಿಸುವ ಪುಣ್ಯಕ್ಷೇತ್ರವಿದು. ದ್ರುವಪದಕ್ಕೂ ಏಕಾದಶ ಕೋಟಿ ಯೋಜನಗಳ ಹೊರಗೆ ತಪೋಲೋಕವಿದೆ. ಈ ಲೋಕವಾಸಿಗಳಾದ ವೈಬ್ರಾಜರು ದಿವ್ಯ ತೇಜೋಮಯಾತ್ಮರು. ಇವರ ಸಮ್ಮುಖದಲ್ಲಿ ಅಗ್ನಿಗೆ ದಾಹಕತ್ವ ಶಕ್ತಿಯಿಲ್ಲ. ತಪೋಲೋಕಕ್ಕೆ ಹನ್ನೆರಡು ಕೋಟಿ ಯೋಜನಗಳ ಹೊರಗೆ ಅಖಂಡ ಸಚ್ಚಿದಾನಂದ ಸ್ವರೂಪವಾದ ಸತ್ಯಲೋಕವಿದೆ. ನಿರ್ವಿಕಲ್ಪವಾದ ಈ ಬ್ರಹ್ಮ ಮಂಡಲದಲ್ಲಿ ಪ್ರಸಿದ್ದಿಯನ್ನು ಪಡೆದ ಮಹಾತ್ಮರಿಗೆ ಉತ್ತರ ಜನ್ಮಗಳ ಭಯವಿಲ್ಲ.
ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಭೂಮಂಡಲದ ಪಾದಚಾರಿಗಳಾದ ಮಾನವರಿಗೆ ಯಾನಗಮ್ಯ, ಕಾಶ್ಯಪ ಖಂಡದಿಂದ ಸೂರ್ಯ ಮಂಡಲದವರೆಗೂ ವಿಸ್ತರಿಸಿದ ವಾತಾವರಣ ಮಂಡಲಕ್ಕೆ ಭುವರ್ಲೋಕವೆಂದು ಕರೆಯುತ್ತಾರೆ. ಈ ಭುವರ್ಲೋಕವು ಕಾಮಗಮನರಾದ ಅಪ್ಸರೆಯರಿಗೂ, ಸಿದ್ಧ, ಸಾಧ್ಯ ಗಣಗಳಿಗೂ ನಿಲಯವಾಗಿದೆ. ಗಭಸ್ತಿ ಮದ್ಯೋಳದಿಂದ ಹದಿನಾಲ್ಕು ಲಕ್ಷ ಯೋಜನಗಳ ಪರ್ಯಂತಿಕ ದೇಶವೇ ಸ್ವರೋಕ, ಭೂರ್ಭುವಃ ಸ್ವರೋಕಗಳಿಗೂ, ಜನತಪಃ ಸತ್ಯ ಲೋಕಗಳಿಗೂ ನಡುವೆ ಕಾಣಿಸುವುದಳಳಮಹತ್ತೋಕ, ಭೂತಳದಿಂದ ಸ್ವರೋಕದವರೆಗೂ-
ವ್ಯಾಪಿಸಿರುವಂತಹವು ಕೃತಕ ಲೋಕಗಳು. ಇವು ಕಲ್ಪಾಂತದವರೆಗೂ ಸ್ಥಿತಿವಂತವಾಗಿದು ಸೃಷ್ಟಿ ಪ್ರಳಯಗಳು ನಡೆದಾಗ ಅಣಗಿಹೋಗುತ್ತವೆ. ಜನಲೋಕದಿಂದ ಸತ್ಯಲೋಕದವರೆಗೂ ಇರುವಂತಹವು ಅಕೃತಕ ಲೋಕಗಳು ಇವು ಪದ್ಯಭವನು ಇರುವಷ್ಟು ಕಾಲವೂ ಇದು ಆನಂತರ ಲಯವನ್ನು ಹೊಂದುತ್ತವೆ. ಸಪ್ತ ಲೋಕಗಳ ನಡುವೆ ಉದ್ದವಾದ ಮಹತ್ತೋಕ ಈ ಉಭಯ ಲಕ್ಷಣಲಕ್ಷಿತವಾದ ಕಲ್ಪಾಂತವು ಸಂಭವಿಸಿದ ಸಮಯದಲ್ಲಿ ಸ್ವಲ್ಪ ಸ್ವಲ್ಪವಾಗಿ ಲಯವಾಗುತ್ತಾ ಬ್ರಹ್ಮ ದಿನಾವಸಾನದಲ್ಲಿ ಊರ್ಧ ಲೋಕಗಳೊಂದಿಗೆ ಸಂಹೃತಿಯನ್ನು ಹೊಂದುತ್ತದೆ.
ಸೂರ್ಯಮಂಡಲ
ಭೂಮಂಡಲದ ಉತ್ತರಾಭಿಮುಖವಾಗಿ ಲಕ್ಷ ಯೋಜನಗಳ ದೂರದಲ್ಲಿ ಚತುರ್ಭುಜ ತೇಜೋಮೂರ್ತಿಯಾದ ಶ್ರೀ ಸೂರ್ಯ ನಾರಾಯಣನು ಮಹಾ ಪ್ರಮಾಣದ ದಿವ್ಯರಥವನ್ನು ಅಧಿರೋಹಿಸಿ ಲೋಕಗಳಿಗೆ ಕಾಂತಿಯನ್ನು ಪ್ರಸಾದಿಸುತ್ತಿದ್ದಾನೆ. ಅತ್ಯಂತ ವಿಶಾಲವಾದ ಸೂರ್ಯ ಸ್ಪಂದನವು ನೂರ ಐವತ್ತೇಳು ಲಕ್ಷ ಯೋಜನಗಳ ದೀರ್ಘವಾದ ಅಚ್ಚಿನ ಮೇಲೆ ನಿರ್ಮಿತವಾಗಿದೆ. ಈ ವಿಸ್ತಾರವಾದ ಅಚ್ಚಿಗೆ ಒಂದು ಕಡೆ ಮನುಷ್ಯನ ಕಾಲಮಾನಕ್ಕೆ ಆಧಾರಭೂತವಾದ ಕಾಲಚಕ್ರವನ್ನು ಜೋಡಿಸಲಾಗಿದೆ. ಕಾಲಚಕ್ರ ನಿರ್ಮಾಣವೂ ಸಹ ಅಸಾಧಾರಣವಾಗಿ ಗೋಚರಿಸುತ್ತದೆ. ಇದರ ನಡುವೆ ಮೂರು ರಂಧ್ರಗಳೂ ಸಹ ಇವೆ. ಚಕ್ರವನ್ನು ಸುತ್ತಿಕೊಂಡು ಐದು ಕಡಕಗಳು, ಬಾಹ್ಯ ಪರಿಧಿಯಲ್ಲಿ ಆರು ತುದಿಗಳು ಕಾಣಿಸುತ್ತವೆ. ಕಾಲಚಕ್ರವು ಒಮ್ಮೆ ಆವೃತಿಯನ್ನು ಹೊಂದಿದಾಗ ಮಾನವರಿಗೆ ಶರತ್ಸ ಮಾಪನವಾಗಿ ಮತ್ತೆ ವರ್ಷಾರಂಭವಾಗುತ್ತದೆ. ಸೂರ್ಯರಥಕ್ಕೆ ಕಾಲಚಕ್ರವನ್ನು ಜೋಡಿಸಿದ ಅಚ್ಚಿಗೆ ಮತ್ತೊಂದು ಕಡೆಗೆ ಲಂಬಮಾನವಾಗಿ ಒಂದು ಉದ್ದವಾದ ಮರದ ದಿಂಡು ಇದೆ. ಈ ದಿಂಡಿನ ಅಗ್ರಭಾಗದಿಂದ ಎಳೆದು ಕಟ್ಟಿದ ಹಗ್ಗಗಳನ್ನು ಜ್ಯೋತಿಶ್ಚಕ್ರ ಸಂಯುತನಾದ ಧ್ರುವನ ಬಲಗೈಯಲ್ಲಿ ಪಟ್ಟು ಸಡಿಲಿಸದಂತೆ ಬಿಗಿಯಾಗಿ ಹಿಡಿದಿಡಲಾಗಿದೆ.
ರವಿಸ್ಯಂದನಕ್ಕೆ ಕಟ್ಟಿದ ಮರವೂ ಸಹ ತುಂಬಾ ದೀರ್ಘವಾದುದು. ಆದರೆ ರಥದ ಕಾಡನ್ನು ಇದಕ್ಕೆ ಸರಿಯಾಗಿ ಮಧ್ಯ ಭಾಗದಲ್ಲಿ ಕಟ್ಟಲಿಲ್ಲ, ಏಕೆಂದರೆ ಕುದುರೆಗಳು ಬೆಸ ಸಂಖ್ಯೆಯಲ್ಲಿರುವುದರಿಂದ ಮರವನ್ನು ಚಾಚಿದ ಕಡೆಯಿಂದ ಬಲಗಡೆಗೆ ನೂರ ಐವತ್ತು ಏಳು ಲಕ್ಷ ಯೋಜನಗಳ ಉದ್ದವುಳ್ಳ ಜಾಗದಲ್ಲಿ ನಾಲ್ಕು ರಥಾಶ್ವಗಳನ್ನು ಎಡಗಡೆಗೆ ನಲವತ್ತೈದು ಲಕ್ಷ ಯೋಜನಗಳ ಉದ್ದವುಳ್ಳ ಕಡೆಯಲ್ಲಿ ಮೂರು ರಥಾಶ್ಚಗಳನ್ನು ಜೋಡಿಸಲ್ಪಟ್ಟಿವೆ. ರಥದ ಕಾಡಿಗೂ ಸಹ ಹೊರಗಿನ ಕಡೆಗೆ ಎತ್ತರವಾದ ಉದ್ದನೆಯ ದಿಂಡು ಇದೆ. ರಥದ ಎರಡೂ ಕಡೆಗಳಲ್ಲಿ ಒಂದಕ್ಕೊಂದು ಎದುರು ಬದುರಾಗಿರುವ ದಿಂಡುಗಳು ಬೇರೆ ಬೇರೆ ಕೋನ ಪ್ರಮಾಣವನ್ನು ಹೊಂದಿರುವುದರಿಂದ ಸೂರ್ಯರಥವೂ ಸಹ ಆಲೆಮನೆಯ ಎತ್ತಿನಂತೆಯೇ ಯಾವಾಗಲೂ ಗುಂಡಾಗಿ ಸುತ್ತುವುದಕ್ಕೆ ಆಗುತ್ತಿದೆ. ಧ್ರುವನ ಕರಗತವಾದ ರಶನಗಳ ಉದ್ದ ಬೆಳೆದಾಗ ದೂರವೂ ಹೆಚ್ಚಾಗಿ ದಕ್ಷಿಣಾಯನವೂ, ಕಡಿಮೆಯಾದಾಗ ದೂರವು ಕಡಿಮೆಯಾಗಿ ಉತ್ತರಾಯಣವೂ ಏರ್ಪಡುತ್ತವೆ. ಪುಷ್ಕರ ದ್ವೀಪದಲ್ಲಿನ ಮಾನಸೋತ್ತರ ಭೂಮಿಗಳ ಮೇಲೆ ಸೂರ್ಯರಥಕ್ಕೂ ಕಟ್ಟಿದ ಕಾಲಚಕ್ರವು ಅಲುಗಾಡುತ್ತಿದ್ದಾಗ ಅದರ ಪ್ರಭಾವದಿಂದ ಪುಷ್ಕರ ದ್ವೀಪದ ವಾಸಿಗಳಿಗೆ ಕಾಲ ಪರಿಗತಿಯು ಪ್ರತಿವರ್ಷವೂ ತಿಳಿಯಲ್ಪಡುತ್ತಿದೆ. ಸ್ವಚ್ಚಂದವಾದ ಶ್ರೀ ಸೂಯ್ಯಸ್ಯಂದನಕ್ಕೆ ಷಡ್‌ವಂಶತಿಚ್ಚಂದಗಳಲ್ಲಿನ ಏಳು ಪವಿತ್ರಾಕೃತಿಗಳು. ಗಾಯತ್ರಿ (ಇದು ಪಾದಕ್ಕೆ ಆರರಂತೆ ಅಕ್ಷರಗಳುಳ್ಳ ಷಷ್ಟಚ್ಚಂದ. ಪ್ರಸ್ತಾರ ವಶದದ ಮೂಲಕ ಇದರಿಂದ ಅರವತ್ನಾಲ್ಕು ಸಮವೃತ್ತಗಳು ಜನಿಸಿದವು) ಬೃಹತಿ (ಇದು ನವಮಚ್ಚಂದ. ಇದರಲ್ಲಿ ಪ್ರತಿ ಚರಣದಲ್ಲಿಯೂ ಒಂಭತ್ತರಂತೆ ವರ್ಣಗಳು ಪ್ರಸ್ತಾರ ಮಾಡಲು ಐದು ನೂರ ಹನ್ನೆರಡು ಸಮವೃತ್ತಗಳು ಕಾಣಿಸುತ್ತಿವೆ) ಉಷ್ಟಿಕ್ಕು (ನೂರ ಇಪ್ಪತ್ತೆಂಟು ಸಮ ವೃತ್ತಗಳನ್ನುಳ್ಳ ಈ ಸಪ್ತ ಮಚ್ಚಂದದಲ್ಲಿ ಒಂದೊಂದು ಪಾದಕ್ಕೂ ಏಳು ವರ್ಣಗಳನ್ನು ಸೇರಿಸಲಾಗಿದೆ) ಜಗತಿ (ಹನ್ನೆರಡನೆಯ ಚಂದವಾದ ಈ ರೂಪದಲ್ಲಿ ಚರಣಕ್ಕೆ ದ್ವಾದಶಾಕ್ಷರಗಳು ಗುರು ಲಕ್ಷಣಗಳ ವಿನ್ಯಾಸ ಬೇಧದಿಂದ ನಾಲ್ಕು ಸಾವಿರದ ತೊಂಭತ್ತಾರು ಸಮವೃತ್ತಗಳು ಏರ್ಪಟ್ಟಿವೆ) ತ್ರಿಷ್ಟುಪ್ಪು (ಏಕಾದಶಚ್ಚಂದವಾದ ಇದರಲ್ಲಿ ಎರಡು ಸಾವಿರ ನಲವತ್ತೆಂಟು ಸಮವೃತ್ತ ಬೇಧಗಳು ಪಾದಕ್ಕೆ ಹನ್ನೊಂದು ವರ್ಣಗಳಂತೆ ಏರ್ಪಟ್ಟಿವೆ. ಅನುಷ್ಟುಪ್ಪು (ಪ್ರಸಿದ್ಧವಾದ ಈ ಅಷ್ಟಮಚ್ಚಂದದಲ್ಲಿ ಪಾದಕ್ಕೆ ಎಂಟು ವರ್ಣಗಳಂತೆ ಗುರು ಲಘು ಸ್ಥಾನ ವಿನಿಮಯಗಳಿಂದ ಎರಡು ನೂರು ಐವತ್ತಾರು ಸಮವೃತ್ತಗಳು ಹುಟ್ಟಿವೆ) ಪಂಕ್ತಿ (ಈ ದಶಮಚ್ಚಂದದಲ್ಲಿ ಪ್ರತಿಯೊಂದು ಚರಣಕ್ಕೂ ಹತ್ತು ಅಕ್ಷರಗಳಿವೆ. ಇದರಲ್ಲಿ ಪ್ರಸ್ತಾರವಶದಲ್ಲಿ ಸಾವಿರದ ಇಪ್ಪತ್ನಾಲ್ಕು ಸಮವೃತ್ತಗಳಿವೆ. ಈ ಎಲ್ಲಾ ಛಂದಗಳಲ್ಲಿಯೂ ಇವೇ ಅಲ್ಲದೇ ಇನ್ನೂ ಅನೇಕ ಗತಿಬೇಧಗಳು ಶಾಸ್ತ್ರದೃಷ್ಟಿಗೆ ಗೋಚರಿಸುತ್ತವೆ. ಅವೆಲ್ಲವೂ ತುರಂಗಗಳಾಗಿ ಸುತ್ತುತ್ತಿರುತ್ತವೆ.
ಸಂಸ್ಕೃತ ರೂಪದಲ್ಲಿ ಲಭಿಸುತ್ತಿರುವ ವಿಷ್ಣುಪುರಾಣದಲ್ಲಿನ ಸ್ವರೂಪವು ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ. ಬೇರೆ ಬೇರೆ ಅನುವಾದಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಅಳತೆಗಳನ್ನು ಸೂಚಿಸಲಾಗಿದೆ. ಓದುಗರು ಈ ವ್ಯತ್ಯಾಸಗಳನ್ನು ತಿಳಿದಿರುತ್ತಾರೆಂದು ಬಯಸಿದ್ದೇನೆ. ಆದರೆ ಇಲ್ಲಿ ನಾನು ಪ್ರಸ್ತಾಪಿಸಿದ ಅಳತೆಗಳು ಸಮಂಜಸವಾದುದೆಂದು ತಿಳಿದಿದ್ದೇನೆ. ಮತ್ತ್ವ ಪುರಾಣದಲ್ಲಿ ಪ್ರಸ್ತಾಪಿಸಿದ ಸೂರ್ಯರಥ ಪ್ರಮಾಣವು ಮತ್ತೊಂದು ರೀತಿಯಲ್ಲಿದೆ. ಇದರ ಪ್ರಕಾರ ರಥದ ಉದ್ದ, ಅಗಲ ಹತ್ತು ಸಾವಿರ ಯೋಜನಗಳ ವಿಸ್ತಾರದೊಂದಿಗೆ ಚೌಕಾಕಾರದಲ್ಲಿದೆ. ವಾಯು ಪುರಾಣವೂ ಸಹ ಇದೇ ರೀತಿಯಾಗಿ ಹೇಳುತ್ತದೆ. ಆದರೆ ಭಾಗವತ ಪುರಾಣದಲ್ಲಿ ರಥ ಭಾಗದ ಉದ್ದ ಮೂವತ್ತಾರು ಲಕ್ಷ ಯೋಜನಗಳು ಅಗಲ ಒಂಭತ್ತು ಲಕ್ಷ ಯೋಜನೆಗಳೆಂದು ಹೇಳಲಾಗಿದೆ. ಲಿಂಗ ಪುರಾಣವು ಭಾಗವತ ಪುರಾಣದೊಂದಿಗೆ ಏಕೀಭವಿಸುತ್ತದೆ. ಕಾಲಚಕ್ರಕ್ಕಿರುವ ನಾಭಗಳು ಮೂರೂ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗಳಿಗೆ ಸಂಕೇತವೆಂದು ವಿಷ್ಣು ಪುರಾಣದ ವ್ಯಾಖ್ಯಾತರು ಬರೆದಿದ್ದಾರೆ. ತುದಿಗಳು ಐದು, ಐದು ವರ್ಷಗಳೆಂದೂ ಪ್ರಭವಾದಿಯಿಂದ ಅರವತ್ತು ವರ್ಷಗಳಾಗುವುದಕ್ಕೆ ಹನ್ನೆರಡು ಆವೃತಗಳಾಗುತ್ತವೆಂದು ಚಕ್ರಕ್ಕಿರುವ ಕಡಕಗಳು ಆರೂ, ಆರು ಋತುಗಳಿಗೆ ಪ್ರತೀಕವೆಂದು ಅವರ ಭಾವನೆ. ಆದರೆ ಮೂಲದಲ್ಲಿ ಇದರ ವಿವರಣೆಯಿಲ್ಲ. ಭಾಗವತಾ ಪುರಾಣದ ಪ್ರಕಾರ ಕಾಲಚಕ್ರದ ರಂಧ್ರಗಳು ಮೂರು ಬೇಸಿಗೆ, ಮಳೆ, ಚಳಿಗಾಲಗಳನ್ನು ಸೂಚಿಸುತ್ತವೆಯೆಂದು, ಚಕ್ರದ ತುದಿಗಳು ಐದಲ್ಲದೇ ಹನ್ನೆರಡು ಇವು ಹನ್ನೆರಡು ತಿಂಗಳುಗಳನ್ನು ಏರ್ಪಡಿಸುತ್ತವೆಯೆಂದು ತಿಳಿಯುತ್ತಿದೆ. ಭವಿಷ್ಯ, ಮತ್ತ್ವ, ವಾಯು, ಪುರಾಣಗಳಲ್ಲಿ ಹರಿದಶ್ವರಥದ ವರ್ಣನೆಯು ಸ್ವಲ್ಪ ವಿಸ್ತತವಾಗಿ ಗೋಚರಿಸುತ್ತದೆ. ರಥದಲ್ಲಿ ಚೋದಕನು ಕುಳಿತುಕೊಳ್ಳುವ ಭಾಗವು ವರ್ಷಕ್ಕೆ ಕಾರಕ. ರಥದ ಕಾಡಿಗೂ ಅಚ್ಚಿಗೂ ಬಿಗಿಸಿರುವ ಮೇಕುಗಳು ಅರ್ಥಕಾಮಗಳಿಗೆ ಗುರುತುಗಳು ರಥದ ತಳದಲ್ಲಿ ಬಿಗಿಸಿರುವ ಚಕ್ರವು ರಾತ್ರಿ, ಕಾಲಮಾನದಲ್ಲಿ ನಿಮೇಷಾಗಳೇ ರಥಚಕ್ರದ ಯಾನಗಮ್ಯಗಳು. ಭಾಗವತ ಪುರಾಣವೂ ಸಹ ವಿಷ್ಣು ಪುರಾಣದ ಮೂಲ ಪಾಠದಂತೆ ಸ್ಯಂದನಕ್ಕೆ ಎರಡು ಅಚ್ಚುಗಳಿವೆಯೆಂದು, ದೊಡ್ಡ ಅಚ್ಚು ಪ್ರಮಾಣದಲ್ಲಿನ ನಾಲ್ಕನೇ ಒಂದು ಭಾಗ ಸಣ್ಣ ಅಚ್ಚು ಪ್ರಮಾಣದಲ್ಲಿರುತ್ತದೆ. ಅಂದರೆ ಮೂವತ್ತೈದು ಲಕ್ಷ ಇಪ್ಪತ್ತೈದು ಸಾವಿರ ಯೋಜನಗಳೆಂದು ಹೇಳಲಾಗಿದೆ. ಮಹಾಭಾರತದ ಆದಿಪರ್ವದಲ್ಲಿ ಈ ಕಾಲ ನಿಯಮವು ರವಿರಥದಿಂದಲ್ಲದೇ ಮತ್ತೊಂದು ರೀತಿಯಲ್ಲಿ ಹೇಳಲ್ಪಟ್ಟಿದೆ. ಪಾತಾಳ ಲೋಕದಲ್ಲಿ ದಾತ, ವಿಧಾತರು ಸ್ತ್ರೀರೂಪದಲ್ಲಿ ಬಿಳುಪು ಮತ್ತು ಕಪ್ಪನೆಯ ದಾರಗಳನ್ನು ನೇಯುತ್ತಿರುತ್ತಾರೆ. ಆ ದಾರಗಳೇ ಹಗಲು ರಾತ್ರಿಗಳು. ಹನ್ನೆರಡು ಓಲೆಗಳುಳ್ಳ ಕಾಲ
ಚಕ್ರವನ್ನು ಆರು ಜನ ಗಂಡು ಮಕ್ಕಳು ಯಾವಾಗಲೂ ಪರಿವರ್ತಿಸುತ್ತಿರುತ್ತಾರೆ.
ದ್ವಾದಶಾ ಚಕ್ರವು ಹನ್ನೆರಡು ತಿಂಗಳುಗಳ ವರ್ಷಕ್ಕೆ, ಮಕ್ಕಳು ಆರು ಜನರೂ ಋತುಗಳಿಗೆ ಸಂಕೇತವೆಂದು ಹೇಳಲಾಗಿದೆ. ಇದರಿಂದ ಮಹಾಭಾರತಕ್ಕೂ, ವಿಷ್ಣು ಪುರಾಣಕ್ಕೂ, ವೈಷಮ್ಯವಿದೆಯೆಂದು ಭಾವಿಸಬಾರದು. ಉದರಿಕೋಪಾಖ್ಯಾನದಲ್ಲಿ ಶಿಷ್ಯನಿಗೆ ಪೈಲ ಮಹರ್ಷಿಯು ವಿಶದೀಕರಿಸಿರುವುದು ಪಾತಾಳ ಲೋಕದ ಸ್ವರೂಪ ಪ್ರಕೃತಾರ್ಥ ವಿಷ್ಣು ಪುರಾಣದಲ್ಲಿ ಹೇಳಿರುವುದು ಭೂಲೋಕ ವಾಸಿಗಳಿಗೆ ಅನುಭೂಯಮಾನವಾದ ಕಾಲಸ್ವರೂಪ. ಇವೆರಡರ ಪ್ರಮಾಣವು ಬೇರೆ ಬೇರೆಯೆಂದು ಪರಾಶರನು ಮೈತ್ರೇಯರೊಂದಿಗೆ ಹೇಳಿದನು. ಭಾರತೀಯ ಶಿಲ್ಪಿಗಳಲ್ಲಿ ಚಿತ್ರಿತವಾದ ಸೂರ್ಯರಥವು ಭೋದಾಯನ ಶುಲ್ಬ ಸೂತ್ರಗಳನ್ನು ಅನುಸರಿಸಿದಂತೆ ನಾವು ಸುಲಭವಾಗಿಯೇ ಊಹಿಸಬಹುದು. ಋಗ್ರೇದದ ಆರ್ಯರು ಉಪಯೋಗಿಸಿದ ರಥ, ಕ್ರಿಸ್ತ ಪೂರ್ವ ಸಹಸ್ರಾಬ್ದದಲ್ಲಿ ಈಜಿಪ್ಟ್, ಯೂರೋಪಿಯಲ್ಲಿನ ಶಿಲಾಯುಗಗಳಲ್ಲಿನ ಮಾನವರು ನಿರ್ಮಿಸಿದ ರಥವು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುವಂತಹವೇ. ಮಾನಸೋತ್ತರ ಮಹಾಶೈಲವು ಪೂರ್ವ ಸಾನುವರ ಮೇಲೆ ಪಾಕಶಾಸನನು ಪರಿಪಾಲಿಸುತ್ತಿದ್ದ ವಸ್ವೌಕಸಾರಾಪುರವು ದಿವೌಕಸರಿಗೆ ನಿಲಯವಾಗಿ ನೆಲೆಸಿದೆ. ಬಿಡೌಜ ರಾಜಧಾನಿಗೆ ಆಗ್ನೆಯ ದಿಕ್ಕಿನಲ್ಲಿ ಯಮಧರ್ಮರಾಜನ ಅಧೀನವಾಗಿ ನೆಲೆಸಿರುವ ಸಂಯಮನೀಪುರವು ಗೋಚರಿಸುತ್ತದೆ. ಯಮಪುರಿಯ ಉತ್ತರ ದಿಕ್ಕಿನಲ್ಲಿ ಸೋಮದೇವನ ಆವಾಸವಾದ ವಿಭಾವರೀಪುರವೂ, ಮಾನಸೋತ್ತರಕ್ಕೆ ಅಪರಸಾನುಗಳ ಮೇಲೆ ವರುಣದೇವನ ಆಳ್ವಿಕೆಯಲ್ಲಿನ ಮುಖ್ಯ ಪಟ್ಟಣಗಳು ಇವೆ. ಈ ರೀತಿಯಾಗಿ ಪುಷ್ಕರ ದ್ವೀಪದಲ್ಲಿನ ಮಾನಸೋತ್ತರ ಪರ್ವತಗಳ ಮೇಲೆ ನೆಲೆಸಿದ ಪಟ್ಟಣಗಳು ನಾಲ್ಕು ಅನೇಕ ಯೋಜನಗಳ ವೈಶಾಲ್ಯವನ್ನು ಹೊಂದಿದ್ದು ಸೂರ್ಯಕಾಂತಿ ಪೌಷ್ಕಲ್ಯದಿಂದ ಅಭಿವರ್ಣನೀಯ ತೇಜೋಭಿರಾಮವಾಗಿ ರೂಪೊಂದಿವೆ.
ಆಕಾಶ ಮಧ್ಯದಲ್ಲಿ ಸೂರ್ಯನು ಅವ್ಯಯವಾಗಿ ಪ್ರಕಾಶಿಸುತ್ತಿದ್ದಾಗ ಭೂತಲದ ಮೇಲಿನ ಪರಸ್ಪರಾಭಿಮುಖವಾಗಿರುವ ದ್ವೀಪಗಳಲ್ಲಿ ಒಂದು ಕಡೆ ಹಗಲು, ಮತ್ತೊಂದು ಕಡೆ ರಾತ್ರಿಗಳು ಏಕಕಾಲದಲ್ಲಿ ಸಂಭವಿಸುತ್ತವೆ. ಅಂಧಕಾರಾವರಣದಿಂದ ಆದಿತ್ಯ ದರ್ಶನವಾದಾಗ ಸೂರ್ಯೋದಯವಾಗಿದೆಯೆಂದು ಸೂರ್ಯ ತೇಜೋಮೂರ್ತಿಯು ಕಾಣಿಸದೇಯಿದ್ದಾಗ ಸೂರ್ಯಾಸ್ತಮಯವಾಗಿದೆಯೆಂದು ಸಂಭಾವಿಸುತ್ತೇವೆಯೇ ಹೊರತು ನಿತ್ಯನಾದ ಆದಿತ್ಯನಿಗೆ ಉದಯಾಸ್ತಮಾನಗಳ ವಿಕಲ್ಪಗಳು ಇಲ್ಲ. ಭೂಲೋಕವಾಸಿಗಳಿಗೆ ಕಮಲಾಪ್ತ ದೀಪ್ತಿ ಕಷ್ಟಸುಖಗಳಿಂದ ದಿನ ರಾತ್ರಿಗಳುಂಟಾಗುತ್ತವೆ. ಫಡಿಯಗಳು, ನಿಮಿಷಗಳ ಗಣನೆಯು ಏರ್ಪಡುತ್ತದೆ. -ರೀತಿಯಾಗಿ ಅಖಂಡ ಕಾಲಸ್ವರೂಪನಾದ ಸಾಕ್ಷಾತ್ ಮಹಾವಿಷ್ಣು ಶ್ರೀ ಸೂರ್ಯ ನಾರಾಯಣನ ತೇಜೋ ದರ್ಶನದಿಂದ ಖಂಡವಾಗಿ ವಿದ್ಯೋತಿಸಿ ಲೋಕದಲ್ಲಿ ಜ್ಯೋತಿರ್ವಿದ್ಯೆಯು ಅವಿರ್ಭವಿಸಿತು.
ಭೂಮಂಡಲಕ್ಕೆಪ್ರಾಕ್ಷಶ್ಚಿಮ, ದಕ್ಷಿಣೋತ್ತರ ಭಾಗಗಳಲ್ಲಿ ಯಾವ ಕಡೆಯಲ್ಲಿ ಸೂರ್ಯನು ಇರುತ್ತಾನೆಯೋ ಆ ಸ್ಥಾನವನ್ನಿಡಿದು ಮಾನಸೋತ್ತರಕ್ಕೆ ಆ ಕಡೆಯಿರುವ ಮೂರು ಪುರಗಳಲ್ಲಿ ಸೂರ್ಯರಶ್ಮಿಯು ವ್ಯಾಪಿಸುತ್ತದೆ. ಅಪಾಂಮಿತ್ರನಿಗೂ ಸಮೀಪವರ್ತರಿಗೂ ಬೆಳಕು, ದೂರ ಚರಿಷ್ಣುವರಿಗೂ ಕತ್ತಲುಗಳುಂಟಾಗುತ್ತವೆ. ಆಕಾಶದ ಮಧ್ಯ ಭಾಗದಲ್ಲಿ ಮಾರ್ತಾಂಡ ಮಯೂಖಗಳು ಬೆಳಗುತ್ತಿದ್ದಾಗ ವಸ್ವೌಕಸಾಪುರದಲ್ಲಿ ಪ್ರಾಭಾತ, ಸಂಯಮನಿಯಲ್ಲಿ ಮಧ್ಯಾಹ್ನ, ಮುಖ್ಯಪುರದಲ್ಲಿ ಸಾಯಾಹಣಂ, ವಿಭಾರಿಯಲ್ಲಿ ಮಧ್ಯರಾತ್ರಿಗಳು ಏಕ ಸಮಯದಲ್ಲಿ ಉಂಟಾಗುತ್ತವೆ. ಈ ಪ್ರಭಾವವು ಒಂದೊಂದು ಮಂಡಲದಲ್ಲಿ ಮೂವತ್ತು ಮುಹೂರ್ತಗಳ ಪರ್ಯಂತವು ಪ್ರಸರಿಸಿ ಅನಂತರೀಯ ಕಾಲವು ಪ್ರವೇಶಿಸುತ್ತಿರುತ್ತದೆ. ಈ ಪುರಗಳಲ್ಲಿ ಸೂರ್ಯನು ಉದಯಿಸಿದ ದಿಕ್ಕಿಗೆ ಪೂರ್ವವೆಂದು, ಅಸ್ತಮಿಸಿದ ದಿಕ್ಕಿನ ಭಾಗಕ್ಕೆ ಪಶ್ಚಿಮವೆಂದು ಸಂಜ್ಞೆಗಳು ವರ್ತಿಸುತ್ತವೆ.