ಮನೆ ದೇವಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಅನಾಥ ಸೇವಾಶ್ರಮ

ಶ್ರೀ ರಾಘವೇಂದ್ರ ಸ್ವಾಮಿಗಳ ಅನಾಥ ಸೇವಾಶ್ರಮ

0

ಮಾಲ್ಲಾಡಿ ಹಳ್ಳಿ ಚಿತ್ರದುರ್ಗ ಜಿಲ್ಲೆ,ಹೊಳಲ್ಕೆರೆ  ತಾಲ್ಲೂಕು.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೆೈ ಶ್ರೀ ಗುರುವೇ ನಮಃ 

Join Our Whatsapp Group

      ಈ ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಜಿಯವರು ಶಿಸ್ತು ಆಯುರ್ವೇದ,ಯೋಗ ಇದಕ್ಕೆ ಪ್ರಸಿದ್ಧಿಯಾದವರು. ಇವರ ಭಂಟನಾಗಿ ಇವರ ಸೇವೆ ಸಲ್ಲಿಸುತ್ತಿದ್ದ ಸೂರ್ದಾಸ್ ಸ್ವಾಮಿಜಿಯವರು ಒಬ್ಬರು. ಅವರು ಸಹ ರಾಘವೇಂದ್ರ ಸ್ವಾಮಿಜಿಯವರು ಹಾಕಿದ ಹಾದಿಯಲ್ಲಿ ನಡೆದು ಬಂದವರು.

  ಶ್ರೀ ರಾಘವೇಂದ್ರ ಸ್ವಾಮೀಜಿಯವರು ಈ ಕ್ಷೇತ್ರಕ್ಕೆ 1946ನೇ ಇಸಿವಿಯಲ್ಲಿ ಪಾದರ್ಪಣೆ ಮಾಡಿದವರು. ಅವರು ಮೊದಲು ಬಂದಾಗ ಅವರಿಗೆ ಯಾವುದೇ ರೀತಿಯ ಸೌಲಭ್ಯ ಇರಲಿಲ್ಲ.ಮಾಲ್ಲಾಡಿಹಳ್ಳಿ ಸಂಕಜ್ಜಿ ಎನ್ನುವ ಹಿರಿಯರು  ಸ್ವಾಮೀಜಿಯವರಿಗೆ ಒಂದು ಸಣ್ಣ ಕಟ್ಟಡ ಕಟ್ಟಲು ಅವಕಾಶ ಮಾಡಿಕೊಟ್ಟರು. ಸ್ವಾಮೀಜಿಯವರು ಬಂದು ಸಂಕಜ್ಜಿಜಿಯವರ ಬಳಿ ನಾನು ಯೋಗ, ವಿದ್ಯಾಭ್ಯಾಸ, ಆರೋಗ್ಯ ಮತ್ತು ಆಯುರ್ವೇದದ ಒಂದು ವಿದ್ಯಾಭ್ಯಾಸ ಕಲಿಸುವೆ ಅದಕ್ಕಾಗಿ ಜಾಗಬೇಕು ಎಂದು ಕೇಳಿದರು.

      ಸಂಕಜ್ಜಿ ಅವರು ಆ ಸ್ಥಳವನ್ನು ನೀಡಿದರು. ಆ ಸಮಯದಲ್ಲಿ ಸ್ವಾಮೀಜಿಯವರು ಪೀಠ ಸ್ಥಾಪನೆ ಮಾಡಿ ಮಕ್ಕಳಿಗೆ ವ್ಯಾಸ ವಿದ್ಯಾಪೀಠದ ಯೋಗ ತರಗತಿಗಳನ್ನು ನಡೆಸುತ್ತಿದ್ದರು ಅವರಿಗೆ ಬೆಳಗಿನ ಜಾವ ಬೇಗ ಏಳುವ ಅಭ್ಯಾಸವಿತ್ತು. ನಂತರ ಪ್ರಭುದ್ಧರಾಗಿ ದೇವತಾ ಕಾರ್ಯಗಳನ್ನು ಮುಗಿಸಿಕೊಂಡು ಊರಿನ ಎಲ್ಲಾ ಮನೆಯ ಮುಂದೆ ಸಾರಿಸಿ ಶ್ರೀ ರಂಗೋಲಿ ಇಡುತ್ತಿದ್ದರು.

  ಅದನ್ನು ನೋಡಿದ ಜನ ಅವರ ಮುಂಚೆ ಎದ್ದು ಸಾರಿಸಿ ರಂಗೋಲಿ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿರಂತೆ. ಸ್ವಾಮೀಜಿಯವರು ಮೊದಲು ಬಂದು ಇಲ್ಲಿ ಮಾಡಿರುವ ಸ್ಥಳ ಪರಪ್ಪನ ಗುದ್ದಿಗೆ, ಮೊದಲು ಯಾವುದೇ ಕೆಲಸ ಮಾಡಬೇಕಾದರೂ ಗುರುವಿನ ಆಶೀರ್ವಾದ ಮುಖ್ಯ ಗುರುವಿನ ಗುಲಾಮನಾಗುವ ತನಕ ದೊರೆಯಾದಣ್ಣ ಮುಕುತಿ ಎಂಬಂತೆ ಮೊದಲು ಪ್ರಾರಂಭಿಸಿದರು.

   ನಂತರ  ಬನಶಂಕರಿ ದೇವಾಲಯ, ಆಯುರ್ವೇದ,ಯೋಗ, ವೃತ್ತಿ ಶಿಕ್ಷಣ ಒಂದೊಂದಾಗಿ ಪ್ರಾರಂಭಿಸಿದರು. ಯೋಗ ಆಯುರ್ವೇದದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟರು. ಈ ಕ್ಷೇತ್ರದಲ್ಲಿ 5 ಸಾವಿರದಿಂದ 6000 ಮಕ್ಕಳಿಗೆ ತರಗತಿಯನ್ನು ನೀಡುತ್ತಿದ್ದರು. ಸ್ವಾಮೀಜಿಯವರು ಮತ್ತು ಅವರ ಜೊತೆ ಇರುವವರು ಹಳ್ಳಿ ಹಳ್ಳಿಗಳಿಗೆ ಭಿಕ್ಷೆಗೆ ಹೋಗುತ್ತಿದ್ದರು.

  ಭಿಕ್ಷೆಯಿಂದ  ಬಂದ್ದದನ್ನು ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು. ಮತ್ತು ಹೊರಗಿನಿಂದ ಹಣದ ರೂಪದಲ್ಲಿ ಬಂದ ಭಿಕ್ಷೆಯನ್ನು ಆಶ್ರಮದ ಬೆಳವಣಿಗೆಗಾಗಿ ಬಳಸುತ್ತಿದ್ದರು. ಸ್ವಂತಕ್ಕಾಗಿ ತಾವು ಏನನ್ನು ಬಳಸುತ್ತಿರಲಿಲ್ಲ.ಪ್ರತಿ ಭಾನುವಾರ ಮತ್ತು ಸೋಮವಾರದಂದು ಸ್ವಾಮಿಗಳು ಕಾಯಿಲೆಯಿಂದ ಬಳಲುವ ಜನರಿಗೆ ಉಚಿತವಾಗಿ ಔಷಧಿಗಳನ್ನು ನೀಡಿ ಗುಣಪಡಿಸಿದ್ದಾರೆ.

   ಇಲ್ಲಿ ಧಾರ್ಮಿಕ ಕಾರ್ಯಕ್ರಮವೆಂದರೆ  ಶಿವರಾತ್ರಿ ಉತ್ಸವ ಗಣೇಶೋತ್ಸವ, ಮತ್ತು ಧನುರ್ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ ಮತ್ತು ಸ್ವಾಮೀಜಿಗಳು ಸಾಂಸ್ಕೃತಿಕ ವಿಷಯದಲ್ಲು ಬಹಳ ಆಸಕ್ತಿ ಇದ್ದವರಾದ್ದರಿಂದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಿಸುತ್ತಿದ್ದರು.

   ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಹಲವಾರು ಒಳ್ಳೆಯ ಸ್ಥಾನಮಾನ ಪಡೆದು ಅವರು ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಎಂಬುದನ್ನು ಮಾಡಿಕೊಂಡು ಈ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲು ಶ್ರಮಪಟ್ಟಿದ್ದಾರೆ ಈ ಸಂಸ್ಥೆಯಲ್ಲಿ ಯೋಗ ಶಿಬಿರಗಳು ಏರ್ಪಡಿಸುತ್ತಾರೆ.

   ಹೊರ ರಾಜ್ಯಗಳಿಂದ ಬಂದು ಭಾಗವಹಿಸುತ್ತಾರೆ. 106 ವರ್ಷಗಳ ಕಾಲ ಸ್ವಾಮೀಜಿಯವರು ಸುಕ್ಷೇತ್ರವಾಗಿ ಮಾಡಿದ್ದಾರೆ.ರಾಘವೇಂದ್ರ ಸ್ವಾಮಿ ಮತ್ತು ಸೂರ್ ದಾಸ್ ಸ್ವಾಮಿಯವರ ಸಮಾಧಿ ಸ್ಥಳವನ್ನು ಈಗ ಧಾನ್ಯ ಮಂದಿರವನ್ನಾಗಿ ನಿರ್ಮಾಣ ಮಾಡಿದ್ದಾರೆ. ಸ್ವಾಮೀಜಿಯವರು ವಾಸ ಮಾಡುತ್ತಿದ್ದ ಕುಟೀರ ನೆಲ ಮಾಳಿಗೆಯಲ್ಲಿ ಇದೆ.

     ಅಲ್ಲಿ ಅವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಧ್ಯಾನಸಕ್ತರಾಗುತ್ತಿದ್ದರು.ಅವರು ಹನುಮನ ಪರಮಭಕ್ತರು ಅವರ ಕಠೋರ ಧ್ಯಾನದಲ್ಲಿ ಹನುಮನ ದರ್ಶನ ನೀಡಿದ್ದಾರೆ.ಎಂದು ಹೇಳಿದ್ದಾರೆ.ಅವರ ನಂತರ ಶ್ರೀ ಮುರುಗರಾಜೇಂದ್ರ ಸ್ವಾಮೀಜಿ ಅವರಿಗೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ವಹಿಸಿಕೊಟ್ಟಿದ್ದಾರೆ.