ಮನೆ ದೇವಸ್ಥಾನ ಶ್ರೀ ಸದ್ಗುರು ಅಭಯ ಕ್ಷೇತ್ರ

ಶ್ರೀ ಸದ್ಗುರು ಅಭಯ ಕ್ಷೇತ್ರ

0

ಉಕ್ಕಡಗಾತ್ರಿಯ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನವರು ನೆಲೆಸಿರುವ ಪುಣ್ಯಕ್ಷೇತ್ರ ಕೋರಮಂಗಲ, ರಾಮನಗರಜಿಲ್ಲೆ, ಮಾಗಡಿ ತಾಲೂಕು, ಸೋಲೂರು ಹೋಬಳಿ. ಈ ಪುಣ್ಯಕ್ಷೇತ್ರವು ನೆಲಮಂಗಲದಿಂದ 13 ಕಿಲೋ ಮೀಟರ್ ದೂರದಲ್ಲಿದೆ. ಸುಂದರ ಪ್ರಕೃತಿ ಮಧ್ಯದಲ್ಲಿ ಕೇರಳ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ ಉಕ್ಕಡಗಾತ್ರಿಯ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನವರು  ನೆಲೆಗೊಂಡಿದ್ದಾರೆ.

Join Our Whatsapp Group

  ಅಜ್ಜಯ್ಯನವರು ಪವಾಡ ಪುರುಷರು ಸ್ವತಃ ನಂದಿಯೇ ಅಜ್ಜಯ್ಯನೆ. ರೂಪದಲ್ಲಿ ಧರೆಗೆ ಬಂದಿದ್ದಾನೆ ಇವರು ಕಲಿಯುಗದ ಪವಾಡ ಪುರುಷರು ಕಲಿಯುಗದಲ್ಲಿ ನಡೆಯುವ ಮಾಟ, ಮಂತ್ರ, ವಾಮಾಚಾರ, ಇವೆಲ್ಲವನ್ನೂ ಶೀಘ್ರವಾಗಿ ಪರಿಹಾರ ಮಾಡಿ ಮನುಷ್ಯರು ನೆಮ್ಮದಿಯ ಜೀವನ ನಡೆಸುವ ಹಾಗೇ ಮಾಡಬೇಕೆನ್ನುವುದು ಅಜ್ಜಯ್ಯನವರ ಮೂಲ ಉದ್ದೇಶ.

   ಇಲ್ಲಿ ಬರುವ ಭಕ್ತರ ಬದುಕನ್ನು ಅಜ್ಜನವರು ಬದಲಾಯಿಸುತ್ತಿದ್ದಾರೆ.ಸಾಲ ಬಾದೆ,ಮಾಟ ಮಂತ್ರ ಆರೋಗ್ಯ ಸಮಸ್ಯೆ,ಇನ್ನಿತರ ಯಾವುದೇ ಸಮಸ್ಯೆಯಿಂದ ಬಂದವರು ಅದನ್ನು ನಿವಾರಣೆ ಮಾಡಿಕೊಂಡು ಹೋಗುತ್ತಿದ್ದಾರೆ ಅಮೃತಶಿಲೆಯಲ್ಲಿ ಹಚ್ಚಹಸಿರಿನ ನಡುವೆ ಕೇರಳ ಶೈಲಿಯ ದೇವಾಲಯದಲ್ಲಿ ಕಲಿಯುಗದ ದೇವರಾಗಿ ಅಜ್ಜಯ್ಯನವರು ಭಕ್ತರ ಸಂಕಷ್ಟಗಳನ್ನು ಕಳೆಯಲು ಇಲ್ಲಿ ಬಂದು ಕುಳಿತಿದ್ದಾರೆ.

    ಸೋಮವಾರ ಮತ್ತು ಗುರುವಾರ ಗುರುಗಳಿಗೆ ವಿಶೇಷವಾದ ಕ್ಷೀರಾಭಿಷೇಕ,ತುಪ್ಪದ ಆರತಿ, ಮತ್ತು ಮಹಾಮಂಗಳಾರತಿಯ ಪೂಜೆಯನ್ನು ನೆರವೇರಿಸುತ್ತಾರೆ.

    ಇನ್ನೊಂದು ವಿಶೇಷವೇನೆಂದರೆ ಸನ್ನಿಧಾನದಲ್ಲಿ ನವನಾಗ ಗುಡಿಯಿದೆ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ 108 ಲಕ್ಷ ನಾಗಮೂಲ ಮಂತ್ರದಿಂದ ಸ್ಥಾಪಿಸಲ್ಪಟ್ಟ ಸನ್ನಿಧಾನವಾಗಿದೆ.

     ನಾಗ ದೋಷಗಳು ಕುಕ್ಕೆಯಲ್ಲಿ ಪರಿಹಾರ ಆಗದೆ ಇರುವ ಹಲವಾರು ಭಕ್ತಾದಿಗಳು ಈ ಸನ್ನಿಧಾನಕ್ಕೆ ಬಂದು ಪರಿಹಾರ ಮಾಡಿಕೊಂಡಿದ್ದರೆ.ಇಲ್ಲಿ ಸರ್ಪ ಶಾಂತಿಯನ್ನು ಮಾಡಿಸಿದರೆ ಎಂತಹ ಸರ್ಪದೋಷಗಳು ಮನೆಯ ಹತ್ತಿರ ಹೋತ್ತ ಇದ್ದರೆ, ಹೊಲದಲ್ಲಿ ಹುತ್ತವನ್ನು ಹೊಡೆದು ಹಾಕಿದ್ದರೆ ಸರ್ಪವನ್ನು ವಧೆಯನ್ನು ಮಾಡಿದಿದ್ದರೆ,ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಈ ಕ್ಷೇತ್ರದಲ್ಲಿದೆ.

     ಇದು ನಾಗ ಕ್ಷೇತ್ರವು ಹೌದು ಗುರುವಿನ ಕ್ಷೇತ್ರವು ಹೌದು. ಇಲ್ಲಿ ತುಂಬಾ ವಿಶೇಷವಾದಂತಹ ಪಂಚಮುಖಿ ಉದ್ಯಾನ ಗಣಪತಿ ಅಂದರೆ ನಿಂತಿರುವ ಬಲಮುರಿ ಇರುವ ಗಣಪತಿಯನ್ನು ಸ್ಥಾಪಿಸಿದ್ದಾರೆ.

     ಇಂತಹ ಗಣಪತಿ ತಮಿಳು ನಾಡಿನಲ್ಲಿ  ಬಿಟ್ಟರೆ ಈ ಸನ್ನಿಧಾನದಲ್ಲಿ ವಿಶೇಷವಾಗಿರುವುದು ಕೇಳಿದ್ದನ್ನು ಶೀಘ್ರವಾಗಿ ಅತಿ ಸುಲಭ ಮಾರ್ಗದಲ್ಲಿ ದಯಪಾಲಿಸುವನು.

     ವರಸಿದ್ಧಿ ಗಣಪತಿ,ಸಿದ್ದಿ ಗಣಪತಿ,ಸಿದ್ದಿ ಕಾರ್ಯ ಗಣಪತಿ, ಈ ಗಣಪತಿಗಳಿಗಿಂತ ಬಹಳ ವಿಶೇಷವಾದ ಅದರಲ್ಲೂ ಸಾಲಿಗ್ರಾಮದ ಶಿಲೆಯ ಗಣಪತಿ ನೋಡಲು ಬಹಳ ವಿರಳ. ಎಲ್ಲಾ ಕಡೆಗಳಲ್ಲಿ ಕೃಷ್ಣಶೀಲೆಯಲ್ಲಿ ಮಾಡಿರುತ್ತಾರೆ. ಆದರೆ ಇಲ್ಲಿರುವ ಗಣಪತಿ ಸಾಲಿಗ್ರಾಮ ಶಿಲೆಯ ಗಣಪತಿಯಾಗಿದೆ.

     ಅವರ ದರ್ಶನ ಮಾಡುವುದು ಬಹಳ ಪುಣ್ಯ. ಈ ಪುಣ್ಯಕ್ಷೇತ್ರದಲ್ಲಿ ಉಕ್ಕಡಗಾತ್ರಿಯಲ್ಲಿ ಹೇಗೆ ಪೂಜಿ ಸಲ್ಲಿಸುತ್ತಾರೂ ಅದೇ ಸಂಪ್ರದಾಯದಲ್ಲಿ ಇಲ್ಲೂ ಕೂಡ ನೆರವೇರಿಸುತ್ತಾರೆ. ಪ್ರತಿ ಅಮಾವಾಸ್ಯೆ ಯಲ್ಲಿ ಬಹಳ ವಿಶೇಷವಾಗಿರುತ್ತದೆ. ಸನ್ನಿಧಾನದಲ್ಲಿ ಗುರುವಿನ ಉತ್ಸವ ಜಾತ್ರೆಯ ರೀತಿಯಲ್ಲಿರುತ್ತದೆ ಮೆರವಣಿಗೆ ಮತ್ತು ನೋಡಲು ಕುಣಿತ ಅದ್ಭುತವಾಗಿರುತ್ತದೆ

     ಅಜ್ಜಯ್ಯನವರಿಗೆ ಅಮಾವಾಸ್ಯೆಯ ದಿನಶಕ್ತಿ ತುಂಬಿರುತ್ತದೆ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ನಾಗದೋಷ ನಿವಾರಣೆ ಇಲ್ಲಿಯ ವಿಶೇಷ ಪೂಜೆ ಷಷ್ಠಿ ಪೂಜೆ,ಸಂಕಷ್ಟಹರ ಗಣಪತಿ ಪೂಜೆ,ಹಿಂದೂ ಸಂಪ್ರದಾಯದಲ್ಲಿ ನಡೆಯುವ ಎಲ್ಲಾ ಸಂಪ್ರದಾಯದ ಪೂಜೆಯು ಅಚ್ಚುಗಟ್ಟಾಗಿ ನಡೆಸುತ್ತಾರೆ.