ಮನೆ ಅಪರಾಧ ಒಡಹುಟ್ಟಿದವರ ಗಲಾಟೆ: ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ಒಡಹುಟ್ಟಿದವರ ಗಲಾಟೆ: ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

0

ಬೆಳಗಾವಿ: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಮಧ್ಯೆ ಆರಂಭವಾದ ಗಲಾಟೆ ಸಾವಿನಲ್ಲಿ ಅಂತ್ಯವಾದ ಘಟನೆ ಬೆಳಗಾವಿ ತಾಲೂಕಿನ ‌ನಿಲಜಿ ಗ್ರಾಮದಲ್ಲಿ ಶುಕ್ರವಾರ (ಜ.10) ತಡರಾತ್ರಿ ನಡೆದಿದೆ.

Join Our Whatsapp Group

ಸುಶಾಂತ ಸುಭಾಷ ಪಾಟೀಲ (20) ಮೃತಪಟ್ಟ, ಓಂಕಾರ ಸುಭಾಷ ಪಾಟೀಲ (23) ಎಂಬಾತನಿಗೆ ಗಂಭೀರ ‌ಗಾಯವಾಗಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗಿದೆ.

ಮನೆ ಕೆಲಸ ಮಾಡದೆ ಸುತ್ತಾಡುತ್ತಿದ್ದ ಇಬ್ಬರಿಗೂ ಪೋಷಕರು ಬುದ್ಧಿ ಹೇಳಿದ್ದಾರೆ. ಆದರೆ ಮನೆ ಕೆಲಸ ನಾನು ಮಾಡಲ್ಲ, ನೀನೇ ಮಾಡಬೇಕು ಎಂದು ಸಹೋದರರು ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ನಶೆಯಲ್ಲಿದ್ದಾಗ ಶುಕ್ರವಾರ ಮಧ್ಯಾಹ್ನ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.

ರಾತ್ರಿ ವೇಳೆ‌ ಮನೆಯ ಸ್ಟೇರ್‌ಕೇಸ್ ಮೇಲೆ ಗಾಂಜಾ ‌ಸೇವಿಸಲು ಹೋಗಿದ್ದಾಗ ಮತ್ತೆ ಗಲಾಟೆಯಾಗಿದೆ. ಗಾಂಜಾ ವಿಚಾರಕ್ಕೆ ತಡರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನೂಕಾಟ ವೇಳೆ ಎರಡನೇ ಮಹಡಿ ಬಿಲ್ಡಿಂಗ್‌ ಮೇಲಿಂದ ಸಹೋದರರು ಕೆಳಗೆ ಬಿದ್ದಿದ್ದಾರೆ.

ಘಟನೆ ವೇಳೆ ಸ್ಥಳದಲ್ಲೇ ಸುಶಾಂತ ಸುಭಾಷ ಪಾಟೀಲ ಮೃತಪಟ್ಟಿದ್ದಾನೆ.  ಓಂಕಾರ ಸುಭಾಷ ಪಾಟೀಲಗೆ ಗಂಭೀರ ‌ಗಾಯವಾಗಿದೆ.

ಸ್ಥಳಕ್ಕೆ ಮಾರಿಹಾಳ ‌ಠಾಣೆ ಪೊಲೀಸರ ‌ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.