ಮಡಿಕೇರಿ : ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ದೇವರಾಜ ಅರಸು ಅವರ ಹತ್ತಿರ ಬರಲು ಕೂಡ ಆಗೋದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ದೇವರಾಜು ಅರಸು ಅವರು ನಮ್ಮನ್ನು ಅಗಲಿ ನಾಲ್ಕು ದಶಕಗಳು ಕಳೆದು ಹೋಗಿವೆ. ಅವರು ಮರೆಯಾಗಿ ನಾಲ್ಕು ದಶಕ ಕಳೆದರೂ ಇಂದಿಗೂ ಜನರು ಅವರನ್ನು ದೇವರು ಎಂದು ಪೂಜ್ಯ ಭಾವನೆಯಿಂದ ನೋಡುತ್ತಾರೆ.
ಅಂದರೆ ಅವರ ವ್ಯಕ್ತಿತ್ವ ಹೇಗೆ ಇರಬಹುದು ಊಹಿಸಿಕೊಳ್ಳಿ. ಸುಮ್ಮನೆ ಇದ್ರೂ ವಯಸ್ಸು ಆಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಕುಳಿತು ಕಾಲ ತಳ್ಳುತ್ತಿದ್ದಾರೆ ಅಷ್ಟೆ. ಹೊಸ ದಾಖಲೆ ಬರೆದಿದ್ದಾರೆ ಎಂದು ಹೇಳುತ್ತಾರೆ. ಆದರೆ, ಸಿದ್ದರಾಮಯ್ಯ ಅವರು ದೇವರಾಜ ಅರಸು ಆಗಲೂ ಸಾಧ್ಯವಿಲ್ಲ ಎಂದರು.
ದೇವರಾಜ ಅರಸು ಅವರು ಈ ರಾಜ್ಯದ ಜನರಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಸಣ್ಣ ಸಣ್ಣ ಸಮುದಾಯದವರನ್ನು ಕರೆದುಕೊಂಡು ಬಂದು ಕೈ ಹಿಡಿದು ಬೆಳೆಸಿದ್ದಾರೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದ ರೈತಾಪಿ ವರ್ಗದ ಜನರಿಗೆ ಉಳುವವನೇ ಭೂಮಿಯ ಒಡೆಯ ಎಂದು ಯೋಜನೆ ತಂದ್ರು. ಬೆಂಗಳೂರು ಅಭಿವೃದ್ಧಿ ಮಾಡಿದ್ರು.
ದೇವರಾಜ ಅರಸು ಅವರು ಸಾಮಾನ್ಯ ಹೋಲಿಕೆಗಳಿಗೆ ಮೀರಿದಂತಹ ವ್ಯಕ್ತಿ. ಸಿದ್ದರಾಮಯ್ಯ ಅವರಿಗೆಲ್ಲ ಹೊಲಿಸಿಕೊಳ್ಳಬೇಡಿ. ಸಿದ್ದರಾಮಯ್ಯ ಅವರು ಸಿಎಂ ಆಗಿ ಕರ್ನಾಟಕ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದವರು. ಎರಡನೇ ಬಾರಿ ಸಿಎಂ ಆಗಿರುವಾಗ ಹೆಚ್ಚು ಸಾಲ ಮಾಡಿದವರು ನೀವು. ಇದ ನಿಮ್ಮ ಕೊಡುಗೆ ಎಂದು ಪ್ರಶ್ನಿಸಿದರು.
ಅನ್ನಭಾಗ್ಯ ನಮ್ಮದು ಎಂದು ಹೇಳುತ್ತೀರಿ. ಆದರೆ, ಅದು ಕೇಂದ್ರ ಸರ್ಕಾರದ ಯೋಜನೆ. ಅನ್ನಭಾಗ್ಯ ನಿಮ್ಮದಲ್ಲ. ಈ ರಾಜ್ಯದ ಜನತೆಗೆ ಎಲ್ಲಾ ದಿವಾಳಿಯ ಭಾಗ್ಯವನ್ನು ನೀಡದ ಕೊಡುಗೆ ನಿಮ್ಮದಾಗಿದೆ.
ದೇವರಾಜ ಅರಸು ಅವರ ಹತ್ತಿರಕ್ಕೆ ಬರಲು ಸಹ ಸಿದ್ದರಾಮಯ್ಯ ಅವರಿಗೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.















