ಮನೆ ರಾಜ್ಯ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೊಟ್ಟ ಭರವಸೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸುತ್ತಾರೆ: ಎಂ.ಕೆ.ಸೋಮಶೇಖರ್

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೊಟ್ಟ ಭರವಸೆಗಳನ್ನು ಕೆಲವೇ ದಿನಗಳಲ್ಲಿ ಈಡೇರಿಸುತ್ತಾರೆ: ಎಂ.ಕೆ.ಸೋಮಶೇಖರ್

0

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 59 ರ ಗಣಪತಿ ದೇವಸ್ಥಾನದ ಬಳಿ  ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ರವರು ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆಯಾದ “ಗೃಹಜ್ಯೋತಿ”ಗೆ ಅರ್ಜಿ ಸ್ವೀಕರಿಸಲು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಚುನಾವಣೆಗೂ ಮೊದಲು ನೀಡಿದ್ದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ,ಗೃಹಜ್ಯೋತಿ,ಅನ್ನಭಾಗ್ಯ,ಶಕ್ತಿ,ಯುವನಿಧಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಸನ್ಮಾನ್ಯ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ತೀರ್ಮಾನದಂತೆ ಈಡೇರಿಸಲು ನಿರ್ಧರಿಸಿದ್ದು ಈಗಾಗಲೇ ಮಹಿಳೆಯರಿಗಾಗಿ ರೂಪಿಸಿರುವ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಉಚಿತ ವಿದ್ಯುತ್ ಯೋಜನೆಯ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದ್ದು ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ.ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ಸರ್ವಜನಾಂಗಕ್ಕೂ ಸಹಕಾರಿಯಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ,ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಘೋಷಿಸಿದ್ದು, ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿವೆ.ಕೊಟ್ಟ ಮಾತನ್ನು ಈಡೇರಿಸುವ ಪಕ್ಷ ಯಾವುದಾದರೂ ಇದ್ದರೇ ಅದು ಕಾಂಗ್ರೆಸ್ ಮಾತ್ರ. ಹಾಗಾಗೀ ಬಿಜೆಪಿಯವರ ಮಾತಿಗೆ ತಲೆಕೆಡಿಸಿಕೊಳ್ಳದೇ ಸರ್ಕಾರದ ಈ ಯೋಜನೆಗಳಿಗೆ ನೋಂದಾಯಿಸಿಕೊಂಡು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಕೇವಲ ಭ್ರಷ್ಟಚಾರ,ಹಗರಣದಲ್ಲೇ ಮುಳುಗಿ ಹೋಗಿ ಜನಪರ ಯೋಜನೆಗಳನ್ನು ರೂಪಿಸುವುದಿರಲಿ ಇರುವ ಯೋಜನೆಗಳನ್ನು ಮೊಟಕುಗೊಳಿಸಿ ಜನವಿರೋಧಿ ನೀತಿ ಅನುಸರಿಸಿದ್ದರು.ಈಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದಲೇ ಜನೋಪಕಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದನ್ನು ಸಹಿಸಿದ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡಿಕೊಂಡು ಕೈ ಸುಟ್ಟುಕೊಳ್ಳುತ್ತಿವೆ.26ಸಂಸದರನ್ನು ಒಳಗೊಂಡಿರುವ ಬಿಜೆಪಿ ಪಕ್ಷ ಯಾವುದೇ ಒಳ್ಳೆಯ ಕೆಲಸ ಮಾಡದೇ ಕೇಂದ್ರ ಸರ್ಕಾರದ ಮುಂದೆ ಕೈಗೊಂಬೆಯಂತೆ ಕುಳಿತು ನಾಡಿನ ಜನತೆಗೆ ದ್ರೋಹವೆಸಗುತ್ತಿದ್ದಾರೆ. ರಾಜ್ಯ ಸರ್ಕಾರ ಹಣ ನೀಡಿ ಪಡೆಯುತ್ತಿದ್ದ ಅನ್ನಭಾಗ್ಯದ ಅಕ್ಕಿಗೂ ಕಲ್ಲು ಹಾಕಿ ತಾನು ಜನವಿರೋಧಿ ಪಕ್ಷ ಎಂಬುದನ್ನು ಸಾಬೀತು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ  ಆನಂದ್,ಗುಣಶೇಖರ್,ಕುಮಾರ್, ನಟರಾಜ್,ಕಿರಣ್,ಸೋಮು, ಸಿದ್ದರಾಮು, ಉಲ್ಲಾಸ್, ರವಿ, ವಿನಯ್, ಮನೋಜ್ ,ಶಿವರಾಜ್,ರೂಪೇಶ್,ಸಿದ್ದುರವರು ಉಪಸ್ಥಿತರಿದ್ದರು.