ಬೆಳಗಾವಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಅಂದರೇ ಸಿಎಂ ಸಿದ್ದರಾಮಯ್ಯ ಇನ್ನೊಂದು ಅವಧಿಗೆ ರಾಜಕೀಯದಲ್ಲಿ ಇರಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಸಿದ್ದರಾಂಯ್ಯ ನಮಗೆ ಬೇಕು. ಸಿಎಂ ಸಿದ್ದರಾಮಯ್ಯ ನಿವೃತ್ತಿ ಆದರೂ ಪಕ್ಷದ ಪರ ಕೆಲಸ ಮಾಡಬೇಕು. ಸ್ಥಾನದಲ್ಲಿ ಸಿದ್ದರಾಮಯ್ಯ ಇಲ್ಲದಿದ್ರೂ ಅವರು ಇರಬೇಕು. ಹೊಸ ನಾಯಕತ್ವ ತಯಾರಾಗುವವರೆಗೆ ಅನಿವಾರ್ಯ ಮುಂದಿನ ಚುನವಣೆ ಗೆಲ್ಲಬೇಕು ಅಂದರೆ ಅವರು ಇರಬೇಕು ಎಂದರು.














