ಮೈಸೂರು(Mysuru): ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಪುತ್ರ ಪೂರ್ವಜ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಪೂರ್ವಜ್, ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾನು ಎಂದೂ ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ. ನಾನು ಬಿಜೆಪಿ ಕಾರ್ಯಕ್ರಮದಲ್ಲಿ ಯಾವತ್ತೂ ಭಾಗಿಯಾಗಿಲ್ಲ. ನಾನು ತಂದೆಯವರ ಚುನಾವಣೆ ವೇಳೆ ಮಾತ್ರ ಎರಡು ಬಾರಿ ಪ್ರಚಾರ ಮಾಡಿದ್ದೆ ಎಂದರು.
ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದರೆ ನನ್ನದಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೀನಿ, ಇರ್ತೀನಿ. ನನ್ನ ತಂದೆ ಎಂದಿಗೂ ನನಗೆ ಷರತ್ತು ವಿಧಿಸಿಲ್ಲ. ನಾನು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೋಗ್ತೀನಿ ಎಂದಿದ್ದಕ್ಕೆ ಹೋಗು ಎಂದಿದ್ದರು. ನಾನು ಸಿದ್ದರಾಮಯ್ಯನವರಿಗೆ ಕಾಲ್ ಮಾಡಿಕೊಂಡೆ ಬಂದಿರುವೆ ಎಂದು ಹೇಳಿದ್ದಾರೆ.
Saval TV on YouTube