ಮನೆ ರಾಜ್ಯ ವರುಣಾದಲ್ಲಿ ಸಿದ್ದರಾಮಯ್ಯಗೆ ಭರ್ಜರಿ ಗೆಲುವು

ವರುಣಾದಲ್ಲಿ ಸಿದ್ದರಾಮಯ್ಯಗೆ ಭರ್ಜರಿ ಗೆಲುವು

0

ಮೈಸೂರು:  ರಾಜ್ಯ ವಿಧಾಸನಭಾ ಚುನಾವಣೆಯಲ್ಲಿ ಅತ್ಯಂತ ಕುತುಹಲ ಮೂಡಿಸಿದ್ದ ಕ್ಷೇತ್ರಗಳಲ್ಲಿ ಒಂದಾದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಸಿದ್ದರಾಮಯ್ಯ ಭರ್ಜರಿ ಗೆಲುವು ಸಾಧಿಸಿದ್ದಾರೆ.

Join Our Whatsapp Group

ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ದೂರದ ವರುಣಾ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದ ಬಿಜೆಪಿಯ ವಿ ಸೋಮಣ್ಣಗೆ ಮುಖಭಂಗವಾಗಿದೆ.

ಸೋಮಣ್ಣ ವಿರುದ್ಧ ಸಿದ್ದರಾಮಯ್ಯ ಹೆಚ್ಚೂ ಕಡಿಮೆ 35 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆನ್ನಲಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ

ಕಾಂಗ್ರೆಸ್: ಸಿದ್ದರಾಮಯ್ಯ– 82,794 ಮತಗಳು

ಬಿಜೆಪಿ: ವಿ ಸೋಮಣ್ಣ– 50,122 ಮತಗಳು

ಜೆಡಿಎಸ್: ಡಾ. ಭಾರತಿ ಶಂಕರ್– 850 ಮತಗಳು

ವರುಣಾ ಕ್ಷೇತ್ರ ಸಿದ್ದರಾಮಯ್ಯರಿಗೆ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರ ಮಗ ಯತೀಂದ್ರ ಗೆಲುವು ಸಾಧಿಸಿದ್ದರು. ಈಗ ಸಿದ್ದರಾಮಯ್ಯ ವರುಣಾಗೆ ವಾಪಸ್ ಬಂದಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ವಿ ಸೋಮಣ್ಣರನ್ನು ಕರೆತಂದ ಯೋಜನೆ ವರ್ಕೌಟ್ ಆಗಿಲ್ಲ. ಇನ್ನು, ಜೆಡಿಎಸ್’​ನ ಅಭ್ಯರ್ಥಿಗೆ ಈ ಚುನಾವಣೆಯಲ್ಲಿ 1,000 ಮತಗಳೂ ಸಿಕ್ಕಿಲ್ಲ.

ಹಿಂದಿನ ಲೇಖನಯಲ್ಲಾಪುರ: ಹಾಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರ್ಜರಿ ಜಯ
ಮುಂದಿನ ಲೇಖನಹೊಳೆನರಸೀಪುರ: 3 ಸಾವಿರ ಮತಗಳ ಅಂತರದಲ್ಲಿ ಹೆಚ್.ಡಿ.ರೇವಣ್ಣ ಗೆಲುವು