ಚಾಮರಾಜನಗರ(Chamarajnagar): ಮಾಂಸ ತಿಂದು ದೆಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಜನಪ್ರೀಯತೆ ಕಂಡು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂಥ ವಿಷಯ ಹಬ್ಬಿಸುವುದರಲ್ಲಿ ನಿಸ್ಸಿಮರು. ಅಭಿವೃದ್ಧಿ ವೈಪಲ್ಯ ಮರೆಮಾಚಲು ಷಡ್ಯಂತ್ರ , ಚುನಾವಣೆ ಬಂದಾಗ ಕೋಮು ಭಾವನೆ ಕೆರಳಿಸುತ್ತಾರೆ ಎಂದು ಆರೋಪಿಸಿದರು.
ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ ಕಾರ್ಯಕರ್ತನಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸಿಮರು. ಸಂಪತ್ ಅಪ್ಪಚ್ಚು ರಂಜನ್ ಜತೆಗಿರುವ ಫೋಟೊ ಇದೆ. ಇದಕ್ಕಿಂತ ಉದಹಾರಣೆ ಬೇಕಾ..? ಎಂದು ಪ್ರಶ್ನಿಸಿದರು.
Saval TV on YouTube