ಮೈಸೂರು : ನಗರದಲ್ಲಿ ನೂತನವಾಗಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುಮಾರು 108 ಹೊಸ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ.
ಕೇವಲ 1.5 ರಿಂದ 2 ಕಿಲೋಮೀಟರ್ ಅಂತರದಲ್ಲಿ 9-10 ಸಿಗ್ನಲ್‌ಗಳಿದ್ದು, ವಾಹನ ದಟ್ಟಣೆ ಇಲ್ಲದ ರಸ್ತೆಗಳಲ್ಲೂ ಸಿಗ್ನಲ್‌ಗಳನ್ನು ಅಳವಡಿಸಿರುವುದು ಜನರಿಗೆ ಅನಾನುಕೂಲ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ರಿಂಗ್ ರೋಡ್‌ಗೆ ಅಂಡರ್‌ಪಾಸ್ ಮತ್ತು ಓವರ್‌ಬ್ರಿಡ್ಜ್‌ಗಳು ಪರಿಹಾರವೇ ಹೊರತು ಸಿಗ್ನಲ್‌ಗಳಲ್ಲ ಎಂದು ಸಿಂಹ ಪ್ರತಿಪಾದಿಸಿದ್ದಾರೆ.
ಅದೇ ರೀತಿ, ಮೈಸೂರಿನಾದ್ಯಂತ ಹೆಚ್ಚುತ್ತಿರುವ ಫ್ಲೆಕ್ಸ್ ಬೋರ್ಡ್‌ಗಳ ಬಗ್ಗೆಯೂ ಅವರು ಚಿಂತಿತರಾಗಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ನಗರವನ್ನು ಗಬ್ಬೆಬ್ಬಿಸುತ್ತಿವೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, ಬದಲಿಗೆ ಸ್ಥಳೀಯ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಮೈಸೂರನ್ನು ಫ್ಲೆಕ್ಸ್ ಮುಕ್ತ ನಗರವನ್ನಾಗಿ ಮಾಡುವಂತೆ ಅವರು ಜಿಲ್ಲಾಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಿಂಗ್ ರೋಡ್‌ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಿಗ್ನಲ್‌ಗಳ ಬದಲು ಅಂಡರ್‌ಪಾಸ್ ಮತ್ತು ಓವರ್‌ಬ್ರಿಡ್ಜ್‌ಗಳು ಪರಿಹಾರವಾಗಿವೆ ಎಂದು ಸಿಂಹ ತಿಳಿಸಿದ್ದಾರೆ.
ಸಂಸದರಾಗಿ ತಾವು ಈಗಾಗಲೇ ರಿಂಗ್ ರೋಡ್‌ಗೆ ಏಳು ಅಂಡರ್‌ಪಾಸ್ ಮತ್ತು ಓವರ್‌ಬ್ರಿಡ್ಜ್‌ಗಳಿಗೆ ಅನುಮೋದನೆ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ. ಬೆಳಗ್ಗೆ ಪೀಕ್ ಅವರ್ಸ್ ಹೊರತುಪಡಿಸಿ, ಹಗಲಿನ ಸಮಯದಲ್ಲಿ ಈ ಸಿಗ್ನಲ್‌ಗಳ ಅಗತ್ಯವಿಲ್ಲ. ಕಮಿಷನ್ ಆಸೆಗಾಗಿ ಸಿಕ್ಕ ಸಿಕ್ಕ ಜಾಗಗಳಲ್ಲೆಲ್ಲಾ ಸಿಗ್ನಲ್‌ಗಳನ್ನು ಅಳವಡಿಸಿರುವುದು ಜನರಿಗೆ ಅನಾನುಕೂಲವನ್ನುಂಟುಮಾಡುತ್ತಿದೆ ಎಂದು ಪುನರುಚ್ಚರಿಸಿದ್ದಾರೆ.















