ಮನೆ ರಾಜ್ಯ ಸಿದ್ದರಾಮಯ್ಯನವರಿಗೆ ಮರೆವಿನ ಸಮಸ್ಯೆ ಉಂಟಾಗಿದೆ : ವಿ. ಸೋಮಣ್ಣ

ಸಿದ್ದರಾಮಯ್ಯನವರಿಗೆ ಮರೆವಿನ ಸಮಸ್ಯೆ ಉಂಟಾಗಿದೆ : ವಿ. ಸೋಮಣ್ಣ

0

ಬಾಗಲಕೋಟೆ: “ಸಿದ್ದರಾಮಯ್ಯನವರು ಮತ್ತು ನಾವೆಲ್ಲ ಒಮ್ಮೆ ಒಂದೇ ತಂಡದಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಅವರ ಮಾತುಗಳನ್ನು ಕೇಳಿದಾಗ, ಅವರಿಗೆ ಯಾವುದೊ ಮರೆವಿನ ಸಮಸ್ಯೆ ಉಂಟಾಗಿದೆ ಎಂದು ಅನುಮಾನವಾಗುತ್ತಿದೆ” ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಸಿಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರಾಜಕೀಯವಾಗಿ ಮಾಜಿ ನಾಯಕನಿಗೆ ಈಗ ಗಂಭೀರ ಮರೆವು ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸೋಮಣ್ಣ, ಸಿದ್ದರಾಮಯ್ಯನವರು ಹಿಂದೆ ತಮ್ಮ ಜೊತೆಗೇ ಇದ್ದವರು ಎಂದು ಸ್ಮರಿಸಿದರು. “ನಾವು ಎಲ್ಲರೂ ಒಂದೇ ತಂಡದಲ್ಲಿ ರಾಜಕೀಯವಾಗಿ ಪಣ ತೊಟ್ಟವರು. ಆದರೆ ಈಗ ಅವರು ಏನು ಮಾತನಾಡುತ್ತಾರೆ ಎಂಬುದೇ ಅವರಿಗೆ ಸ್ಪಷ್ಟವಿಲ್ಲ” ಎಂದು ವ್ಯಂಗ್ಯವಾಡಿದರು.

“ಈಗ ಸಿದ್ದರಾಮಯ್ಯನವರು ಏನಾದರೂ ಕೇಳಿದರೆ, ಅವರು ಹೌದು ಅಂತಲೇ ಉತ್ತರಿಸುತ್ತಾರೆ. ಎಲ್ಲವನ್ನೂ ಮರೆತುಬಿಟ್ಟಂತೆ ಮಾತನಾಡುತ್ತಿದ್ದಾರೆ. ಯಾರಿಗೋ ತೃಪ್ತಿ ನೀಡುವ ಪ್ರಯತ್ನದಲ್ಲಿ ಅಸಂಗತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಸೋಮಣ್ಣ ಹೇಳಿದರು. “ಅವರು ಯಾವಾಗಲೂ ನನ್ನನ್ನು ಎಲ್ಲಿ ತೆಗೆದುಹಾಕಬಹುದು ಎಂದು ಭಯಪಟ್ಟು ಮಾತನಾಡುತ್ತಾರೆ. ಇದು ಅವರ ಅನಿಶ್ಚಿತ ಸ್ಥಿತಿಯನ್ನು ತೋರುತ್ತದೆ” ಎಂದು ಆರೋಪಿಸಿದರು.

ನಾನು ಸಿದ್ದರಾಮಯ್ಯ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವತ್ತಿನ ಸಿದ್ದರಾಮಯ್ಯನೇ ಬೇರೆ‌ ಇವತ್ತಿನ ಸಿದ್ದರಾಮಯ್ಯನೆ ಬೇರೆ. ನಾವೆಲ್ಲ ಈ ದೇಶದ ಮಣ್ಣಿನ ಮಕ್ಕಳು. ಭಾರತ ದೇಶಕ್ಕೆ ಸಣ್ಣ ಅಪಚಾರ ಮಾಡಿದರೂ ಭಾರತಾಂಬೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಮೋದಿ ಆಪರೇಷನ್ ಸಿಂಧೂರ ವಿಚಾರದಲ್ಲಿ ಕೈಗೊಂಡ ‌ತೀರ್ಮಾನಕ್ಕೆ ನಾವು ತಲೆ ಬಾಗಬೇಕು. ತಲೆಬಾಗದೇ ಇದ್ದರೆ ಬಾಕಿದ್ದನ್ನು ಜನರೇ ತೀರ್ಮಾನ ಮಾಡುತ್ತಾರೆ. ಮೋದಿ ತೆಗೆದುಕೊಂಡ ತೀರ್ಮಾನಕ್ಕೆ ಅಪಚಾರ ಮಾಡುವುನ್ನು ಮೊದಲು ಬಿಡಿ ಎಂದು ಹೇಳಿದ್ದಾರೆ.