ಮನೆ ದೇವಸ್ಥಾನ ಸಿದ್ದೇಶ್ವರ ಸ್ವಾಮಿ ಬೆಟ್ಟ

ಸಿದ್ದೇಶ್ವರ ಸ್ವಾಮಿ ಬೆಟ್ಟ

0

ಅಂತರವಳ್ಳಿ ಗ್ರಾಮದಲ್ಲಿರುವ ಸಿದ್ದೇಶ್ವರ ಸ್ವಾಮಿ ಬೆಟ್ಟ 800 ವರ್ಷಗಳ ಕಾಲ ಇತಿಹಾಸ ಹೊಂದಿದೆ ಪ್ರಕೃತಿ ಸೌಂದರ್ಯದ ಜೊತೆಗಿರುವ ಈ ಬೆಟ್ಟ, ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ.

Join Our Whatsapp Group

  ಈ ಕ್ಷೇತ್ರದ ಇತಿಹಾಸವೇನೆಂದರೆ ಬೆಟ್ಟದ ಮೇಲಿರುವ ಸಿದ್ದೇಶ್ವರನನ್ನು ಅಲ್ಲಿನ ಅರ್ಚಕರು ಅಭಿಷೇಕ ಮಾಡಲು ನೀರಿನ ವ್ಯವಸ್ಥೆ ಇರಲಿಲ್ಲ.ಅರ್ಚಕರು ದೂರ ನಡೆದು ಸಾಗಿ ನೀರು ತಂದು ಅಭಿಷೇಕ ಮಾಡಬೇಕಾಗಿತ್ತು. ಹೀಗೆ ನಡೆಯುತ್ತಿರುವಾಗ ಅರ್ಚಕರಿಗೂ ವಯಸ್ಸಾಗುತ್ತಾ ಬಂದ ಸಮಯದಲ್ಲಿ ಅರ್ಚಕರು ಇನ್ನೂ ನನ್ನಿಂದ ಸಾಧ್ಯವಿಲ್ಲ ನಿನಗೆ ಅಭಿಷೇಕ ಮಾಡಲು ಎಂದು ಹೇಳಿದರು.

ಅಂದು ರಾತ್ರಿ ಸಿದ್ದೇಶ್ವರರು ಅರ್ಚಕರ ಕನಸಿನಲ್ಲಿ ಬಂದು ಅಭಿಷೇಕವನ್ನು ತಪ್ಪಿಸಬಾರದು ಎಂದು ಹೇಳಿದರು. ಬೆಳಗ್ಗೆ ಎದ್ದ ಅರ್ಚಕರು ಎಂದಿನಂತೆ ಸಿದ್ದೇಶ್ವರನಿಗೆ ಅಭಿಷೇಕ ಮಾಡಲು ಹೊರಟರು.

ಅವರಿಗೆ ಅಲ್ಲಿ ಒಂದು ಆಶ್ಚರ್ಯ ಕಾದಿತ್ತು ಒಂದು ದೊಡ್ಡ ಹುಲಿಯೊಂದು ದೇವಾಲಯದ ಮುಂದೆ  ಸತ್ತುಬಿದ್ದಿತ್ತು. ಅದನ್ನು ಕಂಡ ಅರ್ಚಕರು ಗಾಬರಿಯಿಂದ ಓಡಿಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದರು.ಗ್ರಾಮಸ್ಥರು ತಮಟೆ ನಗಾರಿಯೊಂದಿಗೆ ದೇವಸ್ಥಾನಕ್ಕೆ ಬಂದರು. ಅಲ್ಲಿ ನೋಡಿದಾಗ ಸಿದ್ದೇಶ್ವರ ಸ್ವಾಮಿಯ ಪಾದದಿಂದ ಒಂದು ಕೊಳ ನಿರ್ಮಾಣವಾಗಿತ್ತು. ಅಂದಿನಿಂದ ಪ್ರತಿ ಗುರುವಾರ ಭಾನುವಾರ ವಿಶೇಷ ಪೂಜೆಗಳನ್ನು ನಡೆಸುತ್ತಾರೆ.ಮಹಾಶಿವರಾತ್ರಿಯ ಜಾತ್ರಾಮಹೋತ್ಸವವನ್ನು ನಡೆಸುತ್ತಾರೆ.ಇಲ್ಲಿಗೆ ಬಂದ ಭಕ್ತಾದಿಗಳು ಈ ಕೊಳದ ನೀರನ್ನು ಕುಡಿದು ಮನೆಗೂ ತೆಗೆದುಕೊಂಡು ಹೋಗುತ್ತಾರೆ.

ಈ ಬೆಟ್ಟಕ್ಕೆ ಮತ್ತೊಂದು ಹೆಸರಿದೆ ಕಾಲಭೈರವೇಶ್ವರ ಬೆಟ್ಟ.ಸಿದ್ದೇಶ್ವರರು ಮತ್ತು ಕಾಳಭೈರವೇಶ್ವರರು ಉತ್ತರ ಪ್ರದೇಶದಿಂದ ಬಂದವರು ಒಮ್ಮೆ ಇಬ್ಬರಿಗೂ ಜಗಳ ಉಂಟಾಗಿ ಸಿದ್ದೇಶ್ವರರು ಕಾಲಭೈರವೇಶ್ವರನನ್ನು ಬೆಟ್ಟದಿಂದ ತಳ್ಳುತ್ತಾರೆ. ಕಾಲಭೈರವೇಶ್ವರ ಉರುಳಿ ಬಂದು ಬೀಳುವಾಗ ಅವರ ಕಾಲುಗಳು ಮುರಿಯುತ್ತವೆ ಈಗಲೂ ನೀವು ಕಾಳಭೈರವೇಶ್ವರನ  ಮೂರ್ತಿಯನ್ನು ನೋಡಿದರೆ ದೇಹ ಬೇರೆ ಮತ್ತು ಕಾಲುಗಳು ಬೇರೆ ರೀತಿಯಲ್ಲಿ ಕಾಣುತ್ತದೆ.

 ಅಂದಿನಿಂದ ಕಾಲಭೈರವೇಶ್ವರರು ಕುಂಟ ಭೈರವೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧರಾಗುತ್ತಾರೆ. ಸಿದ್ದೇಶ್ವರರು ಕಾಳಭೈರವೇಶ್ವರನಿಗೆ ವರವನ್ನು ನೀಡುತ್ತಾರೆ. ಈ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮೊದಲು ನಿನಗೆ ಪೂಜಿ ಸಲ್ಲಿಸಿ ನೈವೇದ್ಯ ಮಾಡಿಸಿ ನಂತರ ನನ್ನ ದರ್ಶನಕ್ಕೆ ಬರಲಿ ಎಂದು ಈಗಲೂ ಅದೇ ಪದ್ಧತಿ ಜಾರಿಯಲ್ಲಿದೆ .

ಕಾಲಭೈರವೇಶ್ವರನ ಬೆಟ್ಟದ ಕೆಳಗೆ ಕುಂಟ ಭೈರವೇಶ್ವರ ಎಂಬ ಹೆಸರಿನಿಂದ ಪೂಜೆಗೊಳ್ಳುತ್ತಿದ್ದಾರೆ.ಬೆಟ್ಟದ ಮೇಲೆ ಸಿದ್ದೇಶ್ವರರು ಹಾಗೂ ಒಂದು ಶಿವನ ಲಿಂಗವು ಶಂಭುಲಿಂಗ ಎಂಬ ಹೆಸರಿನಿಂದ ಪೂಜೆಗೊಳುತ್ತಿದ್ದಾನೆ. ಸಿದ್ದೇಶ್ವರರಿಗೂ ಮತ್ತು ಕಾಲಭೈರವೇಶ್ವರರಿಗೂ ಗುರುಗಳಾಗಿದ್ದಾರೆ.

ಹಿಂದಿನ ಲೇಖನಪತ್ನಿಯೂ ಪತಿಯಿಂದ ಈ ಕೆಲವು ಚೌಕಟ್ಟಿನ ಅಡಿ ಇದ್ದರೆ ಮಾತ್ರ ಜೀವನಾಂಶ ಪಡೆಯಲು ಸಾಧ್ಯ
ಮುಂದಿನ ಲೇಖನಅರ್ಥಪೂರ್ಣವಾಗಿ ಯೋಗ ದಿನಾಚರಣೆ ಆಯೋಜನೆ: ಯದುವೀರ್ ಕೃಷ್ಣರಾಜ ದತ್ತ ಒಡೆಯರ್