ಮನೆ ಮನರಂಜನೆ ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಸೈಡ್‌ –ಬಿ ಟೀಸರ್‌ ಬಿಡುಗಡೆ

ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಸೈಡ್‌ –ಬಿ ಟೀಸರ್‌ ಬಿಡುಗಡೆ

0

ಬೆಂಗಳೂರು: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಸೈಡ್‌ -ಬಿ ಅಂದರೆ ಎರಡನೇ ಭಾಗವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಅದರಂತೆ ಮನು – ಪ್ರಿಯಾ ಪ್ರೇಮ ಕಥೆಯ ಮತ್ತೊಂದು ಭಾಗವನ್ನು ತೋರಿಸುವ ಪುಟ್ಟದೊಂದು ಟೀಸರ್‌ ನ್ನು ಚಿತ್ರತಂಡ ರಿಲೀಸ್‌ ಮಾಡಿದೆ.

ತಾನು ಮಾಡದ ತಪ್ಪನ್ನು, ಒಪ್ಪಿಕೊಂಡು 10 ವರ್ಷದ ಕಾಲ ಜೈಲು ಸೇರುವ ಮನು. ಮನುವಿಗಾಗಿ ಕಾಯುತ್ತಾ ಕೂರುವ ಪ್ರಿಯಾಳ ಪ್ರೀತಿ. ಕೊನೆಗೆ ಜೈಲಿನಿಂದ ಹೊರಬರುವ ವೇಳೆ ಮನು- ಪ್ರಿಯಾ ಪ್ರೇಮ ಕಥೆಗೆ ತಿರುವು ಸಿಕ್ಕಿರುತ್ತದೆ. ಇಬ್ಬರ ಬದುಕು ಬದಲಾಗುತ್ತದೆ ಆದರೆ ಬದಲಾಗದೆ ಹಾಗೆಯೇ ಉಳಿಯುವ ಮನು – ಪ್ರಿಯಳ ಪ್ರೀತಿ ಮತ್ತೆ ಮುಖಾಮುಖಿ ಆದಾಗ ಮುಂದೇನು ಆಗುತ್ತದೆ ಎನ್ನುವುದನ್ನು ಸೈಡ್‌ – ಬಿ ನಲ್ಲಿರುವ ರಹಸ್ಯ.

ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ -ಬಿʼ ಯ ಟೀಸರ್‌ ನಲ್ಲಿ ಕ್ಯಾಸೆಟ್‌ ಹಾಕಿ ಪ್ರಿಯಳ ಧ್ವನಿ ಕೇಳುವ ದೃಶ್ಯವನ್ನು ತೋರಿಸಲಾಗಿದೆ. ಜೈಲಿನಿಂದ ಹೊರಗೆ ಬಂದಾಗ ದೊಡ್ಡ ಸೆಲೆಬ್ರೇಷನ್‌ ಪ್ಲ್ಯಾನ್‌ ಮಾಡಿದ್ದಿನಿ.. ಎನ್ನುವ ಪ್ರಿಯಾಳ ಧ್ವನಿಯನ್ನು ಮನು ಕೇಳುವ ದೃಶ್ಯವಿದೆ. ಈ ದೃಶ್ಯ ಇಬ್ಬರ ನಡುವಿನ ಪ್ರೀತಿಯ ಕ್ಷಣಗಳನ್ನು  ನೆನಪಿಸುತ್ತದೆ.

ವಿಶೇಷವೆಂದರೆ 1 ನಿಮಿಷ 5 ಸೆಕೆಂಡ್‌ ಗಳ ಈ ಟೀಸರ್‌ ನಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯನ್ನು ಒಂದೇ ಟೀಸರ್‌ ನಲ್ಲಿ ಸೇರಿಸಲಾಗಿದೆ. ಆಯಾ ಭಾಷೆಗಾಗಿ ಟೀಸರ್‌ ನ್ನು ಪ್ರತ್ಯೇಕವಾಗಿ ರಿಲೀಸ್‌ ಮಾಡಿಲ್ಲ ಅನ್ನೋದು ವಿಶೇಷ.

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ಜೊತೆ ಅವಿನಾಶ್, ಪವಿತ್ರಾ ಲೋಕೇಶ್‌, ಯಮುನಾ ಶ್ರೀನಿಧಿ, ಹರ್ಷಿಲ್ ಕೌಶಿಕ್, ಅಶ್ವಿನ್ ಹಾಸನ್, ಅಶೋಕ್‌. ಅಚ್ಯುತ್ ಕುಮಾರ್‌, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ ಮುಂತಾದವರು ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದರು.

ಎರಡನೇ ಭಾಗದಲ್ಲಿ ಚೈತ್ರಾ ಆಚಾರ್‌ ಅವರು ಕಾಣಿಸಿಕೊಳ್ಳಲಿದ್ದಾರೆ. ಸೈಡ್‌ – ಬಿ ನವೆಂಬರ್‌ 17 ರಂದು ರಿಲೀಸ್‌ ಆಗಲಿದೆ.

ಹಿಂದಿನ ಲೇಖನಮೃಗಶಿರ (ಪೂರ್ವಾರ್ಧ)      
ಮುಂದಿನ ಲೇಖನESIC: 17710 ಅಪ್ಪರ್ ಡಿವಿಷನ್ ಕ್ಲರ್ಕ್, MTS ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ