ಮನೆ ಯೋಗಾಸನ ಪಾರ್ಶ್ವ ಬಕಾಸನ

ಪಾರ್ಶ್ವ ಬಕಾಸನ

0

 ‘ಪಾರ್ಶ್ವ’ವೆಂದರೆ ಪಕ್ಕ ಓರೆ. ಬಕ =ಕೊಕ್ಕರೆ ನೀರುಹಕ್ಕಿ ಈ ಆಸನದಲ್ಲಿ ಕಾಲುಗಳು ಪಕ್ಕಗಳಲ್ಲಿರುತ್ತವೆ.

Join Our Whatsapp Group

ಅಭ್ಯಾಸ ಕ್ರಮ :

1. ಮೊದಲು ಸಾಲಂಬಶೀರ್ಷಾಸನ  ಎರಡರ ಭಂಗಿಯನ್ನು ಅಭ್ಯಾಸ ಬೇಕು.

2. ಬಳಿಕ, ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನು ಬಗ್ಗಿಸಿ ತೊಡೆಗಳಿಂದ ಎದೆ ಹೊಟ್ಟೆಗಳನ್ನು ಮುಟ್ಟಿಸಬೇಕು.

3. ಆಮೇಲೆ ತೊಡೆಗಳ ಎರಡನ್ನು ಕಾಲುಗಳೆರಡನ್ನು ಜೋಡಿಸಬೇಕು.ಬಳಿಕ ಬಗ್ಗಿದ ಕಾಲು, ಮುಂಡಗಳನ್ನು ಬಲಗಡೆಗೆ ಒರೆ ಮಾಡಬೇಕು.ಆನಂತರ ಎಡತೊಡೆಯನ್ನು ಸಾಧ್ಯವಾದಷ್ಟೂ ಕಂಕುಳ ಬಳಿ ಬರುವಂತೆ ಬಲ ಮೇಲ್ದೋಳಿನ ಹಿಂಬದಿಯ ಮೇಲೆ ಒರಗಿಸಬೇಕು. ಈ ಸ್ಥಿತಿಯಲ್ಲಿರುವಾಗ ಒಂದೆರಡು ಸಲ ಅಳವಾಗಿ ಉಸಿರಾಟ ನಡೆಸುತ್ತ ಸಮತೋಲನ ಸ್ಥಿತಿಗೆ ತರಬೇಕು.

4. ಆ ಬಳಿಕ ಉಸಿರನ್ನು ಹೊರಬಿಡುತ್ತ ತಲೆಯನ್ನು ನೆಲದಿಂದ ಮೇಲೆತ್ತಿ,ವಪೆಯ ಬಳಿಯಿರುವ ಮಾಂಸ ಖಂಡಗಳನ್ನು ಬಿಗಿ ಮಾಡಿ ತೋಳುಗಳನ್ನು ನೆರವಾಗುತಮತ್ತಿ ಕೈಗಳ ಮೇಲೆ ಸಮತೋಲನಸಬೇಕು ಈ ಭಂಗಿಯ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟದಿಂದ ಕೆಲವು ಸೆಕೆಂಡುಗಳಕಾಲ ನೆಲೆಸಬೇಕು.ಇದರಲ್ಲಿ ಬಿಡಿ ಯಾಗಿರುವ ಕೈ ಮೇಲೆ ಒತ್ತಡವು ಹೆಚ್ಚಾಗಿರುವಂತೆ ಕಂಡುಬರುತ್ತದೆ.

5. ಅನಂತರ ಮೊಣಕೈಗಳನ್ನು ಬಗ್ಗಿಸಿ ತಲೆಯನ್ನು ನೆಲದ ಮೇಲೂರಿ ಮತ್ತೆ ಸಲಂಬಶೀರ್ಷಾಸನ ಎರಡರ ಸ್ಥಿತಿಗೆ ಹಿಂದುಳಿಬೇಕು.

6. ಇದಾದಮೇಲೆ,ಮಂಡಿಯನ್ನು ಬಗ್ಗಿಸಿ,ಬಾಗಿದ ಕಾಲುಗಳನ್ನು ಎಡಪಕ್ಕಕ್ಕೆ ಓರೆಯಾಗಿಸಿ ಆದಷ್ಟೂ ಕಂಕುಳಿನ ಬಳಿ ಬರುವಂತೆ ಬಲ ತೊಡೆಯನ್ನು ಎಡ ಮೇಲ್ದೋಳಿನ ಮೇಲೆ ಒರಗಿಸಬೇಕು.ಬಳಿಕ ಉಸಿರನ್ನು ಹೊರ ಬಿಟ್ಟು ತಲೆಯನ್ನು ನೆಲದಿಂದ ಮೇಲೆ ತ್ತಿ ಅನುಬಂಧ 4 ರಲ್ಲಿ ವಿವರಿಸುವಂತೆ ಸಮತೋಲನ ಸ್ಥಿತಿಗೆ ತರಬೇಕು.

7. ತಲೆಯನ್ನು ನೆಲದ ಮೇಲೂರಿ ಬಳಿಕ, ’ ಸಲಾಂಬಾಸನ 2ನೆ’ಯ ಭಂಗಿಗೆ ಮತ್ತೆ ಬರಬೇಕು. ಅನಂತರ ಕಾಲುಗಳನ್ನು ಕೆಳಕ್ಕಿಳಿಸಿ, ವಿಶ್ರಮಿಸಿಕೊಳ್ಳಬೇಕು.ಇಲ್ಲವೆ ’ಉರ್ಧ್ವಧನುರಾಸನ’ದ ಭಂಗಿಗೆ ಸರಿದು, ಮತ್ತೆ ‘ತಾಡಾಸನ’ಕ್ಕೆ ಬಂದು ನಿಲ್ಲಬೇಕು. ಈ ಮುಂದೆ ವಿವರಿಸಿರುವ ‘ವಿಪರೀತ ಚಕ್ರಾಸನ’ದಲ್ಲಿ ನೈಪುಣ್ಯವು ಲಭಿಸಿದ ಮೇಲೆ ‘ಉರ್ಧ್ವಧನುರಾಸನ’ವನ್ನು ಅಭ್ಯಸಿಸಿದ ಬಳಿಕ ಇದು ಅಭ್ಯಾಸಿಗೆ ಸುಗಮಯವಾದ ವ್ಯಾಯಾಮವಾಗಿ ಪರಿಣಮಿಸುತ್ತದೆ.

ಪರಿಣಾಮಗಳು :

ಈ ಆಸನವು ತೋಳುಗಳಿಗೆ ಬಲ ಕೊಡುವುದು. ಮಾತ್ರವಲ್ಲದೆ ಒಂದೇ ಸಮನಾಗಿ ಈ ಆಸನವು ಅಭ್ಯಾಸ ಮಾಡಿದರೆ ಕಿಬ್ಬೊಟ್ಟೆಯ ಪಕ್ಕದ ಮಾಂಸಖಂಡಗಳು ಚೆನ್ನಾಗಿ ಬೆಳೆಯುತ್ತವೆ,ಮತ್ತು ಕರುಳುಗಳು ಶಕ್ತಿಯನ್ನು ಗಳಿಸುತ್ತವೆ.