ನಮ್ಮ ಆಹಾರ ಸ್ಥಳೀಯವಾಗಿದ್ದರೆ ನಿಸರ್ಗ ನಿಯಮಗಳು ಸರಿಯಾಗಿ ನಿರ್ವಹಿಸಲ್ಪಡುತ್ತವೆ. ಆದರೆ ಆಧುನಿಕತೆ, ವ್ಯಾಪಾರೀಕರಣ ಬೆಳೆದಂತೆ ನಮ್ಮ ಸ್ಥಳೀಯ ಧಾನ್ಯ, ಬೆಳೆ ಕಾಳುಗಳಲ್ಲಿ ಹಲವಾರು ವಿದೇಶಿ ಧಾನ್ಯಗಳು ಮಿಶ್ರಣಗೊಂಡಿವೆ.
ಅದರಲ್ಲಿ ಮುಖ್ಯವಾಗಿ ಗೋಧಿ. ಈ ಧಾನ್ಯ ನಮ್ಮ ಸ್ಥಳೀಯ ಬೆಳೆಯಲ್ಲ. ವಿದೇಶದಿಂದ ವ್ಯಾಪಾರೀ ಧಾನ್ಯವಾಗಿ ಬಂದ ಗೋಧಿ ಇಂದು ಜಗತ್ತಿನ ಇತರ ಕಡೆಗಳಲ್ಲಿ ಯತೇಚ್ಚವಾಗಿ ಬೆಳೆಯುತ್ತಿದೆ. ಎಲ್ಲೆಡೆ ಸುಲಭವಾಗಿ ದೊರೆಯುತ್ತಿದೆ.
ಈ ಗೋಧಿಯಿಂದ ಅನೇಕ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಬ್ರೆಡ್, ಬನ್, ಪಾಸ್ತಾ, ಕೇಕ್, ಚಪಾತಿ, ತಿಂಡಿ, ಕುಕ್ಕೀಸ್, ಮಫಿನ್ ಹೀಗೆ ಹಲವಾರು ತಿಂಡಿ ತಿನಿಸುಗಳ ಮೂಲಕ ನಮ್ಮ ಹೊಟ್ಟೆ ಸೇರುತ್ತಿದೆ. ಈ ಗೋಧಿ ನಮ್ಮ ದೇಹಕ್ಕೆ ಎಷ್ಟು ಅಡ್ಡ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಇಲ್ಲಿದೆ.
ಜೀರ್ಣವ್ಯವಸ್ಥೆಗೆ ಹಾನಿ
ಗೋಧಿಯಲ್ಲಿ ಗ್ಲುಟೆನ್ ಪ್ರೋಟಿನ್ ಅಂಶವಿದೆ. ಇದು ಪ್ರೋಟಿನ್ಗಳ ವಿಧ ಅಥವಾ ವಿಭಾಗಗಳಲ್ಲಿ ಒಂದು. ಗ್ಲುಟೆನ್ನಳಲ್ಲಿ ಅಂಟುವಿಕೆ ಹೆಚ್ಚಿರುತ್ತದೆ ಇದರ ಸೇವನೆಯಿಂದ ನಮ್ಮ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೀರ್ಣವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹೊಟ್ಟೆ ಸೆಳೆತ, ಹೊಟ್ಟೆ ಉಬ್ಬರ, ಉದರದ ಕಾಯಿಲೆಗಳನ್ನು ಸೃಷ್ಠಿಸುತ್ತದೆ. ಗ್ಲುಟೆನ್ ಪ್ರೋಟಿನ್ ನಮ್ಮ ಕರುಳಿಗೆ ಸೇರಿದ ನಂತರ ಕರುಳಿನ ವಿಲ್ಲೆಸ್ ಗಳಿಗೆ ಹಾನಿ ಮಾಡುತ್ತದೆ. ವಿಲ್ಲೆಸ್ಗಬಳು ತುಂಡು ತುಂಡಾಗಿ ಕರುಳಿನಲ್ಲಿ ಗಾಯಗಳು ಏರ್ಪಡುತ್ತವೆ.
ಮಲಬದ್ಧತೆಗೆ ಕಾರಣ
ಗೋಧಿಯ ಸೇವನೆಯಿಂದ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಆಹಾರ ಸರಿಯಾಗಿ ಚಲನೆ ಹೊಂದದೆ ಮಲಬದ್ಧತೆ ಉಂಟಾಗುತ್ತದೆ. ಗ್ಲುಟೆನ್ ಮೊದಲೇ ಅಂಟುವಿಕೆಯಾಗಿದ್ದು ಅದು ಕರುಳಿನಲ್ಲಿ ಅಂಟಿಕೊಳ್ಳುತ್ತದೆ. ಇದರಿಂದ ಚಯಾಪಚಯ ಕ್ರಿಯೆಗೆ ತೊಂದರೆಯಾಗುತ್ತದೆ ನಾವು ಸೇವಿಸದ ಆಹಾರ ಕರುಳಿನಲ್ಲಿಯೇ ಉಳಿದು ಅನೇಕ ಸಮಸ್ಯೆಗಳನ್ನು ನೀಡುತ್ತದೆ.
ಕರುಳಿನ ಕ್ಯಾನ್ಸರ್
ಪಂಜಾಬ್ನಿಲ್ಲಿ ಗೋಧಿ ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಸೇವಿಸುತ್ತಾರೆ. ಇದು ನಿಮಗೂ ತಿಳಿದರಬಹುದು. ಪಂಜಾಬ್ನ್ನುಗ ಭಾರತದ ಕ್ಯಾನ್ಸರ್ ರಾಜಧಾನಿ ಎಂದು ಕರೆಯುತ್ತಾರೆ. 2013ರ ಸೆನ್ಸಸ್ ಪ್ರಕಾರ 10ಲಕ್ಷ ಜನರಲ್ಲಿ 90 ಜನ ಕ್ಯಾನ್ಸರ್ ರೋಗಿಗಳು ಪಂಜಾಬ್ನಾವರೇ ಆಗಿದ್ದರು.
ಗೋಧಿ ಹೆಚ್ಚಾಗಿ ಸೇವಿಸಿ ಕ್ಯಾನ್ಸರ್ ಗೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಗ್ಲುಟೆನ್ ಅಂಶ ಕರುಳಿನಲ್ಲಿ ಅಂಟಿಕೊಂಡು ಕರುಳಿನಲ್ಲಿ ಗಾಯಗಳನ್ನು ಉಂಟುಮಾಡುತ್ತದೆ. ಇದು ಮುಂದುವರೆದು ಗಡ್ಡೆಗಳಾಗಿ ಕರುಳಿನ ಕ್ಯಾನ್ಸರ್ ಉಂಟಾಗುತ್ತದೆ
ನಿರೋಧಕ ಶಕ್ತಿ ಮೇಲೆ ಹಾನಿ
ನಮ್ಮ ರೋಗ ನಿರೋಧಕ ಶಕ್ತಿ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕರುಳಿನಲ್ಲಿ ಕೆಟ್ಟ ಬ್ಯಾಕ್ಷರೀಯಾಗಳು ಹೆಚ್ಚಾಗಿ ಆರೋಗ್ಯ ವ್ಯವಸ್ಥೆ ಹಾಳಾಗುತ್ತದೆ. ಸಂಧಿವಾತ ಮತ್ತು ಉರಿಯೂತದ ಕರುಳಿನ ಕಾಯಿಲೆ ಸೇರಿದಂತೆ ಕೆಲವು ಸಾಮಾನ್ಯ ಪರಿಸ್ಥಿಗೆ ಗೋಧಿ ಸೇವನೆ ಸಂಬಂಧಿ ಹೊಂದಿರಬಹುದು ಎಂದಿ ವರ್ಲ್ಸ ರಿವ್ಯೂ ಆಪ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ಮಾಧ್ಯಮ ಪ್ರಕಟಿಸಿದೆ.
ಸಲಹೆ
ನಿಮಗೆ ಗೋಧಿಯ ಆಹಾರ ಮತ್ತು ತಿಂಡಿಗಳನ್ನು ಸೇವಿಸಲೇಬೇಕು ಎಂಬ ಇಚ್ಚೆಯಿದ್ದರೆ ಹೀಗೆ ಮಾಡಿ ಚಪಾತಿ ತಿನ್ನುವಾಗ ಅದರ ಜೊತೆ ಬಳಸುವ ಪಲ್ಯವನ್ನು ಹೆಚ್ಚಾಗಿ ಸೇವಿಸಿ. ಸ್ವಲ್ಪ ಚಪಾತಿ ಇದ್ದು ಪಲ್ಯ ಹೆಚ್ಚಾಗಿದ್ದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ. ಗೋಧಿ ಸೇವಿಸಲೇ ಬಾರದು ಎಂಬುದು ನಮ್ಮ ಬಯಕೆಯಲ್ಲಿ ಆದರೆ ಮಿತಿ ಇದ್ದರೆ ಒಳಿತು ಎಂಬದು ನಮ್ಮ ಆಶಯ.














