ಮೈಸೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವಿದೆಡೆ ಕಳೆದ ಮೂರು ದಿನದಿಂದಲೂ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಗೆ ಸ್ಥಳೀಯ ಶಾಸಕರು,ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್, ಶ್ರೀಧರ್, ಮಾಜಿ ಪಾಲಿಕೆ ಸದಸ್ಯ ಶಿವಣ್ಣ,ಮುಖಂಡರಾದ ನವೀನ್ ಕುಮಾರ್,ವಿಜಯ್ ಕುಮಾರ್,ರಾಜೇಶ್, ಫಾರುಖ್, ಡೈರಿ ವೆಂಕಟೇಶ್, ಮಾಜಿ ಆಶ್ರಯ ಸಮಿತಿ ಸದಸ್ಯ ಮೂರ್ತಿ, ರಾಜೇಶ್, ರಾಮು, ಪ್ರಶಾಂತ್, ಗುಣಶೇಖರ್, ರಾಘವೇಂದ್ರ, ರಘುರಾಜೇ ಅರಸ್, ಸೋಮು ಸರಗೂರು, ವಸಂತ್, ಕಿರಣ್, ನಾಗಮಹದೇವ,ಚಿಕ್ಕಲಿಂಗು, ಪ್ರದೀಪ್, ರವಿ ಮತ್ತಿತರರು ಉಪಸ್ಥಿತರಿದ್ದರು.
ಮಹಾಪೌರರು,ಪಾಲಿಕೆ ಆಯುಕ್ತರು ಬಂದು ಸಮಸ್ಯೆ ಬಗೆಹರಿಸುವ ವರೆಗೂ ಜಾಗ ಬಿಟ್ಟು ಹೋಗುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಪ್ರತಿಭಟಿಸಿದರು.