ಅಭ್ಯಾಸ ಕ್ರಮ
1. ಮೊದಲು ‘ಪದ್ಮಾಸನ’ದಲ್ಲಿ ಕುಳಿತುಕೊಳ್ಳಬೇಕು.
2. ಬಲಿಕ ತೋಳುಗಳನ್ನು ಮುಂಚಾಚಿ,ಅಂಗೈಗಳನ್ನು ನೆಲದ ಮೇಲೆ ಊರಿಟ್ಟು ಬೆರಳುಗಳನ್ನು ಮುಂಗಡೆಗೆ ತುದಿ ಮಾಡಬೇಕು.
3. ಆನಂತರ ಮಂಡಿಗಳನ್ನು ನೆಲದ ಮೇಲೂರಿ, ವಸ್ತಿ ಕುಹರದ ಭಾಗವನ್ನು ನೆಲದ ಕಡೆಗೆ ದೂಡಬೇಕು.
4. ಆಮೇಲೆ ಪೃಷ್ಠಗಳೆರಡನ್ನೂ ಒತ್ತಿಟ್ಟು( ಸುಂಕುಚಿಸಿ) ಬೆನ್ನನ್ನು ನೇರವಾಗಿ ಹಿಗ್ಗಿಸಿ, ತೋಳುಗಳನ್ನು ಪೂರ್ಣವಾಗಿ ಚಾಚುವುದರ ಮೂಲಕ ಬಿಗಿಗೊಳಿಸಬೇಕು. ಈಗ ದೇಹದ ಭಾರವೆನ್ನೇಲ್ಲ ಅಂಗೈ ಮತ್ತು ಮಂಡಿಗಳಿಗೆ ಹೋರಿಸ ಬೇಕಾಗಿದೆ.ಬಳಿಕ ಬಾಯಿಯನ್ನು ಅಗಲವಾಗಿ ಹಿಗ್ಗಿಸಿ ನಾಲಿಗೆಯನ್ನು ಗದ್ದದ ಕಡೆಗೆ ಸಾಧ್ಯವಾದಷ್ಟು ಚಾಚೀಡಬೇಕು.
5. ಇದಾದ ಬಳಿಕ,ಹುಬ್ಬಿನ ನೋಡುತ್ತಾ ನಾ ಇಲ್ಲವೇ ಮೂಗಿನ ತುದಿಯನ್ನು ನಿಟ್ಟಿಸುತ್ತ ಈ ಭಂಗಿಯಲ್ಲಿ ಬಾಯಿಂದಲೇ ಉಸಿರಾಟ ನಡೆಸುತ್ತ ಸುಮಾರು 30 ಸೆಕೆಂಡುಗಳ ಕಾಲ ನೆಲೆಸಬೇಕು.
6. ಕೊನೆಯಲ್ಲಿ ಪದ್ಮಾಸನದಲ್ಲಿ ಕುಳಿತು ಕೈಗಳನ್ನು ನೆಲದಿಂದ ಮೇಲೆತ್ತಬೇಕು ಆಮೇಲೆ ಕಾಲುಗಳ ಸ್ಥಾನಗಳನ್ನು ಬದಲಾಯಿಸಿ, ಪದ್ಮಾಸನ ಹಾಕಿ, ಇದೇ ವಿಧವಾದ ಭಂಗಿಯನ್ನು ಅಷ್ಟೇ ಕಾಲ ಅಭ್ಯಸಿಸಬೇಕು.
ಪರಿಣಾಮಗಳು
ಈ ಭಂಗಿಯ ಅಭ್ಯಾಸದಿಂದ ಪಿತ್ತಕೋಶಕ್ಕೆ ಒಳ್ಳೆಯ ವ್ಯಾಯಾಮ ವಾದಂತಾಗಿ ಆ ಮೂಲಕ ಪಿತ್ತರ ಸದುತ್ವತ್ತಿಯನ್ನು ಹತೋಟಿಯಲ್ಲಿಡುವುದಕ್ಕೆ ನೆರವಾಗುತ್ತದೆ.ಅಲ್ಲದೆ ಉಸಿರಿನ ದುರ್ಗಂಧವನ್ನು ಇದು ದೂರ ಮಾಡುತ್ತದೆ. ನಾಲಿಗೆಯು ಇದರಿಂದ ಸ್ವಚ್ಛಗೊಳ್ಳುತ್ತದೆ. ಮಾತಿನಲ್ಲಿ ತೊದಲು ಇದ್ದರೆ ಅದನ್ನು ಕ್ರಮಪಡಿಸಿ ಸ್ಪಷ್ಟವಾಗಿ ಮಾತನಾಡಲು ಅವಕಾಶ ಸಿಗುತ್ತದೆ.ಈ ಕಾರಣದಿಂದ ಬಾಲ್ಯದಿಂದ ಬಿಕ್ಕಲುಳ್ಳದವರಿಗೆ ಈಆಸನಾಭ್ಯಾಸವನ್ನು ಸಲಹೆ ಮಾಡಲಾಗಿದೆ.
ಈ ಆಸನವು ‘ತ್ರಿಕ’ ಎಂಬ ಬೆನ್ನು ಮೂಳೆಯ ತಲಗಿರುವ ತ್ರಿಕೋನಾಕಾರದ ಕಾಕ್ಸಿಸ್ ಎಂಬ ಮೂಳೆಯಲ್ಲಿ ನೋವಿದ್ದರೆ ಮತ್ತು ಅದು ಸ್ಥಾನಪಲ್ಲಟಗೊಂಡಿದ್ದರೆ ಅದನ್ನು ಸರಿಪಡಿಸುತ್ತದೆ.