ಮನೆ ಆರೋಗ್ಯ ತಲೆಯಲ್ಲಿ ಇಣುಕುತ್ತಿರುವ ಬಿಳಿ ಕೂದಲಿಗೆ ಸಿಂಪಲ್ ಮನೆಮದ್ದುಗಳು

ತಲೆಯಲ್ಲಿ ಇಣುಕುತ್ತಿರುವ ಬಿಳಿ ಕೂದಲಿಗೆ ಸಿಂಪಲ್ ಮನೆಮದ್ದುಗಳು

0

ಬಹಳಷ್ಟು ಜನರಿಗೆ ತಲೆ ಕೂದಲು ಚಿಕ್ಕ ವಯಸ್ಸಿನಲ್ಲಿ ಅಂದರೆ ಶಾಲಾ ದಿನಗಳಲ್ಲಿ ಬಿಳಿ ಬಣ್ಣಕ್ಕೆ ತಿರುಗಿರುವ ಸಾಧ್ಯತೆ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಬಳಸುವ ನೀರಿನಿಂದ ಹಿಡಿದು ಅನುವಂಶಿಯ ಕಾರಣಗಳು ಕೂಡ ಇರುತ್ತವೆ.

ಆದರೆ ಒಮ್ಮೆ ತಲೆ ಕೂದಲು ಬೆಳ್ಳಗಾದರೆ ಮತ್ತೆ ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಕಡಿಮೆ. ಆದರೆ ನೈಸರ್ಗಿಕ ವಿಧಾನಗಳಲ್ಲಿ ಇದು ಆಗುತ್ತದೆ. ಆದರೆ ಸ್ವಲ್ಪ ಸಮಯ ಹಿಡಿಯುತ್ತದೆ

ಗೋರಂಟಿ ಪೌಡರ್

• ಮೆಹಂದಿ ಎಂಬುದು ಇದಕ್ಕಿರುವ ಇನ್ನೊಂದು ಹೆಸರು. ಇದರಿಂದ ನಿಮ್ಮ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು.

• ಎರಡು ಟೀ ಚಮಚ ಗೋರಂಟಿ ಪೌಡರ್, ನೆಲ್ಲಿಕಾಯಿ ಪೌಡರ್, ಸೀಗೆಕಾಯಿ ಪೌಡರ್, ಒಂದು ಟೀ ಚಮಚ ನಿಂಬೆಹಣ್ಣಿನ ರಸ, ಎರಡು ಟೀ ಚಮಚ ಗಟ್ಟಿ ಮೊಸರು, ಒಂದು ಕೋಳಿ ಮೊಟ್ಟೆ ಮತ್ತು ಅರ್ಧ ಟೀ ಚಮಚ ತೆಂಗಿನ ಎಣ್ಣೆ ಎಲ್ಲವನ್ನು ಒಂದು ಪ್ಯಾನ್ ನಲ್ಲಿ ಮಿಕ್ಸ್ ಮಾಡಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಂಡು ಅದನ್ನು ತಲೆ ಕೂದಲಿಗೆ ಹಚ್ಚಿ. ಎರಡು ಗಂಟೆಗಳ ನಂತರದಲ್ಲಿ ತಲೆ ಸ್ವಚ್ಛ ಮಾಡಿಕೊಳ್ಳಿ.

ನಿಂಬೆಹಣ್ಣು

• ನಿಂಬೆ ಹಣ್ಣಿನ ರಸ ಮತ್ತು ನೆಲ್ಲಿಕಾಯಿ ಪೌಡರ್ ಮಿಶ್ರಣ ಮಾಡಿ ಅದನ್ನು ತಲೆ ಕೂದಲಿಗೆ ಹಚ್ಚುವುದ ರಿಂದ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಸಾಧ್ಯತೆಯನ್ನು ತಡೆಯಬಹುದು.

• ನೀರಿನಲ್ಲಿ ನೆಲ್ಲಿಕಾಯಿ ಪೌಡರ್ ಮಿಶ್ರಣ ಮಾಡಿ ಶಾಂಪು ಹಚ್ಚಿ ಸ್ನಾನ ಮಾಡಿದ ಬಳಿಕ ಅನ್ವಯಿಸು ವುದರಿಂದ ತಲೆ ಕೂದಲಿಗೆ ಕಂಡೀಷನರ್ ಆಗಿ ಇದು ಕೆಲಸ ಮಾಡುತ್ತದೆ.

ಬಿಳಿ ಎಳ್ಳು

ಎಳ್ಳು ಸೇವಿಸುವುದರಿಂದ ಅಥವಾ ಎಳ್ಳೆಣ್ಣೆ ತಲೆ ಕೂದಲಿಗೆ ಹಚ್ಚುವುದರಿಂದ ಕೂಡ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಡೆಯಬಹುದು. ಆರೋಗ್ಯಕರ ತಲೆ ಕೂದಲಿಗೆ ಎಳ್ಳು ಬಹಳ ಪ್ರಯೋಜನ ಕಾರಿ. ಆದಷ್ಟೂ ತಾಜಾ ಎಳ್ಳು ಬಳಸಿ.

ಬೃಂಗರಾಜ್

ಅಶ್ವಗಂಧ ಮತ್ತು ಬೃಂಗರಾಜ್ ಎರಡು ಸಹ ತಲೆ ಕೂದಲಿಗೆ ವರದಾನ. ತೆಂಗಿನ ಎಣ್ಣೆ ಜೊತೆಗೆ ಈ ಪೇಸ್ಟ್ ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆದುಕೊಳ್ಳುವುದರಿಂದ ಲಾಭವಿದೆ.

ಈರುಳ್ಳಿ ಪೇಸ್ಟ್

ನಿಮ್ಮ ನೆತ್ತಿಯ ಭಾಗಕ್ಕೆ ಈರುಳ್ಳಿ ಪೇಸ್ಟ್ ಪ್ರತಿ ದಿನ ಸ್ನಾನ ಮಾಡುವ ಮುಂಚೆ ಕೆಲವು ದಿನಗಳವರೆಗೆ ಅನ್ವಯಿಸುವುದರಿಂದ ಕ್ರಮೇಣವಾಗಿ ನಿಮ್ಮ ತಲೆ ಕೂದಲು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ತಲೆ ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ.

ಮೊಸರು

ಅರ್ಧ ಕಪ್ ಮೊಸರು ತೆಗೆದುಕೊಂಡು ಅದನ್ನು ನಿಮ್ಮ ತಲೆ ಕೂದಲಿಗೆ ಅನ್ವಯಿಸಿ. ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಮತ್ತು ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ. ಕಡಲೆ ಹಿಟ್ಟು ಮತ್ತು ಮೊಸರು ಎರಡನ್ನು ಮಿಶ್ರಣ ಮಾಡಿ ತಲೆ ತೊಳೆದುಕೊಳ್ಳಿ.

ಅಪ್ಪಟ ಹಸುವಿನ ತುಪ್ಪ

ಹಸುವಿನ ತುಪ್ಪದಿಂದ ತಲೆ ಕೂದಲಿಗೆ ಮಸಾಜ್ ಮಾಡುವ ಅಭ್ಯಾಸ ಇಟ್ಟುಕೊಂಡವರಿಗೆ ತಲೆ ಕೂದಲು ಅಷ್ಟು ಬೇಗ ಬೆಳ್ಳಗೆ ಆಗುವುದಿಲ್ಲ. ತಲೆ ಕೂದಲು ಉದುರುವ ಸಮಸ್ಯೆ ಕೂಡ ಇದರಿಂದ ಪರಿಹಾರ ವಾಗುತ್ತದೆ.