ಮನೆ ಆರೋಗ್ಯ ಬಾಯಿ ಹುಣ್ಣು ನಿವಾರಣೆಗೆ ಸಿಂಪಲ್ ಮನೆಮದ್ದು

ಬಾಯಿ ಹುಣ್ಣು ನಿವಾರಣೆಗೆ ಸಿಂಪಲ್ ಮನೆಮದ್ದು

0

ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಬಾಯಿ ಹುಣ್ಣು ನಿವಾರಣೆಗೆ ಈ ಸಿಂಪಲ್‌ ಮನೆಮದ್ದು ಬಳಸಿ.
ಈ ಬಾಯಿ ಹುಣ್ಣುಗಳನ್ನು ಮೊದಲ ಯಾವ ಕಾರಣಕ್ಕೆ ಆಗಿವೆ ಎನ್ನುವುದನ್ನು ಕಂಡುಕೊಳ್ಳಬೇಕು. ಏಕೆಂದರೆ ಕೆಲವೊಮ್ಮೆ ಮಧುಮೇಹದ ಲಕ್ಷಣವಾಗಿಯೂ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆರಂಭದಲ್ಲಿ ಪರಿಣಾಮಕಾರಿ ಮನೆಮದ್ದನ್ನು ಮಾಡಿಕೊಂಡು ಗುಣಪಡಿಸಿಕೊಳ್ಳುವುದು ಒಳ್ಳೆಯದು.
ಹಾಗಾದರೆ ಬಾಯಿಹುಣ್ಣು ನಿವಾರಣೆಗೆ ಯಾವೆಲ್ಲಾ ಮನೆಮದ್ದುಗಳನ್ನು ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.


ತುಪ್ಪದ ಸೇವನೆ
ಬಾಯಿ ಹುಣ್ಣನ್ನು ನಿವಾರಿಸಲು ತುಪ್ಪದ ಸೇವನೆ ಒಳ್ಳೆಯದು. ಆಹಾರದಲ್ಲಿ ತುಪ್ಪವನ್ನು ಸೇವನೆ ಮಾಡುವುದಿರಬಹುದು ಅಥವಾ ಬಾಯಿ ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚುವುದರಿಂದಲೂ ಬಾಯಿಯಲ್ಲಾದ ನೋವಿನ ಹುಣ್ಣು ಕಡಿಮೆಯಾಗುತ್ತದೆ.
ತುಪ್ಪದ ಸೇವನೆಯಿಂದ ದೇಹದಲ್ಲಿ ಉಷ್ಣತೆಯಾಗುವುದನ್ನು ತಡೆಯಬಹುದಾಗಿದೆ.
ಪೇರಳೆ (ಸೀಬೆ) ಎಲೆ /ಚಿಗುರು
ಬಾಯಿಯ ಹುಣ್ಣಿನ ನಿವಾರಣೆಗೆ ಪೇರಳೆ ಮರದ ಎಳೆಯ ಎಲೆಗಳು ಸಹಾಯಕವಾಗಿದೆ. ಪೇರಳೆ ಎಲೆಯ ಚಿಗುರನ್ನು ತಂದು ನೀರಿನಲ್ಲಿ ಕುದಿಸಿ, ಕಷಾಯದ ರೀತಿಯಲ್ಲಿ ಸೇವನೆ ಮಾಡುವುದರಿಂದ ಒಂದೇ ದಿನದಲ್ಲಿ ಬಾಯಿ ಹುಣ್ಣನ್ನು ನಿವಾರಣೆ ಮಾಡಬಹುದಾಗಿದೆ.


ಪೇರಳೆ ಎಲೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ. ಹೀಗಾಗಿ ನಿಮ್ಮ ಬಾಯಿ ಹುಣ್ಣಿನ ನಿವಾರಣೆಗೆ ಪೇರಳೆ ಎಲೆಗಳ ಚಿಗುರು ಉತ್ತಮ ಮನೆಮದ್ದಾಗಲಿದೆ.
ಅಲೋವೆರಾ
ಬಾಯಿ ಹುಣ್ಣಿನ ನಿವಾರಣೆಗೆ ಅಲೋವೇರಾವನ್ನು ಬಳಸುವುದು ಒಳ್ಳೆಯದು. ಅಲೋವೆರಾ ಜ್ಯೂಸ್‌ನ್ನು ಸೇವನೆ ಮಾಡುವುದರಿಂದ ಬಾಯಿ ಹುಣ್ಣನ್ನು ನಿವಾರಿಸಬಹುದಾಗಿದೆ. ಅಲ್ಲದೆ ಅಲೋವೇರಾವನ್ನು ನೆತ್ತಿಯ ಮೇಲೆ ಹಾಕಿಕೊಳ್ಳುವುದರಿಂದಲೂ ದೇಹ ತಂಪಾಗಿ ಬಾಯಿ ಹುಣ್ಣನ್ನು ಗುಣಪಡಿಸಬಹುದಾಗಿದೆ.


ಅಥವಾ ಬಾಯಿಯಲ್ಲಿ ಹುಣ್ಣುಗಳಿದ್ದರೆ, ದಿನವಿಡೀ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಲೋವೆರಾ ರಸವನ್ನು ಸೇವಿಸಿದರೆ ಪರಿಹಾರ ಸಿಗುತ್ತದೆ. ಅಲೋವೆರಾ ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ ಮತ್ತು ಅಲೋವೆರಾ ಜ್ಯೂಸ್ ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಸಹ ಪ್ರಯೋಜನಕಾರಿಯಾಗಿದೆ.
ಕೊತ್ತಂಬರಿ ಕಾಳುಗಳು
ದೇಹವನ್ನು ತಂಪುಗೊಳಿಸಿ ಬಾಯಿ ಹುಣ್ಣುಗಳನ್ನು ನಿವಾರಿಸಲು ಕೊತ್ತಂಬರಿ ಕಾಳುಗಳು ಅತ್ಯುತ್ತಮ ಪದಾರ್ಥವಾಗಿದೆ. ಕೊತ್ತಂಬರಿ ಕಾಳುಗಳನ್ನು ರಾತ್ರಿಯೀಡಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು. ಕೊತ್ತಂಬರಿ ಬೀಜದ ಕಷಾಯವನ್ನು ಕೂಡ ಮಾಡಿ ಸೇವಿಸುವುದು, ಹಾಗೆಯೇ ತಿನ್ನುವುದರಿಂದಲೂ ಕೂಡ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
​ಅತ್ತಿಮರದ ತೊಗಟೆ
ಬಾಯಿ ಹುಣ್ಣಿನ ನಿವಾರಣೆಗೆ ಅತ್ತಿಮರದ ತೊಗಟೆ ಉತ್ತಮ ಮನೆಮದ್ದಾಗಿದೆ. ಅತ್ತಿ ಮರದ ತಾಜಾ ತೊಗಟೆಯನ್ನು ತಂದು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. 2 ಲೋಟ ನೀರು ಒಂದು ಲೋಟಕ್ಕೆ ಇಳಿಯುವಷ್ಟು ಕುದಿಸಿದ ನಂತರ ಅದನ್ನು ಸೋಸಿಕೊಳ್ಳಿ. ನಂತರ ಅರ್ಧ ಲೋಟ ಅತ್ತಿ ತೊಟಗೆಯನ್ನು ಕುದಿಸಿದ ನೀರಿಗೆ ಚಿಟಿಕೆ ಸಕ್ಕರೆ ಬೆರೆಸಿ ಸೇವನೆ ಮಾಡಿ.

ಹಿಂದಿನ ಲೇಖನ`ಅಪರೂಪದಲ್ಲೇ ಅಪರೂಪʼದ ಮಾನದಂಡಗಳು ಕಠಿಣವಾದ ಕಾರಣ ಮರಣದಂಡನೆ ವಿಧಿಸುವುದು ಅತ್ಯಂತ ಕಷ್ಟ: ಮಧ್ಯಪ್ರದೇಶ ಹೈಕೋರ್ಟ್
ಮುಂದಿನ ಲೇಖನನರ್ಮ್ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ ಶಾಸಕ ಎಲ್.ನಾಗೇಂದ್ರ