ದೇಹದ ತೂಕ ಹೆಚ್ಚಾದ ಮೇಲೆ ಮನುಷ್ಯನ ಆಕಾರ ಮತ್ತು ಅಂದ ಮೊದಲಿನಂತೆ ಇರುವುದಿಲ್ಲ. ಹೆಚ್ಚಾದ ತೂಕವನ್ನು ಹಾಗೆ ಬಿಟ್ಟರೆ ಆರೋಗ್ಯ ಸಮಸ್ಯೆಗಳು ಕೂಡ ತಪ್ಪಿದ್ದಲ್ಲ. ಹಾಗಾಗಿ ಉತ್ತಮ ಆರೋಗ್ಯಕ್ಕೆ ಮತ್ತು ದೇಹದ ತೂಕವನ್ನು ಸಹಜವಾಗಿ ನಿರ್ವಹಣೆ ಮಾಡಿಕೊಳ್ಳಲು ನಾವು ನೈಸರ್ಗಿಕ ವಿಧಾನಗಳನ್ನು ಹುಡುಕಬೇಕು.
ಈ ನಿಟ್ಟಿನಲ್ಲಿ ನಾವು ಮನೆಯಲ್ಲಿ ಬಳಕೆ ಮಾಡುವ ಅರಿಶಿನ ನಮಗೆ ಪ್ರಯೋಜನ ಕಾರಿಯಾಗಿದೆ. ಅಡುಗೆಯಲ್ಲಿ ಚಮತ್ಕಾರ ಮಾಡುವ ಅರಿಶಿನ ನಮ್ಮ ತೂಕ ನಿರ್ವಹಣೆ ಮಾಡುವಲ್ಲಿ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಬಳಿ ತಾಜಾ ಮತ್ತು ಸಾವಯವ ಅರಿಶಿನ ಇದ್ದರೆ, ನೀವು ಸುಲಭವಾಗಿ ನಿಮ್ಮ ದೇಹದ ತೂಕವನ್ನು ಈ ಕೆಳಗಿನ ಹಾಗೆ ಉಪಯೋಗಿಸಿ ಕಡಿಮೆ ಮಾಡಿಕೊಳ್ಳ ಬಹುದು.
ಜೇನು ತುಪ್ಪದ ಜೊತೆ ಅರಿಶಿನ
• ನಿಮಗೆ ಅರಿಶಿನದ ಚಹಾ ಗೊತ್ತಿರಬಹುದು. ಇದಕ್ಕೆ ಸ್ವಲ್ಪ ಅಪ್ಪಟ ಜೇನುತುಪ್ಪ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
• ಏಕೆಂದರೆ ಜೇನುತುಪ್ಪ ಹೊಟ್ಟೆ ಹಸಿವು ನಿಯಂತ್ರಣ ಮಾಡುತ್ತದೆ ಮತ್ತು ತನ್ನಲ್ಲಿ ಆಂಟಿ ಇನ್ಫಾಮೇ ಟರಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ದೇಹದ ತೂಕ ನಿಯಂತ್ರಣ ಮಾಡಲು ಒಂದು ಬೆಸ್ಟ್ ಆಹಾರ ಪದಾರ್ಥ.
ದಾಲ್ಚಿನ್ನಿ ಜೊತೆಗೆ ಅರಿಶಿನ
• ದಾಲ್ಚಿನ್ನಿ ಅಥವಾ ಚಕ್ಕೆ ಒಂದು ಮಸಾಲೆ ಪದಾರ್ಥ. ಇದನ್ನು ನಾವು ಬಹುತೇಕ ಅಡುಗೆ ಗಳಲ್ಲಿ ಉಪಯೋಗಿಸುತ್ತೇವೆ. ನೀವು ತಯಾರು ಮಾಡುವ ಅರಿಶಿನ ಚಹದಲ್ಲಿ ದಾಲ್ಚಿನ್ನಿ ಹಾಕುವುದರಿಂದ ನಿಮ್ಮ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
• ಏಕೆಂದರೆ ದಾಲ್ಚಿನ್ನಿ ಅಥವಾ ಚಕ್ಕೆ ತನ್ನಲ್ಲಿ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
ಶುಂಠಿ ಮತ್ತು ಅರಿಶಿನದ ಚಹಾ
• ಶುಂಠಿ ತನ್ನಲ್ಲಿ ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಒಂದು ಗಿಡ ಮೂಲಿಕೆಯಾಗಿದೆ. ಇದರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧೀಯ ಗುಣವನ್ನು ಸಹ ನಿರೀಕ್ಷೆ ಮಾಡಬಹುದು.
• ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಕೂಡ ಇದು ಕೆಲಸ ಮಾಡುತ್ತದೆ. ಶುಂಠಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಪ್ರತಿದಿನ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳು ವುದು.
ನೀವು ತಯಾರು ಮಾಡುವ ಅಡುಗೆಗಳಲ್ಲಿ ಅರಿಶಿನ
• ನೀವು ನಿಮ್ಮ ಆಹಾರ ಪದಾರ್ಥಗಳಲ್ಲಿ ಅರಿಶಿನ ಬೆರೆಸಿ ತಯಾರಿಸಬಹುದು. ಹೀಗೆ ಮಾಡುವು ದರಿಂದ ಕೂಡ ಹಲವಾರು ಆರೋಗ್ಯಕರ ಗುಣಲಕ್ಷಣಗಳು ಸಿಗುತ್ತವೆ.
• ಅರಿಶಿನದಲ್ಲಿ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳು ಇರುವುದರಿಂದ ಇದು ನಿಮ್ಮ ಯಾವುದೇ ಅಡುಗೆಗೆ ರುಚಿ ಮತ್ತು ನಿಮಗೆ ತೂಕ ಕಡಿಮೆ ಮಾಡುವ ಅನುಭವವನ್ನು ನೀಡುತ್ತದೆ.
ಅರಿಶಿನದ ಹಾಲು
ಹಾಲಿಗೆ ಅರಿಶಿನ ಹಾಕಿ ರಾತ್ರಿ ಮಲಗುವ ಮುಂಚೆ ಕುಡಿಯುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಚಳಿಗಾಲದ ಅಥವಾ ಮಳೆಗಾಲದ ಸಂದರ್ಭದಲ್ಲಿ ಎದುರಾಗುವ ಸಣ್ಣ ಪುಟ್ಟ ಶೀತ ನೆಗಡಿ ಕೆಮ್ಮು ಇವುಗಳಿಂದ ರಕ್ಷಣೆ ಕೊಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ರಾತ್ರಿ ಹೊತ್ತು ಒಂದು ಲೋಟ ಬಿಸಿ ಹಾಲಿಗೆ ಅರಿಶಿನ ಹಾಕಿ ಕುಡಿಯಿರಿ.