ಮನೆ ರಾಜ್ಯ ಅರಣ್ಯದಂಚಿನಲ್ಲಿ ವಾಸಿಸುವ ಜನರ ತೊಂದರೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಸಚಿವ ಎನ್‌ ಎಸ್‌ ಭೋಸರಾಜು

ಅರಣ್ಯದಂಚಿನಲ್ಲಿ ವಾಸಿಸುವ ಜನರ ತೊಂದರೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ಮುಖ್ಯಮಂತ್ರಿಗಳು ಹಾಗೂ ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಭರವಸೆ ನೀಡಿದರು.

Join Our Whatsapp Group

ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್‌ ಪೊನ್ನಣ್ಣ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಕೊಡಗು ಆದಿವಾಸಿ ಮುಖಂಡರು ಸೇರಿದಂತೆ ರಾಜ್ಯದ ವಿವಿದ ಆದಿವಾಸಿ ಬುಡಕಟ್ಟು ಪ್ರಮುಖರಿಂದ ಸಮಸ್ಯೆಗಳನ್ನು ಆಲಿಸಿದರು. .

ಆದಿವಾಸಿಗಳ ಸಂಪೂರ್ಣ ಅಹವಾಲನ್ನು ಆಲಿಸಿದ ಸಚಿವ ಭೋಸರಾಜು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು, ಅರಣ್ಯದಂಚಿನಲ್ಲಿ ವಾಸಿಸುವ ಜನರ ತೊಂದರೆಗಳ ಬಗ್ಗೆ ಮುಖಂಡರ ಅಳಲನ್ನು ಆಲಿಸಿದರು. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ಸಚಿವ ಭೋಸ್ ರಾಜ್ ಮತ್ತು ಎ.ಎಸ್.ಪೊನ್ನಣ್ಣ ನೀಡಿದರು

ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ಅಭಿವೃದ್ಧಿ ಸಂಸ್ಥೆ-ಅಧ್ಯಕ್ಷರು ಶ್ರೀ ವಿಠಲ್, ಕೊಡಗು ವಿಭಾಗ ಉಪಾಧ್ಯಕ್ಷರು ಶ್ರೀಮತಿ ಜಿ.ಬಿ ಬೊಜ್ಜಮ್ಮ,ವಿರಾಜಪೇಟೆ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದಿಡ್ಡಳ್ಳಿ ಮುತ್ತಮ್ಮ, ಮೈಸೂರು ಕಾರ್ಯದರ್ಶಿ ಶ್ರೀ ಗಿರೀಶ್ ಬಿ.ಸಿ,ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರಾ ಮೈನಾ, ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು ಡಾ. ನಿಶ್ಚಲ್ ದಂಬೆಕೋಡಿ, ಮತ್ತಿತರ ಕರ್ನಾಟಕ ರಾಜ್ಯ ಅದಿವಾಸಿ  ಅಭಿವೃದ್ಧಿ ಸಂಸ್ಥೆ ಮುಖಂಡರುಗಳು ಹಾಜರಿದ್ದರು.