ಮನೆ ಅಪರಾಧ ಬೆಂಗಳೂರಿನಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ತಾಯಿ ಕೊಂದ ಪಾಪಿ ಮಗ

ಬೆಂಗಳೂರಿನಲ್ಲಿ ಕಬ್ಬಿಣದ ರಾಡ್ ನಿಂದ ಹೊಡೆದು ತಾಯಿ ಕೊಂದ ಪಾಪಿ ಮಗ

0

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ಆಗಿದ್ದು, ಕಬ್ಬಿಣದ ರಾಡ್ ನಿಂದ ಹೊಡೆದು ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತಮ್ಮ ಜನ್ಮದಾತೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಆರೋಪ ಮಗನ ಮೇಲೆ ಹೊರಡಿದೆ. ಹತ್ಯೆಯಾದ ಮಹಿಳೆಯನ್ನು ಶಾಂತಬಾಯಿ (82) ಎಂದು ಗುರುತಿಸಲಾಗಿದೆ. ಇವರು ತಮ್ಮ ಮಗನೊಂದಿಗೆ ವಾಸವಿದ್ದು, ಆರೋಪಿ ಮಗನ ಹೆಸರು ಮಹೇಂದ್ರ ಸಿಂಗ್ ಎನ್ನಲಾಗಿದೆ. ಮಹೇಂದ್ರ ಸಿಂಗ್ ಕುಡಿತದ ಚಟಕ್ಕೆ ಬಲಿಯಾಗಿ, ಕುಡಿದ ಮತ್ತಿನಲ್ಲಿ ತಾಯಿಯ ಜೊತೆಗೆ ವಾಗ್ವಾದ ಮಾಡಿಕೊಂಡು, ಬಳಿಕ ಕಬ್ಬಿಣದ ರಾಡ್‌ನಿಂದ ಅಟ್ಟಹಾಸ ತೋರಿದ್ದಾನೆ ಎನ್ನಲಾಗಿದೆ.

ಅಪರಾಧದ ನಂತರ ಮಹೇಂದ್ರ ಸಿಂಗ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಾಗಲಕುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ಹಿಡಿಯಲು ಬಲೆ ಬೀಸಿದ್ದಾರೆ.

ಈ ದುರ್ಘಟನೆ ನೆರೆಹೊರೆಯ ನಿವಾಸಿಗಳಲ್ಲಿ ಭೀತಿ ಮತ್ತು ದುಃಖವನ್ನು ಉಂಟುಮಾಡಿದ್ದು, ಮಗನಿಂದಲೇ ತಾಯಿಗೆ ಅಂತ್ಯ ಸಂಭವಿಸಿದ ಈ ಘಟನೆಯು ಸಮಾಜದಲ್ಲಿ ಮೌಲ್ಯಗಳು ಹೇಗೆ ಕುಸಿಯುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಸ್ಥಳಕ್ಕೆ ಬಾಗಲಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.