ಮನೆ ರಾಜ್ಯ ತಿಮರೋಡಿ ವಿರುದ್ಧ ಎಸ್‌ಐಟಿಯಿಂದ; ಆರ್ಮ್ಸ್ ಆಕ್ಟ್ ಅಡಿ ಕೇಸ್‌ ದಾಖಲು

ತಿಮರೋಡಿ ವಿರುದ್ಧ ಎಸ್‌ಐಟಿಯಿಂದ; ಆರ್ಮ್ಸ್ ಆಕ್ಟ್ ಅಡಿ ಕೇಸ್‌ ದಾಖಲು

0

ಮಂಗಳೂರು : ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿದೆ. ಎಸ್‌ಪಿ ಸೈಮನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 26 ರಂದು ಚಿನ್ನಯ್ಯನನ್ನು ತಿಮರೋಡಿಯ ನಿವಾಸಕ್ಕೆ ಕರೆದುಕೊಂಡು ಬಂದು ಎಸ್‌ಐಟಿ ಶೋಧಕಾರ್ಯ ನಡೆಸಿತ್ತು. ತಿಮರೋಡಿ ಮನೆಯಲ್ಲಿ ಎಸ್ಐಟಿ ಶೋಧ ಕಾರ್ಯ ನಡೆಸುವ ಸಂದರ್ಭ ಬಂದೂಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿತ್ತು.

25.5 ಇಂಚು ಉದ್ದದ ಮರದ ಹಿಡಿಕೆಯುಳ್ಳ 2 ತಲವಾರು, ಒಂದು ಬಂದೂಕು ಸೇರಿದಂತೆ 44 ಸ್ವತ್ತುಗಳನ್ನ ಎಸ್‌ಐಟಿ ವಶಪಡಿಸಿಕೊಂಡಿತ್ತು. ಈಗ ಆರ್ಮ್ಸ್ ಆಕ್ಟ್ 1959 ಸೆಕ್ಷನ್ 25(1), 25 (1-A), 24(1-B)(A)ಅಡಿಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿದೆ.