ಮನೆ ರಾಜ್ಯ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್‌ಐಟಿಯಿಂದ ಅಸ್ಥಿಪಂಜರದ ಶೋಧ ಕಾರ್ಯ

ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್‌ಐಟಿಯಿಂದ ಅಸ್ಥಿಪಂಜರದ ಶೋಧ ಕಾರ್ಯ

0

ಮಂಗಳೂರು : ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ರಹಸ್ಯ ಭೇದಿಸಲು ಎಸ್‌ಐಟಿ ಮುಂದಾಗಿದ್ದು, ಬಂಗ್ಲೆಗುಡ್ಡೆದ ದಟ್ಟಾರಣ್ಯದಲ್ಲಿ ಇಂದು ಎಸ್‌ಐಟಿ ಹೋಗಿದೆ.

ಅರಣ್ಯ ಇಲಾಖೆ ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮಹಜರಿಗೆ ಹಾಜರಿರಲು ಸೂಚನೆ ನೀಡಲಾಗಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ.

ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಪಂಜರಗಳನ್ನ ಮಹಜರು ನಡೆಸಿ ತೆಗೆಯುವ ಸಾಧ್ಯತೆ ಇದೆ. ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ನಡೆಸೋದಿಲ್ಲ. ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್‌ಐಡಿ ಮಹಜರು ಮಾಡಲಿದೆ.

ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವಿಠಲ್ ಗೌಡ ಹೇಳಿಕೆ ನೀಡಿದ್ದ. ಬುರುಡೆ ತಂದ ಹಾಗೂ ಅಡಗಿಸಿಟ್ಟ ಜಾಗದಲ್ಲಿ ಎರಡು ಬಾರಿ ಮಹಜರು ನಡೆಸಲಿದೆ. ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಮಾನವನ ಕಳೇಬರ ಇದೆ ಎಂದು ಹೇಳಿದ್ದ. ಮಹಜರು ವೇಳೆ ಸಾಕಷ್ಟು ಅಸ್ಥಿಪಂಜರ ಕಾಣಸಿಕ್ಕಿದೆ ಎಂದಿದ್ದ.

ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಬಂಗ್ಲೆಗುಡ್ಡೆಗೆ ತಂಡ ತೆರಳಿದೆ. ಸೋಕೊ ತಂಡ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಸಾಥ್ ನೀಡಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭವಾಗಲಿದೆ. 13 ಎಕರೆ ವಿಸ್ತೀರ್ಣದಲ್ಲಿರೋ ಬಂಗ್ಲೆಗುಡ್ಡೆ ಪೂರ್ತಿ ಎಸ್‌ಐಟಿ ಶೋಧ ನಡೆಸಲಿದೆ.